ಕುಟುಂಬಕ್ಕೆ ಕೊಲೆ ಬೆದರಿಕೆ, ಹೊಡೆದಾತನಿಂದ ಅವಾಚ್ಯ ಶಬ್ಧ ಬಳಕೆ: ಚೈತ್ರಾ ಕೊಟೂರು

By Suvarna NewsFirst Published Mar 29, 2021, 2:25 PM IST
Highlights

ಮದುವೆ ವಿಚಾರದಿಂದ ಚೈತ್ರಾ ಕೊಟೂರು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಉದ್ಯಮಿ ನಾಗಾರ್ಜುನ್‌ಗೆ ಒಲವಂತವಾಗಿ ಮದುವೆ ಆಗಿದ್ದಾರೆ. ನ್ಯಾಯ ಸಿಗಬೇಕು ಎಂದು ಎರಡೂ ಕುಟುಂಬದವರು ಪೊಲೀಸ್ ಸ್ಟೇಷನ್‌ ಮೆಟ್ಟಿಲೇರಿದ್ದಾರೆ. 

ಮಾರ್ಚ್‌ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳಗ್ಗೆ ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಮದುವೆಯಾಗಿರುವ ಚೈತ್ರಾ, ಕುಟುಂಬಸ್ಥರಿಂದ ರಕ್ಷಣೆ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಏನಿದು ವಿವಾದ:

ನಾಗಾರ್ಜುನ್ ಮೂಲತಃ ಮಂಡ್ಯದವರು.  ಸುಮಾರು ಒಂದು ವರ್ಷದಿಂದ ಚೈತ್ರಾ ಹಾಗೂ ನಾಗಾರ್ಜುನ್ ಪ್ರೀತಿಸುತ್ತಿದ್ದರು. ನಾಗಾರ್ಜುನ್‌ ಕುಟುಂಬಸ್ಥರು ಒಪ್ಪಿಕೊಳ್ಳದ ಕಾರಣ ಸಂಘಟನೆಯವರ ಸಹಾಯದಿಂದ  ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಆದರೆ, ಈ ಮದುವೆ ಬಗ್ಗೆ ಅನೇಕ ಗಾಳಿ ಮಾತುಗಳು ಕೇಳಿ ಬರುತ್ತಿದೆ. ಸಂಘಟನೆಯವರು ನಾಗಾರ್ಜನ್‌ರನ್ನು ದೇವಸ್ಥಾನದಲ್ಲಿ ಕೂಡಿಹಾಕಿ ಮದುವೆಗೆ ಬಲವಂತ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ನಾಗಾರ್ಜುನ್‌ ಕುಟುಂಬಸ್ಥರು ಮಂಡ್ಯದಿಂದ ಬೆಂಗಳೂರಿಗೆ ಆಗಮಿಸಿ ಅದೇ ದಿನ ರಾತ್ರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಚೈತ್ರ ಪ್ರತಿಕ್ರಿಯೆ: 

ಇವರಿಬ್ಬರ ಮದುವೆಗೆ ನಾಗಾರ್ಜುನ್ ಕುಟುಂಬಸ್ಥರು ಒಪ್ಪಿಗೆ ಸೂಚಿಸಿರಲಿಲ್ಲ. ಮೊದಲಿನಿಂದಲೂ ಮದುವೆ ವಿರೋಧಿಸುತ್ತಿದ್ದರು. ನಾಗಾರ್ಜುನ್ ಕೂಡ ಒಂದೊಂದು ವೇಳೆ ಒಂದೊಂದು ರೀತಿ ಆಡುತ್ತಿದ್ದರಂತೆ.  ಒಮ್ಮೆ ಪ್ರೀತಿಸುತ್ತೇನೆ ಎಂದರೆ ಮತ್ತೊಮ್ಮೆ ಮನೆಯವರು ಮಾತು ಕೇಳುತ್ತಿದ್ದರು ಎಂದು ಚೈತ್ರಾ ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟೂರು, ಬಲವಂತದ ಮದುವೆ: ಹುಡುಗ ಆರೋಪ 

ಮಂಡ್ಯದಿಂದ ಆಗಮಿಸಿದ ನಾಗಾರ್ಜುನ್ ಕುಟುಂಬದವರು ಗಲಾಟೆ ಮಾಡಿದ್ದಾರೆ ನಡತೆ ಗೆಟ್ಟವಳು, ಸಿನಿಮಾದವಳು ಎಂದು ಚೈತ್ರಾಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ಕೋಲಾರಕ್ಕೆ ಹೋಗಿ ಮಾತುಕತೆ ಮಾಡುವುದಾಗಿ ಎರಡು ಕುಟುಂಬದವರು ನಿರ್ಧರಿಸುತ್ತಾರೆ ಆದರೆ ರಸ್ತೆ ಮಧ್ಯದಲ್ಲಿ ನಾಗಾರ್ಜುನ್ ಕುಟುಂಬಸ್ಥರು ಕೂಗಾಡಿ,  ಚೈತ್ರಾ ಅಣ್ಣನಿಗೆ ಹೊಡೆಯಲು ಯತ್ನ ಮಾಡುತ್ತಾರೆ.  ಮಂಡ್ಯಗೆ ಬಂದರೆ ನೋಡಿಕೊಳ್ಳುತ್ತೀವಿ ಅಂತ ಅವಾಜ್ ಹಾಕಿದ್ದಾರೆ.  ಜೀವ ಬೆದರಿಕೆ ಇರುವುದರಿಂದ ಚೈತ್ರಾ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಅಧಿಕಾರಿಗಳು ಬುಧವಾರದ ವರೆಗೂ ಸಮಯ ನೀಡಿದ್ದಾರೆ, ಮಾತುಕತೆ ಮಾಡಿಕೊಂಡು ಬಳಿಕ ಬನ್ನಿ ಎಂದಿದ್ದಾರೆ.

click me!