
ಕಿರುತೆರೆ ಲೋಕದ ಜನ ಮೆಚ್ಚಿದ ಧಾರಾವಾಹಿ 'ಜೊತೆ ಜೊತೆಯಲಿ'. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಮತ್ತು ಅರ್ಯವರ್ಧನ್ ಕಾಂಬಿನೇಷನ್ ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯರಿಗೂ ಸಖತ್ ಇಷ್ಟವಾಗಿದೆ. ಅದರಲ್ಲೂ ಆರಂಭದಲ್ಲಿ ಜೊತೆ ಜೊತೆಯಲಿ ಟಿಆರ್‌ಪಿ ಗಗನ ಮುಟ್ಟಿತ್ತು. ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಗೂ ಜನಪ್ರಿಯತೆ ಸಿಕ್ಕಿತ್ತು ಹಾಗೂ ಇನ್ನಿತರ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಪಡೆದುಕೊಂಡರು.
ಇದೀಗ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಉರ್ಫ್ ಮೇಘಾ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಮೇಘಾ ಶೆಟ್ಟಿ ಕೊನೆಯ ಸಂಚಿಕೆಯ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಮೇಘಾ ಶೆಟ್ಟಿ ಅಭಿನಯಿಸಿರುವ ಎಪಿಸೋಡ್‌ಗಳು ಪ್ರಸಾರವಾಗಲಿವೆ. ಈ ಅವಧಿಯಲ್ಲಿ ಜೊತೆ ಜೊತೆಯಲಿ ತಂಡ ಅನು ಸಿರಿಮನೆ ಪಾತ್ರಕ್ಕೆ ಹೊಸ ಕಲಾವಿದೆಯ ಹುಡುಕಾಟ ಶುರು ಮಾಡಿದೆ.
ವೈಯಕ್ತಿಕ ಹಾಗೂ ಸಿನಿಮಾ ಕಾರಣಗಳಿಂದ ಮೇಘಾ ಶೆಟ್ಟಿ ಧಾರಾವಾಹಿ ಬಿಟ್ಟು ಬಂದಿರುವ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಕೆಲವೊಂದು ಟ್ರೋಲ್ ಪೇಜ್‌ಗಳಲ್ಲಿ ಅನು- ಆರ್ಯ ಕಾಂಬಿನೇಷನ್ ಬಗ್ಗೆ ದೊಡ್ಡ ಚರ್ಚೆಯೇ ಆಗಿತ್ತು. ಹಿಟ್ ತಂದುಕೊಟ್ಟ ಪ್ರಾಜೆಕ್ಟ್‌ನಿಂದ ಯಾಕೆ ಹೊರ ಬಂದಿದ್ದು ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮೇಘಾ ಶೆಟ್ಟಿಯಾಗಲಿ ಅಥವಾ ಧಾರಾವಾಹಿ ತಂಡದಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಸಹೋದರಿ ಜೊತೆ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆ 'ನೋಡು ಶಿವ' ಎಂಬ Rap ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.