ಹೊರಗೆ ಅಸ್ತ್ರ, ಒಳಗದೇ ಮಾರಕ! ಏನಿದು ಚೈತ್ರಾ ಕಿರಿಕಿರಿ?

By Suvarna News  |  First Published Oct 2, 2024, 12:32 PM IST

ಬಿಗ್​ಬಾಸ್​ ಸೀಸನ್​ 11 ರಲ್ಲಿ ಚೈತ್ರಾ ಕುಂದಾಪುರ ಅವರ ಆರಂಭಿಕ ದಿನಗಳು ಸವಾಲಿನಿಂದ ಕೂಡಿದೆ. ವಾದ-ವಿವಾದಗಳಿಂದ ಗಮನ ಸೆಳೆದರೂ, ಅವರ ಧ್ವನಿ ಮತ್ತು ನಡವಳಿಕೆ ನಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಿದೆ.


- ವಿನುತಾ ಪರಮೇಶ್, ಸುವರ್ಣ ನ್ಯೂಸ್

ಸ್ವರ್ಗ ನರಕ ಕಾನ್ಸೆಪ್ಟ್​ನಲ್ಲಿ ಬಂದ ಈ ಬಾರಿಯ ಕನ್ನಡ ಬಿಗ್​ಬಾಸ್​ ಸೀಸನ್​ 11 ಆರಂಭವಾಗುತ್ತಿದ್ದಂತೆ ಮನೆ ರಣರಂಗವಾಗುತ್ತಿದೆ. ಕೆಲವರು ಸೈಲೆಂಟಾಗಿ ಆಟ ಶುರುಮಾಡಿದ್ರೆ, ಇನ್ನು ಕೆಲವರು ವೈಲೆಂಟ್​ ಆಗಿಯೇ ಬಾಲ ಬಿಚ್ಚುತ್ತಿದ್ದಾರೆ. ಈ ಪೈಕಿ ಚೈತ್ರಾ ಕುಂದಾಪುರ ಸಹ ಪ್ರಮುಖರು. ಮೊದಲ ದಿನವೇ ವಾದ –ಪ್ರತಿವಾದಕ್ಕಿಳಿದ ಚೈತ್ರಾ, ಸ್ವರ್ಗದಲ್ಲಿದ್ದವರಿಗೆ ನರಕ ತೋರಿಸಿದ್ದಾರೆ. ಹೀಗಿದ್ರೂ ಈ ವಾರ ನಾಮಿನೇಟ್​​ ಆಗಿದ್ದಾರೆ. ಅದಕ್ಕೆ ಕಾರಣ ಕೇಳಿದ್ರೆ ಅಚ್ಚರಿ ಆಗ್ತೀರಾ! ಯಾವ ಅಸ್ತ್ರವನ್ನು ಇಟ್ಕೊಂಡು​ ರಾಜ್ಯದಲ್ಲಿ ಅಷ್ಟೆಲ್ಲಾ ಹೆಸರು ಮಾಡಿದ್ರೋ ಅದೇ ಅಸ್ತ್ರ ಚೈತ್ರಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮುಳುವಾಗಿದೆ.

ಚೈತ್ರಾ ಕುಂದಾಪುರ, ಓಪನ್​ ಸ್ಟೇಜಿನಲ್ಲಿ ದಿಟ್ಟವಾಗಿ ಮಾತನಾಡುವ ನಾರಿ. ಈಕೆಯ ಭಾಷಣವನ್ನು ಅದೆಷ್ಟೋ ಹಿಂದೂವಾದಿಗಳು ಆಲಿಸಿ ಚಪ್ಪಾಳೆ ಹೊಡೀತಾ ಇದ್ದರು. ಹುಮ್ಮಸ್ಸಿನಿಂದ ಶಿಳ್ಳೆ, ಕೇಕೆ ಹಾಕಿ ಹುರಿದುಂಬಿಸುತ್ತಿದ್ದರು. ಆದ್ರೀಗ ಚೈತ್ರಾ ಧ್ವನಿಯೇ ಬಿಗ್​ಬಾಸ್​ನಲ್ಲಿ ನೆಗೆಟಿವ್​ ಆಯ್ತಾ ಅನ್ನೋ ಹಾಗೆ ಆಗಿದೆ. ಅದಕ್ಕೆ ಕಾರಣ ಮೊದಲ ದಿನ ನಡೆದ ವಾಕ್ಸಮರ.

ಕಲರ್ಸ್ ಕನ್ನಡದ ತುಂಬೆಲ್ಲಾ ತುಕಾಲಿ ಜೋಡಿ… ಇವ್ರ ಸಂಪೂರ್ಣ ಜವಾಬ್ಧಾರಿ ಚಾನೆಲ್ ತೆಗೊಂಡಿದ್ಯಾ? ನೆಟ್ಟಿಗರ ಪ್ರಶ್ನೆ

