ಬಾಲ್ಯದಲ್ಲಿ ಮಾಡಿದ ತರಲೆ ಕೆಲಸವನ್ನು ರಿವೀಲ್ ಮಾಡಿದ ಅಮೂಲ್ಯ ಗೌಡ. ಕಥೆ ಕೇಳಿ ಶಾಕ್ ಆದ ನೆಟ್ಟಿಗರು....
ಕಮಲಿ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಬಾರ್ಬಿ ಡಾಲ್ ಅಮೂಲ್ಯ ಗೌಡ ಈಗ ಬಿಗ್ ಬಾಸ್ ಸೀಸನ್ 9ರ ಟಫ್ ಟೈಗರ್. ಮನೆ ಪ್ರವೇಶಿಸಿದ ದಿನದಿಂದಲ್ಲೂ ಪಡ್ಡೆ ಹುಡುಗರ ನಿದ್ರೆ ಗೆಡಿಸಿರುವ ಅಮೂಲ್ಯ ವಾರ ವಾರವೂ ಎಲಿಮಿನೇಟ್ ಆಗಲು ನಾಮಿನೇಟ್ ಆದರೂ ಅತಿ ಹೆಚ್ಚು ವೋಟ್ಸ್ ಪಡೆದು ಸೇಫ್ ಆಗುತ್ತಾರೆ. ಬ್ಯೂಟಿ ನೋಡಿದ್ರೆ ಸಾಕಾ ನಿಮ್ಮ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಹೇಳಿ ಎಂದು ನೆಟ್ಟಿಗರು ಮುಂದಿಡುತ್ತಿದ್ದ ಡಿಮ್ಯಾಂಡ್ telepathy ಮೂಲಕ ಕೇಳಿಸಿರಬಹುದು..ಹೀಗಾಗಿ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ್ದಾರೆ.
ಅಮೂಲ್ಯ ಮಾತು:
'ನಾನು 10ನೇ ಕ್ಲಾಸ್‌ನಲ್ಲಿದ್ದಾಗ ಕಂಪ್ಯೂಟರ್ ಕ್ಲಾಸ್‌ನಿಂದ ಮನೆಗೆ ಲೇಟ್ ಆಗಿ ಹೋಗುತ್ತಿದ್ದೆ. ಒಬ್ರು ಅಕ್ಕ ಪರಿಚಯ ಆಗಿದ್ದರು ಅವರ ಮನೆಗೆ ದಿನ ಹೋಗುವುದು ತರಲೆ ಮಾಡಿಕೊಂಡು ಮಜಾ ಮಾಡುತ್ತಿದ್ದೆ ನನ್ನ ತಂದೆ ಬೇಡ ಹಾಗೆ ಮಾಡಬೇಡ ಎಂದು ಹೇಳುತ್ತಿದ್ದರು. ಬೇಡ ಅಂತ ಒಂದು ದಿನ ಹೇಳಿದ್ದರು ಎರಡು ದಿನ ಹೇಳಿದ್ದರು ನಾನು ಕೇಳಲಿಲ್ಲ...ದೇವ್ರೆ ಒಂದು ದಿನ ಮನೆಗೆ ಬಂದೆ ಎಷ್ಟೊತ್ತಿಗೆ ಬರುವುದು ಹೀಗೆ ಹಾಗೆ ಅಂತ ಕೇಳಿದ್ದರು ನಾನು ಸಖತ್ ಮಾತಿಗೆ ಮಾತು ಕೊಡುತ್ತಿದ್ದೆ. ಅವತ್ತು ನಮ್ಮಪ್ಪ ಸಿಟ್ಟು ಕೇಳ್ಬೇಕಾ? ಬಿಪಿ ಜೋರಾಗಿ ಸ್ಟಾರ್ಟ್ ಮಾಡಿದ್ದರು. ಮನೆ ಬಾಗಿಲು ಹಾಕಿದ್ದಾರೆ ನಾನು ಒಂದು ಮೂಲೆಯಲ್ಲಿ ನಿಂತಿರುವೆ ಹೊಡಿತಿದ್ದಾರೆ ಹೊಡಿತಿದ್ದಾರೆ ನನಗೆ ಮೈ ನೋವಾಗುತ್ತಿದೆ ಆ ಕಡೆ ಅಣ್ಣ ಡ್ಯಾನ್ಸ್ ಮಾಡುತ್ತಿದ್ದಾನೆ. ಎಷ್ಟು ನೋವು ತಡೆದುಕೊಳ್ಳುವುದು ಮೈ ಉರಿ ಕೊನೆಗೆ ನಾನು ಹೊಡೆಯಿರಿ ಹೊಡೆಯಿರಿ ಸಾಯಿಸಿ ಬಿಡಿ ಅಂತ ಹೇಳುತ್ತಿದ್ದೆ. ನನ್ನ ಪ್ಲ್ಯಾನ್ ಏನಂದ್ರೆ ಈ ರೀತಿ ಮಾಡಿದ್ದರೆ ಬಿಡುತ್ತಾರೆ ಅಂದುಕೊಂಡ್ರೆ ಹೌದಾ ತಡಿ ತಡಿ ಅಂತ ಮತ್ತೆ ಜಾಸ್ತಿ ಹೊಡೆಯುತ್ತಿದ್ದಾರೆ. ಆ ನೋವಿನಿಂದ ಚಳಿ ಜ್ವರದಿಂದ ಒಂದು ವಾರ ಮಲಗಿಕೊಂಡೆ. ಅವತ್ತೇ ಲಾಸ್ಟ್ ಹೊಡೆಸಿಕೊಂಡಿದ್ದು' ಎಂದು ಬಾಲ್ಯದ ಮೆಮೋರಬಲ್ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
