ಬಿಗ್ ಬಾಸ್ ಮನೆಯಿಂದ ಹೊರಹಾಕಲು ಅನುಷಾ ರೈ ನೇರ ನಾಮಿನೇಟ್; ಐಶ್ವರ್ಯ ವಿರುದ್ಧ ಕುಸ್ತಿ ಆರಂಭ!

By Sathish Kumar KH  |  First Published Oct 14, 2024, 3:20 PM IST

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶಿಶಿರ್ ಅವರು ಅನುಷಾ ರೈ ಅವರನ್ನು ಮನೆಯಿಂದ ಹೊರಗೆ ಹಾಕಲು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅನುಷಾ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಇತರ ಸದಸ್ಯರ ನಡುವೆಯೂ ವಾಗ್ವಾದ ನಡೆದಿದೆ.


ಬೆಂಗಳೂರು (ಅ.14): ಬಿಗ್ ಬಾಸ್ ಕನ್ನಡ ಸೀಸನ್ 11 ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ಎಂದೇ ಕುಖ್ಯಾತಿಗೆ ಭಾಜನವಾಗುವ ಲಕ್ಷಣಗಳು ಕಂಡುಬರುತ್ತಿವೆ. ಕೇವಲ ಮೂರನೇ ವಾರದಲ್ಲಿ ಬಿಗ್‌ಬಾಸ್ ಕಂಟೆಸ್ಟೆಂಟ್‌ಗಳಿಂದ ಎಲ್ಲರೂ ಬೇಸತ್ತಿದ್ದಾರೆ. ಇನ್ನು ಇದೀಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಶಿಶಿರ್ ಅವರು ಧರ್ಮ ಅವರೊಂದಿಗೆ ಲವ್‌ ವಿಚಾರವನ್ನು ಮುಚ್ಚಿಟ್ಟ ಅನುಷಾ ರೈ ಅವರನ್ನು ಮನೆಯಿಂದ ಹೊರಗೆ ಹಾಕಲು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ನನ್ನನ್ನು ಬಿಟ್ಟು ಉಳಿದವರು ಕ್ಯಾಪ್ಟನ್‌ಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಅನುಷಾ ರೈ ಕಿಡಿಕಾರಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಅತಿ ಹೆಚ್ಚು ವಿವಾದಾತ್ಮಕ ಘಟನೆಗಳು ನಡೆಯುತ್ತಿವೆ. ಬಿಗ್ ಬಾಸ್ ಥೀಮ್ ಅನ್ನು ಸ್ವರ್ಗ ನರಕ ಎಂದು ಎರಡು ಭಾಗ ಮಾಡಿದ್ದರಿಂದ ಉಂಟಾದ ವಿವಾದ ಇದೀಗ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರೇ ತಮ್ಮ ನಿರೂಪಣೆ ಕೊನೆಗೊಳಿಸುವ ಹಂತಕ್ಕೆ ತಲುಪಿದೆ. ಇದರ ಜೊತೆಗೆ, ಮನೆಯಲ್ಲಿನ ಕಂಟೆಸ್ಟೆಂಟ್‌ಗಳ ನಡೆಯಿಂದ ಬೇಸತ್ತಿರುವ ಬಿಗ್ ಬಾಸ್ ನಾನು ನಿಮ್ಮ ಮನೆಯಲ್ಲಿರೊಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಎಲ್ಲರೂ ಸೇರಿಕೊಂಡು ಇದೀಗ ಅನುಷಾ ರೈಳನ್ನು ನೇರವಾಗಿ ಮನೆಯಿಂದ ಹೊರಗೆ ಹಾಕಲು ನಾಮಿನೇಟ್ ಮಾಡಾಗಿದೆ. ಇದರಿಂದ ಅನುಷಾ ರೈ ಕೂಡ ತೀವ್ರ ಕೆಂಡಾಮಂಡಲ ಆಗಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಧರ್ಮ‌ ಬೈಕ್ ಹಿಂದೆ ಅನುಷಾ, ಬಿಗ್ ಬಾಸ್ ಲವ್ ಕಪಲ್ ವಿಡಿಯೋ ವೈರಲ್