Tap to resize

Latest Videos

undefined

ಮನೆಯ ಎಲ್ಲಾ ಕೆಲಸದ ಜವಾಬ್ದಾರಿಯನ್ನ ನರಕ ವಾಸಿಗಳಿಗೆ ನೀಡಬೇಕಿತ್ತು, ಹೀಗಾಗಿ ನರಕದಲ್ಲಿದ್ದ ಚೈತ್ರಾ ಟಾಸ್ಕ್​ ಕಂಪ್ಲೀಟ್​ ಮಾಡ್ಬೇಕಿತ್ತು. ಆದ್ರೆ ತಮ್ಮದೇ ಗೇಮ್​ ಪ್ಲಾನ್​ ಮಾಡಿದ್ದ ಚೈತ್ರಾ, ಸ್ವರ್ಗ ನಿವಾಸಿಗಳ ಉಗ್ರಂ ಮಂಜು ಕೈನಲ್ಲಿದ್ದ ಹಣ್ಣನ್ನು ತೆಗೆದುಕೊಂಡು, ಕಚ್ಚಿ ತಿಂದು ನರಕದ ಮನೆ ಕಡೆ ಬಿಸಾಡಿದ್ರು. ಈ ವಿಚಾರವೇ ಮನೆಯಲ್ಲಿ ಜಗಳಕ್ಕೆ ಕಾರಣವಾಯ್ತು. ಇದು ಬಿಗ್​ಬಾಸ್​ ರೂಲ್ಸ್​ ಬ್ರೇಕ್​ ಆಗುವಂತೆ ಮಾಡ್ತು. ಹೀಗಾಗಿ ಸ್ವರ್ಗದವರಿಗೆ ಕೊಟ್ಟಿದ್ದ ಲಕ್ಷುರಿ ವಸ್ತುಗಳನ್ನ ಬಿಗ್​ಬಾಸ್​ ಹಿಂಪಡೆದಿದೆ. ಈ ಎಲ್ಲ ಕಾರಣದಿಂದ ಚೈತ್ರಾ ಮೇಲೆ ಇತರೆ ಸ್ಪರ್ಧಿಗಳೂ ಕೆಂಡ ಕಾರುತ್ತಿದ್ದಾರೆ. ಇದರ ಜೊತೆಗೆ ಚೈತ್ರಾ ಕುಂದಾಪುರ ಜೋರು ಧ್ವನಿಯ ವಿಚಾರವಾಗಿಯೂ ಕೆಲ ಹೊತ್ತು ವಾಕ್ಸಮರ ನಡೆಯಿತು.

ಆದ್ರೆ ಇದಾದ ಮೇಲೆ ನಡೆದ ನಡೆದ ನಾಮಿನೇಷನ್​ನಲ್ಲಿ ಬಹುತೇಕ ಮಂದಿ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದು, ಭಾಗಶಃ ಚೈತ್ರಾ ವಾಯ್ಸ್​ ಬಗ್ಗೆಯೇ ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಬಿಗ್​ಬಾಸ್​ ಹೊರಗಡೆ ಅಸ್ತ್ರವಾಗಿದ್ದ ಚೈತ್ರಾ ವಾಯ್ಸ್​​, ಬಿಗ್​ಬಾಸ್​ ಮನೆಯಲ್ಲಿ ಮುಳುವಾಯ್ತಾ? ಅನ್ನೋ ಅನುಮಾನಕ್ಕೆ ದಾರಿ ಮಾಡಿದೆ.

ಬಿಗ್‌ಬಾಸ್‌ ಮನೆಯಲ್ಲಿ ಕಳ್ಳ, ಪೊಲೀಸ್‌, ಚಿನ್ನ, ಲಾಯರ್‌: ಈ ಸೀಸನ್‌ ಒಂದು ಸಿನಿಮಾ!

ಸೆ.30ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಿದೆ. ಈ ಸಲ ಒಟ್ಟು 17 ಸ್ಪರ್ಧಿಗಳಿದ್ದಾರೆ. ಜೀ ಕನ್ನಡದ ಸತ್ಯ ಖ್ಯಾತಿಯ ಗೌತಮಿ ಜಾದವ್, ಹೈ ಪ್ರೊಫೈಲ್ ಲಾಯರ್ ಜಗದೀಶ್, ಉಗ್ರಂ ಮಂಜು, ಗೀತಾ ಫೇಮ್ ಭವ್ಯಾ ಗೌಡ, ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ನಟಿಸುವ ಯಮುನಾ ಶ್ರೀನಿಧಿ, ಶನಿ ಸೀರಿಯಲ್‌ನಲ್ಲಿ ಸೂರ್ಯ ದೇವನ ಪಾತ್ರ ಮಾಡಿ, ನಂತRರ ವೇತನದ ವಿಷಯವಾಗಿ ಪಾತ್ರ ಬಿಟ್ಟ ರಂಜಿತ್, ಪದ್ಮಾವತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್, ತುಕಾಲಿ ಸಂತೋಷ್ ಪತ್ನಿ ಮಾನಸ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಜಿಯಾಗಿದ್ದ ಹಂಸಾ ನಾರಾಯಣ ಸ್ವಾಮಿ, ಕುಲವಧು ಸೀರಿಯಲ್ ಮೂಲಕ ಮನೆ ಮಾತಾದ ಶಿಶಿರ್ ಶಾಸ್ತ್ರಿ, ನೆಗಟಿವ್ ಶೇಡಿನಲ್ಲಿ ಕಾಣಿಸಿಕೊಳ್ಳುವ ನಟ ಕೀರ್ತಿರಾಜ್ ಪುತ್ರ ಧರ್ಮ ಕೀರ್ತಿರಾಜ್, ಮೈ ತುಂಬಾ ಕೋಟಿ ಬೆಲೆ ಬಾಳೋ ಚಿನ್ನ ಧರಿಸುವ ಗೋಲ್ಡ್ ಸುರೇಶ್, ಸೀರಿಯಲ್ ನಟಿ ಐಶ್ವರ್ಯಾ ಸಿಂಧೋಗಿ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಯಿಯಿಂದ ಖ್ಯಾತರಾದ ಮೋಕ್ಷಿತಾ ಪೈ, ಧನರಾಜ್ ಆಚಾರ್, ಅನುಷಾ ರೈ, ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ಪಾಲ್ಗೊಂಡಿದ್ದಾರೆ. 

click me!