3ನೇ ವಾರದ ಕೊನೆಯಲ್ಲಿ ವೈಲ್ಡ್ ಕಾರ್ಡ್ ಶಾಕ್, ಒಳಗೆ ಕಾಲಿಟ್ಟ ಮತ್ತೊಬ್ಬ ಸೆಲೆಬ್ರಿಟಿ

Published : Nov 03, 2019, 07:10 PM ISTUpdated : Nov 03, 2019, 07:24 PM IST
3ನೇ ವಾರದ ಕೊನೆಯಲ್ಲಿ ವೈಲ್ಡ್ ಕಾರ್ಡ್ ಶಾಕ್, ಒಳಗೆ ಕಾಲಿಟ್ಟ ಮತ್ತೊಬ್ಬ ಸೆಲೆಬ್ರಿಟಿ

ಸಾರಾಂಶ

ಅಚ್ಚರಿಗಳ ಮೂಟೆ ಬಿಗ್ ಬಾಸ್ 7/ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿರುವ ಆ ವ್ಯಕ್ತಿ ಯಾರು?/ ಕಿಚ್ಚ ಸುದೀಪ್ ಕೊಟ್ಟ ಆ ಹಿಂಟ್ ಏನು? ಮೂರನೇ ವಾರ ಮನೆಯಿಂದ ದುನಿಯಾ ರಶ್ಮಿ ಔಟ್

ಈ ಬಾರಿಯ ಬಿಗ್ ಬಾಸ್ ಆರಂಭದಿಂದಲೂ ಒಂದಾದ ಮೇಲೆ ಒಂದು ಶಾಕ್ ಕೊಟ್ಟಿಕೊಂಡೇ ಬರುತ್ತಿದ್ದಾರೆ. ಮೊದಲು ಸ್ಪರ್ಧಿ ಎಂದು ಮನೆಯೊಳಗೆ ಹೋಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಂತರ ಗೆಸ್ಟ್ ಆಗಿ ಬದಲಾದರು.

ಮೂರನೇ ವಾರದ ಎಲಿಮಿನೇಶನ್ ಗೆ ಬಿಗ್ ಬಾಸ್ ಬಂದು ನಿಂತಿದೆ. ಮೊದಲ ವಾರ ಗೆದ್ದರೆ ಎಲ್ಲ ಹಣ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದ ಗುರುಲಿಂಗ ಸ್ವಾಮೀಜಿ ಔಟ್ ಆಗಿದ್ದರು, ನಂತರ ಎರಡನೇ ವಾರದಲ್ಲಿ ನಿರೂಪಕಿ ಚೈತ್ರಾ ವಾಸುದೇವನ್ ಹೊರಬಂದಿದ್ದರು.

ಜೈಜಗದೀಶ್ ಎರಡನೇ ಮದುವೆ ಕತೆ!

ಶನಿವಾರದ ವಾರದ ಕತೆ ಕಿಚ್ಚನ ಜತೆಯಲ್ಲಿ ಮಾತನಾಡುತ್ತ ಸುದೀಪ್ ಈ ವಾರ ಒಂದು ಟ್ವಿಸ್ಟ್ ಇದೆ ಎಂದು  ಹೇಳಿದ್ದರು. ಅದರಂತೆ ಈ ವಾರ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಬ್ಬರು ಒಳಸೇರುವುದು ಖಚಿತವಾಗಿದೆ.

ಸುದೀಪ್ ಅವರೇ ಪ್ರೋಮೋದಲ್ಲಿ ಈ ವಿಚಾರವನ್ನು ತಿಳಿಸಿದ್ದು ಕವರ್ ಒಂದನ್ನು ಹಿಡಿದುಕೊಂಡು ಮನೆಯೊಳಗೆ ಹೋಗಲಿದ್ದಾರೆ. ಆ ಕವರ್ ನಲ್ಲಿ ಹೆಸರಿರುವ ವ್ಯಕ್ತಿ ಮನೆಯಿಂದ ಹೊರಬೀಳಲಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.

ಹಾಗಾದರೆ ಮನೆಯೊಳಗೆ ಪ್ರವೇಶ ಪಡೆಯಲಿರುವ ವ್ಯಕ್ತಿ ಯಾರು? ಯಾವ ಕ್ಷೇತ್ರದ ಸೆಲೆಬ್ರಿಟಿ? ನಟನೋ, ನಿರ್ದೇಶಶಲನೋ ಇಂದಿನ ಎಪಿಸೋಡ್ ನಲ್ಲೇ ಗೊತ್ತಾಗಬೇಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