ಕ್ಯಾಪ್ಟನ್ ಶಿಶಿರ್ ಅವರು ಅನುಷಾ ರೈ ಅವರನ್ನು ಮನೆಯಿಂದ ಹೊರಗೆ ಹಾಕಲು ನೇರವಾಗಿ ನಾಮಿನೇಟ್ ಮಾಡಿ ಹಾಗಲಕಾಯಿ ಕಹಿ ರಸವನ್ನು ಕುಡಿಸುತ್ತಾರೆ. ಇದಕ್ಕೆ ಆಕ್ರೋಶ ಹೊರಹಾಕಿದ ಅನುಷಾ ರೈ, ನನಗೆ ಬಕೆಟ್ ಹಿಡಿಯೋದಕ್ಕೆ ಬರೊಲ್ಲ ಗುರು, ನಾನು ಇರೋದೇ ಹಿಂದೆ ಎಂದು ನಟಿ ಐಶ್ವರ್ಯಾ ಮುಂದೆ ಕುಳಿತು ಹೇಳುತ್ತಾರೆ. ಆದರೆ, ಇದನ್ನು ಸಹಿಸಿಕೊಳ್ಳದ ಐಶ್ವರ್ಯ ನೇರವಾಗಿ ಕ್ಯಾಪ್ಟನ್ ಎದುರಿಗೆ ಹೋಗಿ ಇಲ್ಲಿ ಬಕೆಟ್ ಹಿಡಿದುಕೊಂಡು ಓಡಾಡಿದ್ರೇನೆ ಸೇಫ್ ಆಗೋದು ಎನ್ನುವ ಮಾತನ್ನು ಹೇಳಿದ್ದಾಗಿ ಚರ್ಚೆ ಮಾಡುತ್ತಾಳೆ. ಇದರಿಂದ ಮತ್ತೆ ಕೋಪಗೊಂಡ ಅನುಷಾ ರೈ, ಮಗುನು ಚಿವುಟಿ ತೊಟ್ಟಿಲು ತೂಗುವುದು ಬೇಡ ಎಂದು ಐಶ್ವರ್ಯಗೆ ಸಿಟ್ಟಿನಿಂದಲೇ ತಿರುಗೇಟು ನೀಡುತ್ತಾರೆ. ಇದಾದ ನಂತರ ನೀವು ಬಕೆಟ್ ಹಿಡಿಯೋದು ಬಿಡ್ರಿ ಎಂದು ಹೇಳುತ್ತಾರೆ.

ಇದನ್ನೂ ಓದಿ: ನಟ ಪ್ರಥಮ್ 'ಡಿ ಬಾಸ್'ಗೆ ಹೆದರಿಕೊಂಡು ಬಕೆಟ್ ಹಿಡತವ್ನೆ ಎಂದ ಫ್ಯಾನ್ಸ್!

ಇದಕ್ಕೆ ಮತ್ತೆ ಸಿಟ್ಟಾದ ಐಶ್ವರ್ಯಾ ನೀನು ಹೇಳಿದ್ದನ್ನು ಕೇಳಿಸಿಕೊಂಡು ಕೂರುವುದಕ್ಕೆ ನಾನು ಇಲ್ಲಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಅನುಷಾ ರೈ ನೀನು ಹೋಗು ಅಲ್ಲಿ ಬಡ್ಕೋ ಬಾಯಿ ಎಂದು ಸಿಟ್ಟಿನಿಂದ ಹೇಳುತ್ತಾರೆ. ಇದರ ನಡುವೆ ನಟ ಉಗ್ರಂ ಮಂಜು ಅವರು ಸತ್ಯವೇ ನಮ್ಮ ತಾಯಿ, ತಂದೆ.. ಸತ್ಯವೇ ನಮ್ಮ ಬಂಧು ಬಳಗ ಎಂದು ಹಾಡು ಹೇಳುತ್ತಾ ಚಪ್ಪಾಳೆ ತಟ್ಟುತ್ತಾರೆ. ಈ ಮಾತು ಮನೆಯ ಕ್ಯಾಪ್ಟನ್ ಶಿಶಿರ್ ಹಾಗೂ ನೇರವಾಗಿ ನಾಮಿನೇಟ್ ಆದ ಅನುಷಾ ರೈ ಅವರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಆದರೆ, ಈ ವಾಗ್ವಾದ ಏನೆನ್ನುವುದನ್ನು ಇಂದಿನ ರಾತ್ರಿಯ ಸಂಚಿಕೆಯನ್ನು ನೋಡಬಹುದಾಗಿದೆ.

click me!