ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳೊಂದಿಗೆ ಐಶ್ ಪ್ರೀತಿ ಕಳ್ಳಾಟ, ಜೊತೆಗಿರುತ್ತೇನೆಂದ ಧರ್ಮ!

By Roopa Hegde  |  First Published Oct 3, 2024, 3:37 PM IST

ರಣಾಂಗಣವಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯ ಮಳೆಯಾಗ್ತಿದೆ. ಧರ್ಮ ಮೇಲೆ ಇಬ್ಬರು ಹುಡುಗಿಯರ ಕಣ್ಣು ಬಿದ್ದಿದೆ. ನರಕದಲ್ಲಿ ಅನುಷಾ, ಸ್ವರ್ಗದಲ್ಲಿ ಐಶ್ವರ್ಯ. ಯಾರಿಗೆ ಧರ್ಮಕೀರ್ತಿ ಅನ್ನೋದೇ ಈಗಿರುವ ಪ್ರಶ್ನೆ.
 


ಬಿಗ್ ಬಾಸ್ (Bigg Boss) ಮನೆಯಲ್ಲಿ ಹೊಸ ಲವ್ ಸ್ಟೋರಿ (Love Story) ಶುರುವಾದಂತಿದೆ. ನಟಿ ಐಶ್ವರ್ಯ ಸಿಂಧೋಗಿ (Aishwarya Sindhogi) ಹಾಗೂ ನಟ ರಂಜಿತ್ (Actor Ranjith) ಮಧ್ಯೆ ಏನೋ ನಡೆಯುತ್ತಿದೆ ಎಂದ್ಕೊಂಡಿದ್ದ ವೀಕ್ಷಕರಿಗೆ ಐಶು, ರಂಜಿತ್ ಅಲ್ಲ ನಟ ಧರ್ಮಕೀರ್ತಿ (Actor Dharmakeerthi) ಬುಟ್ಟಿಗೆ ಬಿದ್ದಿದ್ದಾರೆ ಎನ್ನುವ ಅನುಮಾನ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಐಶ್ವರ್ಯ, ಧರ್ಮಕೀರ್ತಿ ಅವರನ್ನು ಹಾಡಿ ಹೊಗಳಿದ್ದಾರೆ. ತಾನು ಧರ್ಮಗೆ ಬೀಳಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.

ನರಕದ ಕಡೆ ಹೋದ್ರೆ ಸ್ವರ್ಗದಲ್ಲಿರೋರು ಯಾರೋ ಕೋಪ ಮಾಡ್ಕೊಳ್ತಾರೆ ಅಂತ ಯಮುನಾ ಶ್ರೀನಿಧಿ, ಧರ್ಮ ಬಳಿ ಹೇಳ್ತಾರೆ. ನಂತ್ರ ತಾನೇಕೆ ಧರ್ಮ ಮೇಲೆ ಇಂಪ್ರೆಸ್ ಆದೆ ಎನ್ನುವುದನ್ನು ಐಶ್ವರ್ಯ ಹೇಳ್ತಾರೆ. ಧರ್ಮ ಸಾಫ್ಟ್ ಆಗಿ ಮಾತನಾಡೋದು, ಮುದ್ದಾಗಿ ಹಣ್ಣು ಕಟ್ ಮಾಡೋದು ಎಲ್ಲ ಐಶ್ವರ್ಯಗೆ ಇಷ್ಟವಂತೆ. ಅಷ್ಟೇ ಅಲ್ಲ ಯಾವಾಗ ಫುಲ್ ಬಿದ್ದೋದೆ ಗೊತ್ತಾ ಎನ್ನುತ್ತಾ ಮಾತು ಮುಂದುವರೆಸ್ತಾರೆ ಐಶ್ವರ್ಯ. ನರಕದಲ್ಲಿರೋ ಅನುಷಾ ಬಂದ್ರೆ ಈಗ ಏನ್ ಮಾಡ್ತೀರಿ ಅಂತ ಯಮುನಾ ಕೇಳುವ ಪ್ರಶ್ನೆಗೆ ಜೊತೆಯಾಗಿ ಚೆನ್ನಾಗಿರೋಣ ಎನ್ನುತ್ತಾರೆ ಧರ್ಮ. 

