ಬಿಗ್ ಬಾಸ್ ಜಯಶ್ರೀ ಬಗ್ಗೆ ಸತ್ಯ ಬಿಚ್ಚಿಟ್ಟ ಮಾಜಿ ಬಾಯ್‌ಫ್ರೆಂಡ್ ಸ್ಟೀವಿನ್; ಸಾಲ ಮಾಡಿದ್ದು ನಿಜವಂತೆ!

Published : Nov 12, 2024, 09:07 AM ISTUpdated : Nov 12, 2024, 09:08 AM IST
ಬಿಗ್ ಬಾಸ್ ಜಯಶ್ರೀ ಬಗ್ಗೆ ಸತ್ಯ ಬಿಚ್ಚಿಟ್ಟ ಮಾಜಿ ಬಾಯ್‌ಫ್ರೆಂಡ್ ಸ್ಟೀವಿನ್; ಸಾಲ ಮಾಡಿದ್ದು ನಿಜವಂತೆ!

ಸಾರಾಂಶ

ಜಯಶ್ರೀ ಬಗ್ಗೆ ಸ್ಟೀವನ್ ಮಾತನಾಡಿರುವ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಇಂತಹ ಒಳ್ಳೆ ಹುಡುಗನನ್ನು ಕಳೆದುಕೊಂಡು ಬಿಟ್ಟೆ ಎಂದ ನೆಟ್ಟಿಗರು....   

ಕನ್ನಡ ಚಿತ್ರರಂಗದಲ್ಲಿ ಇದ್ದ ಓನ್ ಆಂಡ್ ಓನ್ಲಿ ಮಾರಿ ಮುತ್ತು ಮೊಮ್ಮಗಳು ಜಯಶ್ರೀ ಇಂಡಸ್ಟ್ರಿ ಮತ್ತು ಬ್ಯುಸಿನೆಸ್‌ ಪ್ರಪಂಚದಲ್ಲಿ ಸಖತ್ ಹೆಸರು ಮಾಡಿದ್ದಾರೆ. ಬ್ಯೂಟಿ ಸಲೂನ್ ಓಪನ್ ಮಾಡಿರುವ ನಟಿ ಈ ಹಿಂದೆ ಬಿಗ್ ಬಾಸ್ ಓಟಿಟಿ ಸೀನಸ್ 1ರಲ್ಲಿ ಸ್ಪರ್ಧಿಸಿದ್ದರು ಹಾಗೂ ತಮ್ಮ ಬಾಯ್‌ಫ್ರೆಂಡ್‌ ಆಗಿದ್ದ ಸ್ಟೀವಿನ್‌ ಜೊತೆ ರಾಜಾ ರಾಣಿ ರೀಲೋಡೆಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಯಶ್ರೀ ಮತ್ತು ಸ್ಟೀವಿನ್‌ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವ ಸತ್ಯ ಪ್ರಪಂಚದ ಜೊತೆ ಹಂಚಿಕೊಂಡರು ಆದರೆ ಕಾರಣಾಂತರಗಳಿಂದ ಕಳೆದ ತಿಂಗಳು ಬ್ರೇಕಪ್ ಮಾಡಿಕೊಂಡ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಜಯಶ್ರೀ ಬ್ರೇಕಪ್ ವಿಚಾರ ದೊಡ್ಡ ಸುದ್ದಿ ಮಾಡಿದೆ. ಈ ನಡುವೆ ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸ್ಟೀವಿನ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟೀವಿನ್ ಹೇಳಿಕೆಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ, ಇಂತಹ ಒಳ್ಳೆ ಹುಡುಗನನ್ನು ಜಯಶ್ರೀ ಕಳೆದುಕೊಂಡಿದ್ದಾರೆ ಕಷ್ಟದಲ್ಲಿ ಜೊತೆಗಿದ್ದ ಹುಡುಗನ ಕೈ ಬಿಟ್ಟಿದ್ದಾರೆ ಎಂದು ನೆಗೆಟಿವ್ ಟ್ರೋಲ್ ಮಾಡುತ್ತಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ, ಕಿಶನ್ ಜೊತೆ ಡ್ಯಾನ್ಸ್ ಆಡದ ಹುಡುಗಿ ಇಲ್ಲ; ರೊಮ್ಯಾನ್ಸ್‌ ನೋಡಿ

