
ಬಿಗ್‌ಬಾಸ್ ಮೊದಲ ಸೀಸನ್‌ನಿಂದಲೂ ಪತ್ರಕರ್ತ ರವಿ ಬೆಳಗೆರೆ ಭಾಗಿಯಾಗುತ್ತಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇತ್ತು. ಆದರೆ ಕಾರಣಾಂತಗಳಿಂದ ಮೊದಲ ಆರು ಸೀಸನ್‌ಗಳಲ್ಲೂ ರವಿ ಕಾಣಿಸಲೇ ಇಲ್ಲ, ಆ ಮೂಲಕ ಅಭಿಮಾನಿಗಳು ನಿರಾಶರಾಗಿದ್ದರು. ಆದರೆ, ಸೀಸನ್ 7ರಲ್ಲಿ ಮೊದಲ ಕೆಲವು ದಿನಗಳು ಕಾಣಿಸಿಕೊಂಡು, ತಮ್ಮ ಅನುಭವ ಹಾಗೂ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಆಪ್ತರಾಗಿದ್ದರು. ಅವರ ಬಗ್ಗೆ ಕೆಟ್ಟ ಅಭಿಪ್ರಾಯವಿದ್ದವರೂ ಬದಲಾಯಿಸಿಕೊಂಡರು. ಮೂರು ವಾರಗಳ ಕಾಲ ಮನೆಯಲ್ಲಿ ಅತಿಥಿಯಾಗಿದ್ದ ಬೆಳಗೆರೆಯವರು, ಇತರೆ ಸ್ಪರ್ಧಿಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು.
BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!
ಇನ್ನು ಬಿಗ್‌ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡು ಪ್ರತಿವಾರವೂ ಒಂದೊಂದು ರೀತಿಯಲ್ಲಿ ಸದ್ದು ಮಾಡಿ ಸುದ್ದಿಯಾಗುತ್ತಿದ್ದವರು ನಟಿ ಚೈತ್ರಾ. ಬಿಗ್ ಬಾಸ್‌ನಿಂದ ಔಟ್ ಆಗಿ, ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಕೆಲವು ದಿನಗಳ ಕಾಲ ಅಲ್ಲಿದ್ದು, ಮತ್ತೆ ಹೊರ ಬಂದವರು. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಉತ್ತಮ ಸ್ಪರ್ಧಿಯಾಗಿ ಎಲ್ಲಾ ಚಟುವಟಿಗಳಲ್ಲಿಯೂ ಪಾಲ್ಗೊಂಡರು.
ಬಿಗ್ ಬಾಸ್ ಮನೆಯಿಂದ ಎರಡನೇ ಬಾರಿ ಎಲಿಮಿನೇಟ್ ಆದ ಚೈತ್ರಾ ಕೋಟೂರ್ ರವಿ ಬೆಳಗೆರೆ ಅವನ್ನು ಭೇಟಿ ಮಾಡಿದ್ದಾರೆ. ಈ ಸಂತಸದ ಕ್ಷಣವನ್ನು ಚೈತ್ರಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!
ರವಿ ಬೆಳಗೆರೆ ಚೈತ್ರಾಗೆ ಆಫರ್ ಕೊಟ್ರಾ?
ರವಿ ಬೆಳಗೆರೆ ಬರೆದಿರುವ ಒಂದು ಕೃತಿಯನ್ನು ಸಿನಿಮಾ ಅಥವಾ ಸೀರಿಯಲ್ ರೂಪಕ್ಕೆ ತರಲು ನಿರ್ಧರಿಸಲಾಗಿದೆ. ಈ ಪ್ರಾಜೆಕ್ಟ್‌ನಲ್ಲಿ ಚೈತ್ರಾ ಕೋಟೂರ್ ಭಾಗಿಯಾಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಬೆಳಗೆರೆ ಹಾಗೂ ಕೋಟೂರ್ ಅವರಿಗೆ ಅಧಿಕೃತ ಮಾಹಿತಿ ಹೊರ ಬೇಕಷ್ಟೆ.
BB7: ಶಂಕರ್ ನಾಗ್‌ರನ್ನ ಕೋತಿ ಎಂದು ಕರೆದ ನಟಿ ಬಗ್ಗೆ ಬಾಯ್ಬಿಟ್ಟ ರವಿ ಬೆಳಗೆರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.