ಬಿಗ್ ಬಾಸ್ ಮನೆಗೆ ಕನ್ನಡತಿ ಹರ್ಷ, ಸ್ಪಷ್ಟನೆ ನೀಡಿದ ಕಿರಣ್ ರಾಜ್

Published : Sep 28, 2024, 11:41 AM IST
ಬಿಗ್ ಬಾಸ್ ಮನೆಗೆ ಕನ್ನಡತಿ ಹರ್ಷ, ಸ್ಪಷ್ಟನೆ ನೀಡಿದ ಕಿರಣ್ ರಾಜ್

ಸಾರಾಂಶ

ಸದ್ಯ ಎಲ್ಲಿ ನೋಡಿದ್ರೂ ಬಿಗ್ ಬಾಸ್ ಸೀಸನ್ 11ರ ಸುದ್ದಿ ಹರಿದಾಡ್ತಿದೆ. ಯಾರು ಮನೆಗೆ ಹೋಗ್ತಾರೆ ಎಂಬ ಕುತೂಹಲದಲ್ಲಿ ವೀಕ್ಷಕರಿದ್ದಾರೆ. ಈ ಮಧ್ಯೆ ನಟ ಕಿರಣ್ ರಾಜ್ ಹೆಸರು ಎಲ್ಲೆಡೆ ಕೇಳಿ ಬರ್ತಿದ್ದು, ಅದಕ್ಕೆ ಆಕ್ಟರ್ ಉತ್ತರ ನೀಡಿದ್ದಾರೆ.   

ಅಗ್ನಿಸಾಕ್ಷಿ ಸೀರಿಯಲ್ ಫೇಮ್ ಕಿರಣ್ ರಾಜ್ (Agnisakshi serial fame Kiran Raj) ಈಗ ಸ್ಯಾಂಡಲ್ವುಡ್ ಸ್ಟಾರ್. ಅವರು ರಾನಿ ಸಿನಿಮಾ (Ronny Movie )ಸಕ್ಸಸ್ ಸಂಭ್ರಮಿಸ್ತಿದ್ದಾರೆ. ರಾನಿ ಚಿತ್ರ ವೀಕ್ಷಣೆ ಮಾಡಿದ ಪ್ರತಿಯೊಬ್ಬರೂ ಕಿರಣ್ ರಾಜ್ ಆಕ್ಟಿಂಗ್ ಗೆ ಉಘೇ ಎಂದಿದ್ದಾರೆ. ಚಿತ್ರ ಬಿಡುಗಡೆ ದಿನ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ದ ಕಿರಣ್ ರಾಜ್, ಕೆಲವೇ ಗಂಟೆಯಲ್ಲಿ ಡಿಸ್ಜಾರ್ಜ್ ಆಗಿ ಫ್ಯಾನ್ಸ್ ಮುಂದಿದ್ದರು. ಕಿರಣ್ ರಾಜ್ ಅಭಿನಯದ ರಾನಿ, ಮೂರನೇ ವಾರವೂ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೇ ಸಂತೋಷದಲ್ಲಿ ಕಿರಣ್ ರಾಜ್, ಬಿಗ್ ಬಾಸ್ ಕನ್ನಡ 11 (Bigg Boss Kannada 11) ರ ಮನೆಗೆ ಬರ್ತಾರೆ ಎನ್ನುವ ಸುದ್ದಿ ಇದೆ. 

ಬಿಗ್ ಬಾಸ್ ಸೀಸನ್ 11 ಶುರುವಾಗಲು ಇನ್ನೇನು ಕೆಲವೇ ಗಂಟೆ ಬಾಕಿ ಇದೆ. ಇಂದು ನಡೆಯುವ ರಾಜಾ – ರಾಣಿ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರು ಘೋಷಣೆಯಾಗಲಿದೆ. ಈ ಮಧ್ಯೆ ಸ್ಪರ್ಧಿಗಳ ಬ್ಲರ್ ಫೋಟೋ ಒಂದು ವೈರಲ್ ಆಗಿತ್ತು. ಅದನ್ನು ನೋಡಿದ ಜನರು, ಕಿರಣ್ ರಾಜ್ ಫೋಟೋ ಇದು ಎಂದಿದ್ದರು. ಕಿರಣ್ ರಾಜ್, ಬಿಗ್ ಬಾಸ್ ಗೆ ಹೋಗೋದು ಖಚಿತ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಆದ್ರೆ ಕಿರಣ್ ರಾಜ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿರುವ ಕಿರಣ್ ರಾಜ್, ರಾನಿ ಚಿತ್ರದ ಸಕ್ಸಸ್ ಗೆ ಕಾರಣವಾಗಿರುವ ಅಭಿಮಾನಿಗಳಿಗೆ ಧನ್ಯವಾದ. ಬಿಗ್ ಬಾಸ್ ಗೆ ಹೋಗ್ತೇನೆ ಎಂಬ ಸುದ್ದಿ ವದಂತಿ. ಇದು ಸತ್ಯವಲ್ಲ ಎಂದು ಬರೆದಿದ್ದಾರೆ. 