'ನಾನು ಮೂಲತಃ ಮಂಗಳೂರಿನವರು, ಗ್ಲಾಮ್‌ ರೂಮ್‌ ಸಲೂನ್‌ನಲ್ಲಿ ಸರ್ವಿಸ್ ಪಡೆಯಲು ಮೊದಲು ಕ್ಲೈಂಟ್ ಆಗಿ ಬಂದಿದ್ದು ಅದಾದ ಮೇಲೆ ರೆಗ್ಯೂಲರ್ ಆಗಿ ಬರಲು ಶುರು ಮಾಡಿ ಅಲ್ಲಿಂದ ನಮ್ಮ ಸ್ನೇಹ ಬೆಳೆಯಿತ್ತು. ಅಲ್ಲಿಂದ ಮುಂದುವರೆಸಿಕೊಂಡು ಹೋಗಲು ನಿರ್ಧಾರ ಮಾಡಿದ್ದು. ಜಯಶ್ರೀ ಮತ್ತು ನನ್ನ ಫ್ಯಾಮಿಲಿ ನಡುವೆ ಬಾಂಡಿಂಗ್ ತುಂಬಾ ಚೆನ್ನಾಗಿದೆ. ನಾನು ಬೆಳೆದು ಬಂದ ರೀತಿ ಹಾಗೂ ಜಯಶ್ರೀ ಬಂದ ರೀತಿ ಒಂದೇ ಇರುವ ಕಾರಣ ನಮ್ಮ ಮೈಂಡ್‌ಸೆಟ್‌ ಆಗುತ್ತದೆ. ಜಯಶ್ರೀ ಆರಂಭದಲ್ಲಿ ಫ್ಯಾಮಿಲಿ ಜೊತೆ ಹೇಗಿದ್ದರೂ ಈಗ ಹೇಗಿದ್ದರೂ ಅನ್ನೋದು ಅವರೇ ಹೇಳಿಕೊಂಡಿದ್ದಾರೆ, ಸಲೂನ್‌ ತೆರೆದು 6 ತಿಂಗಳ ನಂತರ ಫ್ಯಾಮಿಲಿ ಜೊತೆ ಚೆನ್ನಾಗಿದಿದ್ದಾರೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಜಯಶ್ರೀ ಮನೆಯಿಂದ ಹೊರ ಬಂದಿದ್ದು, ಕಷ್ಟದಲ್ಲಿ ಇದ್ದಾಗ ಯಾರೂ ನನಗೆ ಸಹಾಯ ಮಾಡಲಿಲ್ಲ ಆದರೆ ಈಗ ನನ್ನ ಪರ ಜನರು ಈಗ ನಿಂತಿದ್ದಾರೆ ಎಂದು ಹೇಳಿಕೊಂಡಿದ್ದಾರೆ' ಎಂದು ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ಸ್ಟೀವಿನ್ ಮಾತನಾಡಿದ್ದರು.

'ನವಗ್ರಹ' ಕ್ಯಾಡ್ಬರಿ ಹುಡುಗನಿಗೆ ಚಪಾತಿ ಟೈಟಲ್ ಕೊಟ್ಟ ಕಿಚ್ಚ ಸುದೀಪ್, ನಾಲಾಯಕ್ ಎಂದ ಮನೆ

'ಸೂಲ್‌ನಲ್ಲಿ ಆರಂಭದಿಂದ ಕಟ್ಟಿರುವುದು ಜಯಶ್ರೀ, ನಾನು ಖಾಸಗಿ ಕಂಪನಿಯಲ್ಲಿ ಹೆಚ್‌ಆರ್‌ ಆಗಿದ್ದೆ ಮನೆಯಿಂದ ಕೆಲಸ ಮಾಡುತ್ತಿದ್ದ ಕಾರಣ ಸದಾ ಸಲೂನ್‌ನಲ್ಲಿ ಇದ್ದೆ. ಅದಾದ ಮೇಲೆ ಮತ್ತೊಂದು ಬ್ರಾಂಚ್‌ ಓಪನ್ ಮಾಡಲು ಯೋಚನೆ ಶುರು ಮಾಡಿದಾಗ ನಾನು ಅವರ ಜೊತೆ ಕೈ ಜೋಡಿಸಿದೆ. ಪಾರ್ಟನರ್‌ ಆಗಿ ಬರುತ್ತೀನಿ ಎಂದವರು ಹಿಂದೆ ಸರೆದಾಗ ಜಯಶ್ರೀ ಬ್ಯಾಂಕ್ ಲೋನ್‌ ಪಡೆಯಲು ಮುಂದಾಗುತ್ತಾರೆ, ಸಾಲ ಸಿಗುತ್ತದೆ ಆದರೆ ಕೋವಿಡ್‌ ಬಂದ ಕಾರಣ ಕಷ್ಟ ಎದುರಿಸುತ್ತಾರೆ. ಕಷ್ಟದಲ್ಲಿ ಇದ್ದಾಗ ಎರಡು ತಿಂಗಳ ಕಾಲ ಡಿಪ್ರೆಶನ್‌ಗೆ ಜಾರುತ್ತಾರೆ...ಈ ನಡುವೆ ತಿಂಗಳು ತಿಂಗಳು ಬ್ಯುಸಿನೆಸ್‌ ಚೆನ್ನಾಗಿ ನಡೆಯಲು ಶುರು ಮಾಡಿತ್ತು. ಜಯಶ್ರೀ ತಮ್ಮ ಜೀವನದಲ್ಲಿ ನಡೆದ ಹಳೆ ಘಟನೆ ಬಗ್ಗೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಆಗ ನನಗೆ ಯಾವುದೇ ಬೇಸರ ಇರಲಿಲ್ಲ. ನನಗೆ ಗೊತ್ತಿಲ್ಲದಿದ್ದರೆ ಬೇಸರ ಆಗುತ್ತಿತ್ತು ಆದರೆ ಗೊತ್ತಿರುವ ಸತ್ಯ ನನಗೆ ಹೇಳುವುದರಲ್ಲಿ ತಪ್ಪು ಅನಿಸುವುದಿಲ್ಲ' ಎಂದು ಜಯಶ್ರೀ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