ಪಾರ್ಲೆ ಜಿ ಮಗುವಿನ ಜೊತೆಯಲ್ಲಿ ಭಾರ್ಗವಿ LLB ಧಾರಾವಾಹಿಯ ಸುಜಾತಾ ಲುಕ್ ಹೋಲಿಕೆ

ಕಲರ್ಸ್ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಸುಜಾತಾ ಅವರ ಲುಕ್ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಸುಜಾತಾ ಅವರ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Bhargavi LLB serial Sujatha look comparison with Parle G Girl mrq

ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್‌ಎಲ್‌ಎಲ್ ಸೀರಿಯಲ್  ಪಾತ್ರಗಳ ಪರಿಚಯ ಆಗಿದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಸುಜಾತಾ ಅವರ ಲುಕ್ ಟ್ರೋಲ್ ಆಗುತ್ತಿದೆ. ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಶಕುಂತಲಾ ಪಾಟೀಲ್ ಆಗಿ ಸುಜಾತ ಅಕ್ಷಯ್ ನಟಿಸುತ್ತಿದ್ದಾರೆ. ಹಿರಿಯ ಮತ್ತು ಪ್ರಭಾವಿಶಾಲಿ ವಕೀಲ ಜಯಪ್ರಕಾಶ್ ಪಾಟೀಲ್ ಮಡದಿ ಶಕುಂತಲಾ ಪಾತ್ರದಲ್ಲಿ ಸುಜಾತ ಕಾಣಿಸಿಕೊಂಡಿದ್ದರು. ಆಗರ್ಭ ಶ್ರೀಮಂತೆ ಮಧ್ಯ ವಯಸ್ಕ ಮಹಿಳೆಯಾಗಿರುವ ಶಕುಂತಲಾ ಬಾಬ್ ಕಟ್ ಲುಕ್ ವೈರಲ್ ಆಗುತ್ತಿದೆ. ನೆಟ್ಟಿಗರು ಪಾರ್ಲೆ ಜಿ ಬಿಸ್ಕಟ್ ಫೋಟೋ ಜೊತೆ ಸುಜಾತ ಅವರ ಫೋಟೋವನ್ನು ಸೇರಿಸಿ ಹಂಚಿಕೊಳ್ಳುತ್ತಿದ್ದಾರೆ. 

ಪಾರ್ಲೆ ಜಿ ಬಿಸ್ಕಟ್ ಕವರ್ ಮೇಲಿರುವ ಪುಟಾಣಿ ಹುಡುಗಿ ದೊಡ್ಡವಳಾದ ಮೇಲೆ ಸುಜಾತ ರೀತಿಯಲ್ಲಿಯೇ ಕಾಣಿಸುತ್ತಿದ್ದರು ಎಂಬ ಶೀರ್ಷಿಕೆಯಡಿಯಲ್ಲಿ ಫೋಟೋ  ಶೇರ್ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು, ಹೌದು ನಿಜ ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ಸುಜಾತ ಅವರು ಸಹ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೇಮ್ ಟು ಸೇಮ್, ಆದ್ರೆ ಡಿಫೆರೆಂಟ್ ಎಂದು ಸುಜಾತ ಅವರು ಬರೆದುಕೊಂಡಿದ್ದಾರೆ. 