ಯೂನಿಫಾರ್ಮ್ ಧರಿಸಿ ಡಿ ಬಾಸ್ ಹಾಡಿಗೆ ವೈಷ್ಣವಿ - ಗಗನ್ ಸ್ಟೆಪ್ಸ್, ಬೇಗ ಮದುವೆ ಆಗಿ ಎಂದ ಫ್ಯಾನ್ಸ್

ಕನ್ನಡ ಸಿನಿಮಾ ಓಡೋದಿಲ್ಲ ಎನ್ನುವ ಸಮಯದಲ್ಲೇ ಕಿರಣ್ ರಾಜ್ ಅಭಿನಯದ ರಾನಿ, 25ನೇ ದಿನಕ್ಕೆ ಕಾಲಿಡುವ ಸೂಚನೆ ನೀಡಿದ್ದು, ಕನ್ನಾಭಿಮಾನಿಗಳು ಖುಷಿಯಾಗಿದ್ದಾರೆ. ಕಿರುತೆರೆ ಮೂಲಕ ಹಿರಿತೆರೆಗೆ ಬಂದ ಕಿರಣ್ ರಾಜ್, ಸ್ಯಾಂಡಲ್ವುಡ್ ಗೆ ಫಿಟ್ ಆಗ್ತಿದ್ದಾರೆ. ಹೊಸ ಮಾಸ್ ಹೀರೋ ಸ್ಯಾಂಡಲ್ವುಡ್ ಗೆ ಸಿಕ್ಕಂತಾಗಿದೆ. ಈ ಸಿನಿಮಾ ಯಶಸ್ಸಿನ ಹಿಂದೆ ಕಿರಣ್ ರಾಜ್ ಶ್ರಮ ಸಾಕಷ್ಟಿದೆ. ಅಧ್ಬುತವಾಗಿ ನಟಿಸುವ ಕಿರಣ್ ರಾಜ್, ಕನ್ನಡತಿಯಲ್ಲಿ ಮನೆಮಗನಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗ್ಲೂ ಅಭಿಮಾನಿಗಳು ಅವರನ್ನು ಹರ್ಷ ಎಂದೇ ಅಭಿಮಾನಿಗಳು ಗುರುತಿಸುತ್ತಾರೆ. 

ಪಿಳಿ ಪಿಳಿ ಕಣ್ಣು ಬಿಡ್ತಾ ಮುದ್ದಾಗಿದೆ ಪರಿ, ಮಗು ಮುಖ ತೋರಿಸಿದ ಕೃಷ್ಣ – ಮಿಲನಾ ಜೋಡಿಗೆ ಬಹುಪರಾಕ್ ಎಂದ ನೆಟ್ಟಿಗರು

ಮೈಸೂರಿನ ಕಿರಣ್ ರಾಜ್, ಬೆಳೆದಿದ್ದು ಉತ್ತರ ಭಾರತದಲ್ಲಿ. ಹಿಂದಿ ಸೀರಿಯಲ್ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ ಕಿರಣ್ ರಾಜ್, ಕನ್ನಡದಲ್ಲೂ ಸೈ ಎಲ್ಲಿಸಿಕೊಂಡ್ರು. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್ ಸೇರಿದಂತೆ ಅನೇಕ ಸೀರಿಯಲ್ ನಲ್ಲಿ ನಟಿಸಿರುವ ಕಿರಣ್ ರಾಜ್ ಅವರಿಗೆ ಕಲರ್ಸ್ ಕನ್ನಡದ ಕನ್ನಡತಿ ಮೊದಲ ಕನ್ನಡ ಸೀರಿಯಲ್. ರಿಯಾಲಿಟಿ ಶೋನಲ್ಲೂ ಮಿಂಚಿರುವ ಕಿರಣ್ ರಾಜ್, ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸತೋಮ ಸದ್ಗಮಯ ಅವರ ಮೊದಲ ಸ್ಯಾಂಡಲ್ವುಡ್ ಚಿತ್ರ. ಅದಾದ್ಮೇಲೆ ಕಿರಣ್ ರಾಜ್, ಜೀವ್ನಾನೇ ನಾಟ್ಕ ಸ್ವಾಮಿ, ಬಹುದೂರ್ ಗಂಡು, ಬಡ್ಡೀಸ್, ಒನ್ ವೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ ರಾನಾ ಅವರ ಕೈ ಹಿಡಿದಂತೆ ಕಾಣ್ತಿದೆ. ಬಾಲಿವುಡ್ ಆಕ್ಟರ್ ಹಾಗೂ ನಿರ್ಮಾಪಕ ಸಂಜಯ್ ಕಪೂರ್ ಕೂಡ ಕಿರಣ್ ರಾಜ್ ನಟನೆಯನ್ನು ಮೆಚ್ಚಿದ್ದಾರೆ. ಟ್ರೈಲರ್ ಇಷ್ಟವಾಗಿದ್ದು, ಸಿನಿಮಾ ನೋಡಲು ಉತ್ಸುಕನಾಗಿದ್ದೇನೆಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ವಿಷ್ಯಕ್ಕೆ ಬರೋದಾದ್ರ ಸ್ಪರ್ಧಿಗಳು ಯಾರು ಎಂಬ ಕುತೂಹಲ ಹಾಗೆಯೇ ಇದೆ. ಸೆಪ್ಟೆಂಬರ್ 29ರಿಂದ ಶೋ ಶುರುವಾಗಲಿದ್ದು, ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?