ಅಗಲಿದ ಅಕ್ಕನ ಹುಟ್ಟುಹಬ್ಬ ನೆನೆದು ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರಾದ ಭವ್ಯಾ ಗೌಡ

By Gowthami K  |  First Published Dec 5, 2024, 1:13 AM IST

ಬಿಗ್ ಬಾಸ್ ಕನ್ನಡ 11ರಲ್ಲಿ ಭವ್ಯಾ ಗೌಡ ತಮ್ಮ ಅಗಲಿದ ಅಕ್ಕನನ್ನು ನೆನೆದು ಭಾವುಕರಾದರು. ತ್ರಿವಿಕ್ರಮ್‌ ಅವರೊಂದಿಗೆ ಮಾತನಾಡುತ್ತ ಅಕ್ಕನ ನೆನಪುಗಳನ್ನು ಹಂಚಿಕೊಂಡರು. ತ್ರಿವಿಕ್ರಮ್ ಭವ್ಯಾಗೆ ಮುಂದಿನ ಟಾಸ್ಕ್‌ಗಳಿಗೆ ಸಲಹೆಗಳನ್ನು ನೀಡಿದರು.


ಬಿಗ್ ಬಾಸ್ ಕನ್ನಡ 11ರ 10ನೇ ವಾರ ತಮ್ಮ ಕುಟುಂಬದಿಂದ ಶಾಶ್ವತವಾಗಿ ದೂರ ಇರುವ ಅಕ್ಕನನ್ನು ನೆನೆದು ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ.  ತ್ರಿವಿಕ್ರಮ್‌ ಮತ್ತು ಭವ್ಯಾ ಗೌಡ ಬಿಗ್‌ಬಾಸ್‌ ಮನೆಯಲ್ಲಿ ಅತ್ಯಂತ ಹತ್ತಿರವಾಗುತ್ತಿದ್ದಾರೆ. ಇಬ್ಬರ ನಡುವೆ ಗೆಳತನವನ್ನು ಮೀರಿದ ಬಂಧವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಊಟ, ತಿಂಡಿ , ವ್ಯಾಯಾಮ ಎಲ್ಲಾ ಕಡೆಯಲ್ಲೂ ಜೋಡಿಯಾಗಿಯೇ ಕಾಣಿಸುತ್ತಾರೆ, ಸೋಷಿಯಲ್‌ ಮೀಡಿಯಾದಲ್ಲಿ ತ್ರಿವ್ಯ ಅಂದೆಲ್ಲ ಪೇಜ್ ಕ್ರೀಯೇಟ್‌ ಮಾಡಿ ವೀಕ್ಷಕರು ಇವರಿಬ್ಬರನ್ನೂ ತೋರಿಸುತ್ತಿದ್ದಾರೆ.

66 ನೇ ದಿನ ಮನೆಯ ಗಾರ್ಡನ್ ಏರಿಯಾದಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್‌ ಮಾತನಾಡುತ್ತಿದ್ದರು.  ನೀವು ಬೆಳಗ್ಗೆ ನನ್ನ ಅಕ್ಕನ ಬರ್ತಡೇ ಅಂತ ನೆನಪಿಸಿರದಿದ್ದರೆ ಒಳ್ಳೆಯದಿತ್ತು ಎಂದರು. ಅದಕ್ಕೆ ತ್ರಿವಿಕ್ರಮ್‌ ಬಾ ಈಗಲೇ ವಿಶ್ ಮಾಡೋಣ  ನಾಳೆ ಟೆಲಿಕಾಸ್ಟ್ ಆಗುತ್ತೆ ಎಂದರು.  ಅದಕ್ಕೆ ಭವ್ಯಾ ನೋ, ನಿಮಗೆ ನಾನು ಹೇಳೋದು ಅರ್ಥ ಆಗುತ್ತಿಲ್ಲ ಎಂದು ವಿಶ್ ಮಾಡಲು ನಿರಾಕರಿಸಿದರು. ಇದಕ್ಕೆ ತ್ರಿವಿಕ್ರಮ್‌  ನನಗೆ ತುಂಬಾ ಕೆಲಸ ಇದೆ. ಏನೆಂದು ಹೇಳು. ನೀನು ನನಗೆ ಡಿಸ್‌ರೆಸ್ಪೆಕ್ಟ್ ಮಾಡುತ್ತಿದ್ದೀ, ಇದು ತುಂಬಾ ಕೆಟ್ಟದ್ದು. ಇಷ್ಟು ಕೇಳಬೇಕಾ ಒಬ್ಬರತ್ರ ಏನಾದ್ರೂ ಆಯ್ತಾ? ಹೇಳಿ ಅಂತ ಅಂದರು.

Latest Videos

ವಿಶ್ವದ ಟಾಪ್ 10 ಫ್ರೈಡ್ ಚಿಕನ್ ಪಟ್ಟಿಯಲ್ಲಿ ದಕ್ಷಿಣ ಭಾರತದ ಚಿಕನ್ 65ಗೆ ಮೂರನೇ ಸ್ಥಾನ!