Latest Videos

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ
ಜಯಪ್ರಕಾಶ್ ಪಾಟೀಲ್ ವೃತ್ತಿ ಜೀವನದಲ್ಲಿ ಸೋಲನ್ನೇ ಕಾಣದ ಪ್ರಭಾವಿಶಾಲಿ ವಕೀಲ. ಈತನ ಹಿರಿಯ ಮಗನ ಹೆಂಡತಿಯೇ ಭಾರ್ಗವಿಯ ಅಕ್ಕ ಬೃಂದಾ. ತನ್ನ ಬದ್ಧವೈರಿಯ ಮಗಳೇ ಮನೆಗೆ ಸೊಸೆಯಾಗಿ ಬಂದಿರೋದು ಜಯಪ್ರಕಾಶ್ ಪಾಟೀಲ್ ಮತ್ತು ಶಕುಂತಲಾ ಪಾಟೀಲ್‌ಗೂ ಕೊಂಚವೂ ಇಷ್ಟವಿಲ್ಲ. ಮಗ ಪ್ರೀತಿಸಿದ್ದಾನೆ ಎಂಬ ಕಾರಣಕ್ಕೆ ಮಧ್ಯಮ ವರ್ಗದ ಹುಡುಗಿಯನ್ನು ಮನೆ ತುಂಬಿಸಿಕೊಂಡಿರುತ್ತಾರೆ. ಆದ್ರೂ ಸೊಸೆಯ ಹಿನ್ನೆಲೆ ಮತ್ತು ಆಕೆಯ ಕುಟುಂಬದ ಬಗ್ಗೆ ಮಾತನಾಡಿ ಶಕುಂತಲಾ ಟಾಂಗ್‌ ಕೊಡುತ್ತಿರುತ್ತಾಳೆ. ಹಾಗಾಗಿ ಕಿರಿಯ ಮಗ ಅರ್ಜುನ್‌ ಮದುವೆಯನ್ನು ಆಪ್ತ ಗೆಳೆಯ ಎಂಎಲ್ಎ  ಶಕ್ತಿಪ್ರಸಾದ್ ಭೂಪತಿ ಶೆಟ್ಟಿ ಮಗಳು ವಂದನಾ ಜೊತೆ ಮಾಡಿಸಬೇಕು ಎಂದು ಪಾಟೀಲ್ ಕುಟುಂಬ ಸಿದ್ಧತೆ ಮಾಡಿಕೊಂಡಿದೆ. ಆದ್ರೆ ಭಾರ್ಗವಿ ಮೇಲೆ ಅರ್ಜುನ್‌ಗೆ ಲವ್ ಆಗಿದೆ. ಆದ್ರೆ ಆಕೆ ತನ್ನ ಅತ್ತಿಗೆಯ ತಂಗಿ ಎಂಬ ವಿಷಯ ಅರ್ಜುನ್‌ಗೆ ಗೊತ್ತಿಲ್ಲ. 

 

ಇದನ್ನೂ ಓದಿ: ಲವ್, ಆಕ್ಷನ್, ಫ್ಯಾಮಿಲಿ ಡ್ರಾಮಾ; ಹೇಗಿತ್ತು ಭಾರ್ಗವಿ LLB ಧಾರಾವಾಹಿಯ ಫಸ್ಟ್ ಎಪಿಸೋಡ್?

ಪಾರ್ಲೆ ಜಿ ಪ್ಯಾಕ್ ಮೇಲಿರುವ ಹುಡುಗಿ ಯಾರು?
ಪಾರ್ಲೆ ಜಿ ಪ್ಯಾಕ್ ಮೇಲಿರುವ ಹುಡುಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸುಧಾಮೂರ್ತಿ ಎಂಬ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದ್ರೆ ಅದು ಸುಳ್ಳು ಎಂದು ಪಾರ್ಲೆ ಜಿಯೇ ಸ್ಪಷ್ಟನೆ ನೀಡಿತ್ತು. ಕೆಲವರು ನೀರು ದೇಶಪಾಂಡೆ ಮತ್ತು ಕುಂಜನ್ ಗುಂಡಾನಿಯಾ ಮುಂತಾದ ಹೆಸರುಗಳನ್ನು ಸೂಚಿಸಿದರು. ಇವರ ಬಾಲ್ಯದ ಫೋಟೋವನ್ನೇ ಪಾರ್ಲೆ ಜಿಗಾಗಿ ಬಳಸಲಾಗಿದೆ ಎಂಬ ಊಹಾಪೋಹಗಳು ಇಂದಿಗೂ ವೈರಲ್ ಆಗುತ್ತಿರುತ್ತವೆ. ಪಾರ್ಲೆ-ಜಿ ಹುಡುಗಿ ನಿಜವಾದ ಮಗುವಿನ ಮೇಲೆ ಆಧಾರಿತವಾಗಿಲ್ಲ, ಆದರೆ 1960 ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್ ಕಲಾವಿದ ಮಗನ್‌ಲಾಲ್ ದಹಿಯಾ ರಚಿಸಿದ ಚಿತ್ರ ಎಂದು ಪಾರ್ಲೆ ಪ್ರಾಡಕ್ಟ್ಸ್‌ನ ಗ್ರೂಪ್ ಪ್ರಾಡಕ್ಟ್ ಮ್ಯಾನೇಜರ್ ಮಯಾಂಕ್ ಶಾ  ಹೇಳಿದ್ದಾರೆ. 

ಇದನ್ನೂ ಓದಿ: ಬಡವರ ಬಿಸ್ಕೆಟ್‌ ಪಾರ್ಲೆ-ಜಿ ಬಗ್ಗೆ ನಿಮಗೆಷ್ಟು ಗೊತ್ತು?: ಪ್ಯಾಕ್​​​ನಲ್ಲಿರುವ ಹುಡುಗಿಯ ರಹಸ್ಯವೇನು?

click me!