Tap to resize

Latest Videos

undefined

ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್

ಕಲರ್ಸ್ ಕನ್ನಡ, ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಅತ್ಲಾಗೆ ಅನುಷಾ, ಇತ್ಲಾಗೆ ಐಶ್ವರ್ಯಾ, ನಡುವೆ ಪ್ರೀತಿಯ ಧರ್ಮ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ವೀಕ್ಷಕರು, ಅಂತೂ ಬಿಗ್ ಬಾಸ್ ಮನೆಯಲ್ಲಿ ಲವ್ ಶುರುವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ. ಧರ್ಮಕೀರ್ತಿ ನಾಟಕ ಆಡ್ತಿದ್ದಾರೆ ಅಂದ್ರೆ ಮತ್ತೆ ಕೆಲವರು ಐಶ್ವರ್ಯ ವರ್ತನೆಯನ್ನು ಖಂಡಿಸಿದ್ದಾರೆ. ಎಲ್ಲರ ಗಮನವನ್ನು ತಮ್ಮತ್ತ ಸೆಳೆಯಲು ಐಶ್ವರ್ಯ ಈ ಡ್ರಾಮಾ ಮಾಡ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬೇರೆ ಯಾರನ್ನೂ ಜೋಡಿಯಾಗಿ ನೋಡೋದು ಅವರಿಗೆ ಇಷ್ಟವಿಲ್ಲ. ಮೊದಲು ರಂಜಿತ್ ಜೊತೆ ಆಯ್ತು ಈಗ ಧರ್ಮಕೀರ್ತಿ ಸುದ್ದಿಗೆ ಹೋಗಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ನಿನ್ನೆ ಅವರು, ಇಂದು ಇವರು, ಕೊನೆಗೆ ಯಾರು ತಾಯಿ ಅಂತ ಐಶ್ವರ್ಯಗೆ ಪ್ರಶ್ನೆ ಮಾಡಿದ ನೆಟ್ಟಿಗರು, ಧರ್ಮ, ಇವರಂಥವರನ್ನು ನಂಬಬೇಡಿ. ನಿಮಗೆ ಮೋಸ ಮಾಡಿ ತಾವು ಗೆಲ್ಲೋ ಪ್ಲಾನ್ ಮಾಡ್ತಾರೆ ಎಂದಿದ್ದಾರೆ ಧರ್ಮ ಫ್ಯಾನ್ಸ್. ನರಕದಲ್ಲಿ ಒಬ್ಬರು, ಸ್ವರ್ಗದಲ್ಲಿ ಒಬ್ಬರು ಬೇಕಾ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

ಮತ್ತೆ ಕೆಲವರು ಅಲ್ಲೇ ಜೋಡಿ ಕೂಡಿಸುವ ಕೆಲಸ ಮಾಡ್ತಿದ್ದಾರೆ. ತ್ರಿವಿಕ್ರಮ್ ಮತ್ತು ಅನುಷಾ ಬೆಸ್ಟ್ ಜೋಡಿ ಎನ್ನುತ್ತಿದ್ದಾರೆ ವೀಕ್ಷಕರು. ನಿವೇದಿತಾ- ಚಂದನ್ ಶೆಟ್ಟಿ ನೆನೆದಿರುವ ಫ್ಯಾನ್ಸ್, ಅವರಂತೆ ಮಾಡ್ಕೊಳ್ಬೇಡಿ ಅಂತ ಸಲಹೆ ನೀಡಿದ್ದಾರೆ. ಧರ್ಮಗೆ ಇಬ್ಬರು ಹುಡುಗಿಯರು, ಲವರ್ ಬಾಯ್ ಆಗ್ತಿದ್ದಾರೆ ಧರ್ಮ ಅಂತ ಕಮೆಂಟ್ ಮಾಡಿರುವ ಫ್ಯಾನ್ಸ್, ಧರ್ಮ – ಐಶ್ ಜೋಡಿ ಪರ್ಫೆಕ್ಟ್ ಅಂತ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅನುಷಾ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಲ ಫ್ಯಾನ್ಸ್, ಐಶ್ವರ್ಯ, ಧರ್ಮನ್ನ ಅನುಷಾಗೆ ಬಿಟ್ಬಿಡಿ ಎಂದಿದ್ದಾರೆ.

ಸಮಂತಾ-ಚೈತನ್ಯ ಡಿವೋರ್ಸ್: ಮೂರನೇಯವರ ಮಾತಿಗೆ ಒಗ್ಗಟ್ಟಾಗಿ ಕುಟುಂಬದ ವಿರೋಧ!

ಬಿಗ್ ಬಾಸ್ ಮನೆಗೆ ಜೋಡಿಯಾಗಿಯೇ ಬಂದವರು ನಟಿ ಅನುಷಾ ಹಾಗೂ ಧರ್ಮಕೀರ್ತಿ. ಅನುಷಾಗೆ ವಿಶ್ ಮಾಡಲು ಧರ್ಮಕೀರ್ತಿ ಕುಟುಂಬ ಸಮೇತ ಬಂದಿದ್ದಾರೆ ಎಂದಿದ್ದ ಕಿಚ್ಚ ಸುದೀಪ್, ಇಬ್ಬರಿಗೂ ವೇದಿಕೆ ಮೇಲೆಯೇ ಹಿರಿಯರಿಂದ ಆಶೀರ್ವಾದ ಮಾಡಿಸಿದ್ದರು. ಧರ್ಮ ಹಾಗೂ ಅನುಷಾ ಒಟ್ಟಿಗೆ ಸಿನಿಮಾದಲ್ಲಿ ಕೂಡ ನಟಿಸಿದ್ದು, ಇಬ್ಬರೂ ಆಪ್ತ ಸ್ನೇಹಿತರು. ಸುದೀಪ್ ಮಾತಿನ ನಂತ್ರ ಇಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಏನೋ ಇದೆ ಎಂದು ಭಾವಿಸಿರುವ ಫ್ಯಾನ್ಸ್, ಬಿಗ್ ಬಾಸ್ ಮನೆಯಲ್ಲಿ ಈ ಜೋಡಿಯನ್ನು ಕಣ್ತುಂಬಿಕೊಳ್ಬಹುದು ಅಂದ್ಕೊಂಡಿದ್ದರು. ಆದ್ರೀಗ ಐಶ್, ಧರ್ಮ ಹಿಂದೆ ಬಿದ್ದಿದ್ದು, ಜೋಡಿ ಚೇಂಜ್ ಆಗುತ್ತಾ ಕಾದುನೋಡ್ಬೇಕಿದೆ. 

click me!