ಇದಕ್ಕೆ ಉತ್ತರ ನೀಡಿದ ಭವ್ಯಾ, ತ್ರಿವಿಕ್ರಮ್‌ ಅವಳು ನಮ್ಮ ಜೊತೆಗಿಲ್ಲ. ಅವಳು ನಮ್ಮನ್ನು ಶಾಶ್ವತವಾಗಿ ಬಿಟ್ಟು ಹೋಗಿದ್ದಾಳೆ ಎಂದು ಕಣ್ಣೀರು ಹಾಕುತ್ತಾ ಹೋದರು. ಇಷ್ಟು ಇವರಿಬ್ಬರ ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. 

undefined

ಹೌದು ಭವ್ಯಾ ಗೌಡ ಅವರು ಸೇರಿ ಅವರ ಮನೆಯಲ್ಲಿ ಮೂವರು ಸಹೋದರಿಯರು. ಭವ್ಯಾ ಕೊನೆಯವರಾಗಿದ್ದಾರೆ. ಮೊದಲನೇ ಅಕ್ಕನಿಗೆ ಮದುವೆ ಆಗಿತ್ತು. ಪುಟ್ಟ ಮಗು ಕೂಡ ಇತ್ತು. ಆದರೆ ಅನಾರೋಗ್ಯದಿಂದ ಅಗಲಿದರು. ಎರಡನೇ ಸಹೋದರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಮೂರನೆಯವರು ಭವ್ಯಾ ಗೌಡ. ಕಳೆದ ಆಗಸ್ಟ್ ನಲ್ಲಿ ಭವ್ಯಾ ಅವರು ಮೊದಲನೇ ಅಕ್ಕನ ಮಗಳನ್ನು ಸಹೋದರಿ ಎಂದು ಪರಿಚಯ ಮಾಡಿಕೊಟ್ಟಿದ್ದರು. ಅಕ್ಕ ಅಗಲಿದ ಮೇಲೆ ಅವರ ಮಗಳನ್ನು ಇವರ ಮನೆಯಲ್ಲೇ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಸ್ಕೂಲಿಗೆ ಹೋಗುತ್ತಿರುವ ಪುಟ್ಟ ಹುಡುಗಿ ಆಗಿರುವ ಕಾರಣ ಕ್ಯಾಮೆರಾದಿಂದ ದೂರವಿಟ್ಟಿದ್ದಾರೆ. ಇಂದು ಬಿಗ್‌ಬಾಸ್‌ ಮನೆಯಲ್ಲಿ ಅಗಲಿದ ಅಕ್ಕನನ್ನು ನೆನೆದು ಕಣ್ಣೀರಾದರು ಭವ್ಯಾ ಗೌಡ.

ವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಗಳಲ್ಲಿ ಸ್ಥಾನ ಪಡೆದ ಇಂಡಿಗೋ!

ಈ ನಡುವೆ ತಿಂಡಿ ಮಾಡುತ್ತಿದ್ದ ಸಮಯದಲ್ಲಿ ತ್ರಿವಿಕ್ರಮ್‌ , ಭವ್ಯಾಗೆ ಸಲಹೆಗಳನ್ನು ನೀಡಿದ್ದಾರೆ. ಈಗಲಿಂದ ಮುಂದಿನ ದಿನಗಳಲ್ಲಿ ಟಾಸ್ಕ್ ತುಂಬಾ ಟಫ್‌ ಇರುತ್ತೆ. ಯಾರು ಯಾರು ಜೊತೆಯಾಗಿರುತ್ತಾರೆ ಅವರನ್ನು ಬ್ರೇಕ್ ಮಾಡುವ ಚಾನ್ಸಸ್‌ ತುಂಬಾ ಇರುತ್ತೆ. ಟಾಸ್ಕ್‌ ನಲ್ಲಿ ಜಗಳ ಮಾಡಿಸುತ್ತಾರೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ. ಎಲ್ಲರದ ಮೇಲೆ ಕಣ್ಣಿರಲಿ. ಆರಾಮವಾಗಿ ಎಲ್ಲರ ಜೊತೆಗೆ ಮಾತನಾಡು ಸಂಜೆ ಬಂದು ಗೂಡಿಗೆ ಸೇರು.  ಕೋಪ ಕಡಿಮೆ ಇರಲಿ, ತಾಳ್ಮೆ ಇರಲಿ ಏನೇ ನಿರ್ಧಾರ ತೆಗೆದುಕೊಂಡರು ಭವ್ಯಾ ತೆಗೆದುಕೊಳ್ಳುತ್ತಿದ್ದಾಳೆಂದು ಅನಿಸಬೇಕು. ಕಾರಣವಿಲ್ಲದೆ ಕೋಪ ಬೇಡ.

 ನಿನ್ನೆ ಮೊನ್ನೆ ಬಂದವ (ರಜತ್‌) ಅಷ್ಟು ಕ್ಲೋಸ್‌ ಆಗಿ ಎಲ್ಲರ ಜೊತೆಗೆ ಓಡಾಡುತ್ತಿದ್ದಾನೆ. ಅವನಿಗಿರುವ ಟೆಂಪರ್ ಹೇಗೆ? ಅವನ ಮೆಂಟಾಲಿಟಿ ಹೇಗೆ? ಹೊರಗೆ ಹೇಗೆ ಅಂತ ನನಗೂ ಗೊತ್ತು. ಕೂದಲನ್ನು ಇಷ್ಟಪಡುವವರು ಟಕ್‌ ಅಂತ ಕುಳಿತುಕೊಳ್ಳುತ್ತಾರೆ ಅಂದ್ರೆ ಯೋಚನೆ ಮಾಡಬೇಕು. ಇಲ್ಲಿಂದ 4 ವಾರ ಹೇಗೆ ಇರುತ್ತೇವೆ ಎಂಬುದು ತುಂಬಾ ಮುಖ್ಯ ಎಂದು ಸಲಹೆ ಕೊಟ್ಟರು. 

click me!