ಬಿಗ್ ಬಾಸ್ ಸ್ಪರ್ಧಿ ರಂಜಿತ್ ಮತ್ತೊಂದು ಎಡವಟ್ಟು, ಶಾಸಕರ ಪಾಸ್ ಹಾಕಿ ಕಾರು ಚಾಲನೆ ವಿವಾದ

Published : Nov 27, 2025, 09:35 PM IST
Bigg boss Ranjith

ಸಾರಾಂಶ

ಬಿಗ್ ಬಾಸ್ ಸ್ಪರ್ಧಿ ರಂಜಿತ್ ಮತ್ತೊಂದು ಎಡವಟ್ಟು, ಶಾಸಕರ ಪಾಸ್ ಹಾಕಿ ಕಾರು ಚಾಲನೆ, ಇತ್ತೀಚೆಗಷ್ಟೇ ಆಸ್ತಿ ವಿಚಾರವಾಗಿ ಕುಟುಂಬ ರಂಪಾಟದ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ರಂಜಿತ್ ಶಾಸಕರ ಸ್ಟಿಕ್ಕರ್ ಹಾಕಿ ಕಾರು ಚಾಲನೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು (ನ.27) ಬಿಗ್ ಬಾಸ್ 11ನೇ ಆವೃತ್ತಿ ಸ್ಪರ್ಧಿ ರಂಜಿತ್ ಒಂದಲ್ಲಾ ಒಂದು ವಿವಾದಲ್ಲಿ ಸಿಲುಕುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಂಡ ಮನೆಯಿಂದ ಹೊರಬಿದ್ದ ರಂಜಿತ್, ಬಳಿಕ ಮನೆಯ ಆಸ್ತಿ ಜಗಳ ಬೀದಿ ರಂಪಾಟವಾಗಿ ಮಾರ್ಪಟ್ಟಿತ್ತು. ರಂಜಿತ್ ಅಕ್ಕ ವಿಡಿಯೋ ಮಾಡಿ ಹಿಗ್ಗಾಮುಗ್ಗ ಜಾಡಿಸಿದ್ದರು. ಇತ್ತ ರಂಜಿತ್ ಕೂಡ ಅದೇ ಭಾಷೆಯಲ್ಲಿ ತಿರುಗೇಟು ನೀಡಿ ವಿವಾದ ಮತ್ತಷ್ಟು ಹೆಚ್ಚಿಸಿದ್ದರು. ಈ ವಿವಾದ ತಣ್ಣಗಾಗುವಷ್ಟರಲ್ಲೇ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದಾರೆ. ತಾವು ಪ್ರಯಾಣಿಸುವ ಕಾರಿನಲ್ಲಿ ಶಾಸಕರ ಸ್ಟಿಕ್ಕರ್ ಬಳಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಮಡಿವಾಳ ಬಳಿ ಶಾಸಕರ ಪಾಸ್ ಹಾಕಿ ಕಾರು ಚಾಲನೆ

ಬಿಗ್ ಬಾಸ್ ಸ್ಪರ್ಧಿ ರಂಜಿತ್ ಹಾಗೂ ಪತ್ನಿ ಮಾನಸ ಮಹೀಂದ್ರ ಎಕ್ಸ್‌ಯುವಿ 500 ಕಾರಿನ ಮೂಲಕ ಆಗಮಿಸಿದ್ದಾರೆ. ಆದರೆ ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಶಾಸಕರ ಪಾಸ್ ಗೋಚರಿಸುತ್ತಿದೆ. ರಂಜಿತ್ ಹಾಗೂ ಪತ್ನಿ ಕಾರಿನಲ್ಲಿ ಆಗಮಿಸಿದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಂಜಿತ್ ಶಾಸಕರ ಪಾಸ್ ದುರ್ಬಳಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಶಾಸಕರ ಬಿಟ್ಟು ಬೇರೆ ಯಾರು ಪಾಸ್ ಬಳಸುವಂತಿಲ್ಲ. ಹಲವೆಡೆ ಶಾಸಕರ ಕಾರಿಗೆ ನೇರ ಪ್ರವೇಶಗಳಿರುತ್ತದೆ. ಈ ಕಾರು ಶಾಸಕರ ಹೊರತು ಬೇರೊಬ್ಬರು ಬಳಸವುದು ನಿಯಮ ಉಲ್ಲಂಘನೆಯಾಗಿದೆ.

