Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು

Published : Aug 30, 2026, 07:10 PM IST
Kichcha Sudeep

ಸಾರಾಂಶ

ಬಿಗ್​ಬಾಸ್​ 13ರ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರಾದ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ವರ್ತನೆಗೆ ಟ್ರೋಲ್ ವ್ಯಕ್ತವಾಗಿತ್ತು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಬೆಂಗಳೂರು: ಬಿಗ್​ಬಾಸ್​ 13ರಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನಡೆಸಿದ್ದ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರು ಅದರಲ್ಲಿಯೂ ಮುಖ್ಯವಾಗಿ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್​ ಗೌಡ ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇವೆಲ್ಲಾ ಮಾತುಗಳು ತೀರ್ಪುಗಾರರದ್ದು ಅಲ್ಲ, ಬದಲಿಗೆ ಅವರಿಗೆ ಏನು ಮಾತನಾಡಬೇಕು, ಏನು ಬೇಡ ಎನ್ನುವುದು ಅವರ ಕಿವಿಗಳನ್ನು ನೋಡಿದರೆ ತಿಳಿಯುತ್ತದೆ, ಅಲ್ಲಿ ಅವರಿಗೆ ಬರುವ ಸಂದೇಶದಂತೆಮಾತನಾಡುತ್ತಾರೆ, ಎಲ್ಲವೂ ಟಿಆರ್​ಪಿಗಾಗಿ ಎಂದೂ ಹಲವರು ಕಮೆಂಟ್​ ಮಾಡುತ್ತಿದ್ದಾರೆ.

ತೀರ್ಪುಗಾರರ ವರ್ತನೆ

ಇದೀಗ ಈ ಬಗ್ಗೆ ಸುದೀಪ್​ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. Bigg Boss Kannada Season 13 ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಅವರು ಈ ಷೋನ ಹಲವು ವಿಷಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿದೆ. ತೀರ್ಪುಗಾರರು ನಡೆದುಕೊಂಡಿರುವ ವರ್ತನೆ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಸುದೀಪ್​ ಅವರು, ಕೆಲವು ಅಗ್ನಿಪರೀಕ್ಷೆಗಳು ಮುಗಿದ ಮೇಲೆಯೇ ನಿಜವಾದ ಯಶಸ್ಸು ಅಥವಾ ಸ್ವರ್ಗ ಸಿಗುವುದು. ಶಾಲೆಯಲ್ಲಿ ವಿದ್ಯಾರ್ಥಿಗಲು ತಪ್ಪು ಮಾಡಿದಾಗಲೂ ಟೀಚರ್ಸ್​ ‘ಗೆಟ್ ಔಟ್’ ಅಂತಾರೆ. ಹೀಗೆ ಹೇಳಿದಾಗ, ಆ ಕ್ಷಣಕ್ಕೆ ಅದು ಕಹಿಯೆನಿಸಿದರೂ ಅವೆಲ್ಲಾ ನಮ್ಮ ಒಳ್ಳೆಯದಕ್ಕೇ ಆಗಿರುತ್ತದೆ. ಇಲ್ಲಿ ಜಡ್ಜ್‌ಗಳ ನಡವಳಿಕೆ ಎಷ್ಟು ಸರಿ-ತಪ್ಪು ಎಂದು ಚರ್ಚಿಸುವುದು ಮುಖ್ಯವಲ್ಲ. ಅಲ್ಲಿ ರಿಜೆಕ್ಟ್ ಆದವರಿಗೂ ಅದು ದೊಡ್ಡ ಹೈಪ್ ಮತ್ತು ಜನಪ್ರಿಯತೆ ತಂದುಕೊಟ್ಟಿರಬಹುದು. ಒಮ್ಮೆ ತಿರಸ್ಕೃತರಾದ ಮಾತ್ರಕ್ಕೆ ಬದುಕಿನ ಬಾಗಿಲುಗಳು ಮುಚ್ಚುವುದಿಲ್ಲ. ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ” ಎಂದು ಹೇಳಿದರು.

ಶೂಟಿಂಗ್​ ಅನುಭವ

ಇನ್ನು ಸಿನಿಮಾ ಶೂಟಿಂಗ್​ ಬಗ್ಗೆಯೂ ಮಾಹಿತಿ ಹಂಚಿಕೊಂಡ ಅವರು, ಹಿಂದಿನ ಸೀಸನ್‌ಗಳಲ್ಲಿ ತುಂಬಾ ಕಷ್ಟವಾಗಿತ್ತು ಎಂದರು. (ಇದೇ ಕಾರಣ ನೀಡಿ ತಾವು ಮುಂದಿನ ಸೀಸನ್​ಗಳಿಂದ ಹೋಸ್ಟ್ ಮಾಡುವುದಿಲ್ಲ ಎಂದು ಹೇಳಿ, ತಲ್ಲಣ ಸೃಷ್ಟಿಸಿ ಕೊನೆಗೆ ಮುಂದಿನ ನಾಲ್ಕು ಸೀಸನ್​ಗಳಿಗೆ ಒಪ್ಪಿಕೊಂಡಿರುವುದಾಗಿ ಸುದೀಪ್​ ಹೇಳಿದ್ದರು). ಆದರೆ ಈ ಬಾರಿ ಸಮಸ್ಯೆ ಆಗಲಿಲ್ಲ ಎಂದರು. ಜೊತೆಗೆ ತಮ್ಮ ‘ಬಿಲ್ಲ ರಂಗ ಭಾಷಾ’ ಚಿತ್ರದ ಸೆಟ್ ಬಿಗ್ ಬಾಸ್ ಸೆಟ್‌ನ ಅತ್ಯಂತ ಸಮೀಪದಲ್ಲೇ ಇರುವ ಕಾರಣ, 15 ನಿಮಿಷದಲ್ಲೇ ಶೂಟಿಂಗ್ ಮುಗಿಸಿ ಬಿಗ್ ಬಾಸ್ ವೇದಿಕೆಗೆ ಬಂದುಬಿಡಬಹುದು. ಆದರೆ ಕಳೆದ ಬಾರಿ ಬಿಗ್​ಬಾಸ್​ ಸೆಟ್​ ಮತ್ತು ಶೂಟಿಂಗ್​ ಸೆಟ್​ ತುಂಬಾ ದೂರ ಇದ್ದುದರಿಂದ ಕಷ್ಟ ಆಯ್ತು ಎಂದಿದ್ದಾರೆ.

ಇದೇ ಸಮಯದಲ್ಲಿ ಅವರ ಸಿನಿಮಾದ ಬಗ್ಗೆ ಕೇಳಿದಾಗ, ಇದು ಬಿಗ್​ಬಾಸ್​​ ಪ್ರೆಸ್​ಮೀಟ್​ ಆಗಿರುವುದರಿಂದ ಸಿನಿಮಾಕುರಿತು ಮುಂದೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Bossನಲ್ಲಿ ಗೆಲ್ಲಲು ಬೇಕಿರೋದು ಏನು? ಪತ್ರಕರ್ತರ ಪ್ರಶ್ನೆಗೆ ಅಚ್ಚರಿಯ ಉತ್ತರ ಕೊಟ್ಟ ಸುದೀಪ್​
ದರ್ಶನ್ ಸಾಂಗ್ಸ್ 'ಬಿಗ್ ಬಾಸ್' ಮನೇಲಿ ಯಾಕ್ ಹಾಕಲ್ಲ? 'ಓಪನ್ ಆಗಿ ಹೇಳ್ತಿನಿ' ಎಂದು ಸುದೀಪ್ ಹೇಳಿದ್ದೇನು?