ದುಡ್ಡು ಕದ್ದಿರುವುದು:
'ಅಣ್ಣ ನಾನು ಅವಾಗವಾಗ ಮನೆಯಲ್ಲಿ ದುಡ್ಡು ಎತ್ತುತ್ತಿದ್ವಿ. ನಮ್ಮ ಮನೆಯಲ್ಲಿ ಜಾಸ್ತಿ ಹಣ ಕದ್ರೆ ಅದು ನಮ್ಮ ಅಣ್ಣ ಮಾಡಿದ್ದಾನೆ ಅಂತ. 100 ರೂಪಾಯಿ ಕಡಿಮೆ ಕದ್ದರೆ ಅದು ನಾನು ಮಾಡಿದೆ ಅಂತ. ಅವನೇ ಮಾಡಿದ್ದರೂ ಅದು ನನ್ನ ಮೇಲೆ ಬರುತ್ತಿತ್ತು. ಇದೆಲ್ಲಾ ಕಾಲೇಜ್ ಟೈಂನಲ್ಲಿ ಆಗಿರುವುದು. ಅಮ್ಮಂಗೂ ಗೊತ್ತು ನಾವು ದುಡ್ಡು ಎತ್ತುತ್ತಿದ್ವಿ ಅಂತ ಅವರು ಬಿಡು ಮಕ್ಕಳು ಅಲ್ವಾ ಅಂತ ಸುಮ್ಮನಿದ್ದರು. ಒಂದು ದಿನ ಅಣ್ಣ 6 ಸಾವಿರ ರೂಪಾಯಿ ಎತ್ಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಹೇಗೆ ಅಂದ್ರೆ ಒಂದು ತಿಂಗಳು ಆ ಹಣದ ಬಗ್ಗೆ ಮಾತನಾಡುತ್ತಿರಲಿಲ್ಲ ಆಮೇಲೆ ನಾವು ಅವತ್ತು ಅಲ್ಲಿ ಹುಡುಕುತ್ತಿದ್ದ ಹಣ ನಾನೆ ಎತ್ಕೊಂಡಿದ್ದು ಅಂತಿದ್ವಿ. ಆ 6 ಸಾವಿರ ರೂಪಾಯಿ ಅಣ್ಣನ ಪ್ಯಾಂಟ್‌ನಲ್ಲಿತ್ತು. ಹೊರಗಡೆ ಹೋಗಿ ಬಂದಿದ್ದ. ಅವತ್ತು ಅವನ ಜೇಬಿಗೆ ಕೈ ಹಾಕಿದ್ದರೆ ಹಣ ಜಾಸ್ತಿ ಇದೆ...ಮನೆಯಲ್ಲಿ ಯಾರೇ ಕದ್ದಿದ್ದರು ಅದು ನಮಗೆ ಗೊತ್ತಿರುತ್ತೆ ಏಕೆಂದರೆ ಒಂದು ಅವನು ಮಾಡಬೇಕು ಇಲ್ಲ ನಾನು ಮಾಡಬೇಕು. ನಾನು ಏನ್ ಮಾಡಿದೆ... ಅವನೇ ಪಿಕ್‌ಪಾಕೆಟ್ ಮಾಡಿರುವುದು. ನಾನು ಅವನ ಪಾಕೆಟ್‌ನಿಂದ ತೆಗೆದುಕೊಂಡೆ. ಗೊತ್ತಾದರೆ ಬೈಯುತ್ತಾನೆ ಎಂದು ಸಣ್ಣದಾಗಿ ಜೇಬಿಗೆ ತೂತು ಮಾಡಿದೆ ಅಂದ್ರೆ ಎಲ್ಲೂ ತೂತಾಗಿ ಬಿದಿತ್ತು ಅಂದುಕೊಳ್ಳಬೇಕು ಅಂತ. ಒಂದು ವಾರ ಅವನು ನನ್ನ ಜೊತೆ ಮಾತನಾಡಲಿಲ್ಲ. ಒಂದು ತಿಂಗಳು ಆದಮೇಲೆ ಅಮ್ಮಂಗೆ ಹೇಳಿದ. ಅಮ್ಮ ನಿನ್ನ ಮಗಳು ಎಷ್ಟು ಛತ್ರಿ ಅಂದ್ರೆ ನಾನೇ ನಿಮ್ಮ ಲಾಕರ್‌ನಿಂದ ಹಣ ಎತ್ತಿರುವುದು ...ಅವಳು ನನ್ನ ಪಾಕೆಟ್‌ನಿಂದ ತೆಗೆದುಕೊಂಡು ಪಾಕೆಟ್ ತೂತು ಮಾಡಿಟ್ಟಿದ್ದಾಳೆ' ಎಂದು ಸತ್ಯ ಹೇಳಿದ.