
ಬಾಲಿವುಡ್ ನಟ, ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್-ಹಿಂದಿಯ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2ರಂದು ಹೃದಯಘಾತದಿಂದ ಕೊನೆಯುಸಿರೆಳೆದರು. 40ರ ಸಿದ್ಧಾರ್ಥ್ ಅಗಲಿಕೆಗೆ ಬೆಳ್ಳಿತೆರೆ, ಕಿರುತೆರೆ ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದೆ. ಯಾರೂ ಕೂಡ ಇನ್ನೂ ಶಾಕ್‌ನಿಂದ ಹೊರ ಬಂದಿಲ್ಲ. ಹೀಗಿರುವಾಗಲೇ ಬಿಗ್ ಬಾಸ್ ಸ್ಪರ್ಧಿ ಜಸ್ಲೀನ್ ಮಥಾರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿದ್ಧಾರ್ಥ್ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ, ಮಾನಸಿಕವಾಗಿ ಕುಗ್ಗಿರುವ ಜಸ್ಲೀನ್ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ತಮ್ಮ ದುಃಖದ ಬಗ್ಗೆ ಮಾತನಾಡಿರುವ ಜಸ್ಲೀನ್ ಆಸ್ಪತ್ರೆಯಿಂದಲೇ ವಿಡಿಯೋ ಹಂಚಿ ಕೊಂಡಿದ್ದಾರೆ. 'ಸಿದ್ಧಾರ್ಥ್ ನಿಧನದ ಸುದ್ದಿ ತಿಳಿದು, ನಾನು ಅವರ ಮನೆಗೆ ಹೋದೆ. ಅಲ್ಲಿ ಎಲ್ಲರ ಪರಿಸ್ಥಿತಿ ಕಂಡು ನನಗೆ ತೀವ್ರ ನೋವುಂಟಾಯಿತು. ಬಳಿಕ ನನಗೆ ಏನಾಯಿತು ಎಂಬುದೇ ಗೊತ್ತಿಲ್ಲ. ನನಗಾದ ಆಘಾತದಿಂದ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡಿತ್ತು. ಇಂದೂ ಕೂಡ ನಾನು ಜ್ವರದಿಂದ ಬಳಲುತ್ತಿದ್ದೇನೆ. ಎಲ್ಲರೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ. ನಾನು ಬಹುಬೇಗ ಗುಣಮುಖಳಾಗುವಂತೆ ದಯವಿಟ್ಟು ಪ್ರಾರ್ಥಿಸಿ,' ಎಂದು ಜಸ್ಲೀನ್ ಮಾತನಾಡಿದ್ದಾರೆ.
'ಯಾರ ಬಳಿಯೂ ಮಾತನಾಡದೇ, ಏನನ್ನೂ ತಿನ್ನದೆ, ನಿದ್ದೆಯನ್ನೂ ಮಾಡದೇ ಒಂದು ಮೂಲೆಯಲ್ಲಿ ಏನನ್ನೋ ನೋಡಿಕೊಂಡು ಕೂತಿರುವ ಶೆಹನಾಜ್ ಗಿಲ್ ಅವರನ್ನು ಕಂಡು ನನ್ನ ಹೃದಯ ಛಿದ್ರಗೊಂಡಿದೆ,'ಎಂದು ಜಸ್ಲೀನ್ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಸಿದ ಜಸ್ಲೀನ್ ಹಲವು ಮ್ಯೂಸಿಕ್ ವಿಡಿಯೋ, ಆಲ್ಪಂಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಹೊರತು, 65 ವರ್ಷದ ಅನೂಪ್ ಜಲೋಟಾ ಅವರನ್ನು ಜಸ್ಲೀನ್ ಮದುವೆಯಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿ, ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.