
ಬಿಗ್ ಬಾಸ್ ಸೀಸನ್ 8ರ ಸ್ಟ್ರಾಂಗ್ ಸ್ಪರ್ಧಿ ದಿವ್ಯಾ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಫೋಟೋ ಶೂಟ್, ರಿಲೀಸ್ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡುವ ದಿವ್ಯಾ ಇದ್ದಕ್ಕಿದ್ದಂತೆ ವಿಭಿನ್ನ ಸ್ಟಂಟ್‌ಗಳನ್ನು ಪ್ರಯತ್ನ ಮಾಡುವ ವಿಡಿಯೋ ಹಂಚಿಕೊಂಡು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ವಿಡಿಯೋ ಹಂಚಿಕೊಂಡು ಆಪ್ತರೊಬ್ಬರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಆದರೆ ಯಾವ ಸಿನಿಮಾ ಪ್ರಾಜೆಕ್ಟ್ ಇದು. ಯಾವ ಕಾರಣಕ್ಕೆ ಇಷ್ಟೊಂದು ತಯಾರಿ ತೆಗೆದುಕೊಳ್ಳುತ್ತಿದ್ದಾರೆ, ಎಂಬುದರ ಬಗ್ಗೆ ಮಾಹಿತಿ ಇಲ್ಲ. 'ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನೀವು ಫ್ಲಾಪ್ ನಟಿ ಆಲ್ಲ. ನಿಮ್ಮ ನಸೀಬ್ ಬದಲಾಗಿದೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಅತಿ ಶೀಘ್ರದಲ್ಲಿಯೇ ಹೊಸ ಪ್ರಾಜೆಕ್ಟ್ ಬರುತ್ತಿದೆ. ಸ್ಟಂಟ್. ಮೊದಲ ಬಾರಿಗೆ. ಥ್ರಿಲ್ ಆಗಿದ್ದೇನೆ,' ಎಂದು ಬರೆದುಕೊಂಡಿದ್ದಾರೆ.
ಶಿಕ್ಷಕರ ದಿನಾಚರಣೆ ಪ್ರಯುಕ್ತ ತಾಯಿ, ಸಹೋದರ ಹಾಗೂ ಮಂಜು ಪಾವಗಡ ಜೊತೆ ಫೋಟೋ ಹಂಚಿ ಕೊಂಡಿದ್ದಾರೆ. 'ಈ ಮೂರು ವ್ಯಕ್ತಿಗಳು ಒಂದೇ ಫ್ರೇಮ್‌ನಲ್ಲಿ. ಇವರು ನನ್ನ ಬಾಳಿನ ನಿಜವಾದ ಗುರುಗಳು. ನೀವು ನಮ್ಮ ಹೃದಯಕ್ಕೆ ಹತ್ತಿರವಾಗಿರುವ ವ್ಯಕ್ತಿಗಳು. ನೀವು ಬೇರೆ ಬೇರೆ ರೀತಿಯಲ್ಲಿ ನನಗೆ ಸ್ಪೂರ್ತಿ ನೀಡುತ್ತೀರಿ. ಹ್ಯಾಪಿ ಟೀಚರ್ಸ್ ಡೇ,' ಎಂದು ದಿವ್ಯಾ ಬರೆದು ಕೊಂಡಿದ್ದರು.
ದಿವ್ಯಾ ಫ್ಯಾಷನ್ ಸೆನ್ಸಸ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವೀಕೆಂಡ್ ಧರಿಸುತ್ತಿದ್ದ ಡಿಸೈನರ್ ಉಡುಪುಗಳು ಸಾಕಷ್ಟು ಮೆಚ್ಚುಗೆ ಪಡೆಯುತ್ತಿದ್ದವು. ಹಾಗೇ ದಿನವೂ ಧರಿಸುತ್ತಿದ್ದ ಉಡುಪು ಎಲ್ಲಿ ಖರೀದಿಸುತ್ತಿದ್ದೀರಿ? ಎಂದು ಕೂಡ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.