ವಿಡಿಯೋ ಪರಿಶೀಲನೆಯಲ್ಲಿ ಪೊಲೀಸ್

ಬಿಗ್ ಬಾಸ್ ಸ್ಪರ್ಧಿ ರಂಜಿತ್ ಕಾರಿನಲ್ಲಿ ಯಾವ ಶಾಸಕರ ಪಾಸ್ ಬಳಸಲಾಗಿದೆ ಅನ್ನೋ ಕುರಿತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಶಾಸಕರ ಪಾಸ್ ಅನ್ನೋದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

ಬೀದಿ ರಂಪಾಟವಾಗಿದ್ದ ಮನೆ ಜಗಳ

ರಂಜಿತ್ ಬಿಗ್ ಬಾಸ್ 11ನೇ ಆವೃತ್ತಿಯಿಂದ ಹೈಡ್ರಾಮ ಮೂಲಕ ಹೊರಬಿದ್ದಿದ್ದರು. ಮನೆಯಲ್ಲಿ ಜಗಳ ಮಾಡಿ ಮನೆಯಿಂದ ಹೊರಬಿದ್ದಿದ್ದರು. ಈ ಮೂಲಕ ರಂಜಿತ್ ವಿವಾದದಲ್ಲಿ ಸಿಲುಕಿದ್ದರು. ರಂಜಿತ್ ಮದುವೆ ಬೆನ್ನಲ್ಲೇ ಮನೆಯಲ್ಲಿ ಜಗಳ ಶುರುವಾಗಿತ್ತು. ಆಸ್ತಿ ವಿಚಾರವಾಗಿ ಶುರುವಾದ ಜಗಳ ವೈಯುಕ್ತಿ ಮಟ್ಟಕ್ಕೂ ಹೋಗಿತ್ತು. ರಂಜಿತ್ ಸಹೋದರಿ ವಿಡಿಯೋ ಮಾಡಿ ಚಪ್ಪರಿ ಸೇರಿದಂತೆ ಹಲವು ಪದ ಬಳಕೆ ಮಾಡಿದ್ದರು. ರಂಜಿತ್ ಪತ್ನಿ ಹಾಗೂ ರಂಜಿತ್ ಸಹೋದರಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಬಳಿಕ ವಿಡಿಯೋ ಮೂಲಕ ರಂಜಿತ್ ಹಾಗೂ ರಂಜಿತ್ ಸಹೋದರಿ ಕಿತ್ತಾಡಿಕೊಂಡಿದ್ದರು.

ಈ ಘಟನೆ ಕುರಿತು ರಂಜಿತ್ ಪ್ರತಿಕ್ರಿಯೆ ನೀಡಿದ್ದರೆ. ಸಹೋದರಿ ಇಲ್ಲಿಗೆ ಬಂದು ಗಲಾಟೆ ಮಾಡಿದ್ದಾರೆ. 20117ರಲ್ಲಿ ಈ ಫ್ಲ್ಯಾಟ್ ಖರೀದಿಸಿದ್ದೆ. ಅಂದು ಸಹೋದರಿ ಹೆಸರಿನಲ್ಲಿ ಮನೆ ಖರೀದಿಸಿದ್ದೆ. ಬಳಿಕ ನನ್ನ ಹೆಸರಿಗೆ ಮಾಡಿಕೊಂಡಿಲ್ಲ. ಇದೀಗ ಈ ಫ್ಲ್ಯಾಟ್ ಕೊಡಬೇಕು ಎಂದು ಗಲಾಟೆ ಮಾಡಿದ್ದಾರೆ. ಸೀರಿಯಲ್ ವಿಚಾರವಾಗಿ ನಾನು ಮುಂಬೈನಲ್ಲಿದ್ದೆ. ಕೆಲ ವರ್ಷ ಮುಂಬೈನಲ್ಲೇ ಇದ್ದೆ. ಬೆಂಗಳೂರಿನಲ್ಲಿ ಮನೆ ಖರೀದಿಸುವಾಗ ಬ್ಯಾಂಕ್ ಸಾಲದ ಸಮಸ್ಯೆಯಾದ ಕಾರಣ ಅಕ್ಕನ ಹೆಸರಿನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದೆ. ಅಕ್ಕನಿಗೆ ಸ್ಯಾಲರಿ ಇತ್ತು. ಅವರ ಸ್ಯಾಲರಿ ಆಧಾರದಲ್ಲಿ ಲೋನ್ ಪಡೆದುಕೊಂಡಿದ್ದೆ. ಪ್ರತಿ ಕಂತನ್ನು ಸಹೋದರಿಗೆ ಕಳುಹಿಸಿದ್ದೇನೆ ಎಂದು ರಂಜಿತ್ ಹೇಳಿದ್ದಾರೆ. ಇದೀಗ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ರಂಜಿತ್ ಆರೋಪಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