51ರ ಮಲೈಕಾ ಮುಂದೆ 16ರ ಪೋರನ ಅಸಹ್ಯ ಕಣ್ಸನ್ನೆ; ನಿಗಿ ನಿಗಿ ಕೆಂಡವಾದ ನಟಿ

ನಟಿ ಮಲೈಕಾ ಅರೋರಾ ಡ್ಯಾನ್ಸ್ ಶೋನಲ್ಲಿ 16 ವರ್ಷದ ಸ್ಪರ್ಧಿಯೊಬ್ಬ ಅಸಭ್ಯವಾಗಿ ಕಣ್ಸನ್ನೆ ಮಾಡಿದ್ದಕ್ಕೆ ಕೋಪಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Actress  Malaika Arora angry on 16 year old contestant in dance reality show mrq

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ವಯಸ್ಸು 51 ಆದರೂ, 21ರ ಯುವತಿಯಂತೆ ಕಾಣುತ್ತಾರೆ. ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡುವ ಮಲೈಕಾ ಆರೋರಾ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆಗಾಗ ಸಿನಿಮಾಗಳ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮಲೈಕಾ ಅರೋರಾ, ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಇದೇ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ 16ರ ಪೋರನೊಬ್ಬ ನಟಿಗೆ ಅಸಹ್ಯವಾಗಿ ಕಣ್ಸನ್ನೆ ಮಾಡಿದ್ದಾನೆ. ಇದರಿಂದ ನಿಗಿ ನಿಗಿ ಕೆಂಡವಾಗಿರುವ ಮಲೈಕಾ ಅರೋರಾ ಕ್ಲಾಸ್ ತೆಗೆದುಕೊಂಡಿದ್ದಾರೆ. 16 ವರ್ಷದ ಸ್ಪರ್ಧಿಗೆ ಮಲೈಕಾ ಅರೋರಾ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮಲೈಕಾ ಅರೋರಾ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ. ಸದ್ಯ 'ಹಿಪ್ ಹಾಪ್ ಇಂಡಿಯಾ' ಶೋನಲ್ಲಿ ಮಲೈಕಾ ಅರೋರಾ ಕಾಣಸಿಕೊಳ್ಳುತ್ತಿದ್ದಾರೆ. ಇದೀಗ ಇದೇ ಕಾರ್ಯಕ್ರಮದ ವಿಡಿಯೋ ತುಣಕೊಂದು ಬೆಂಕಿಯಂತೆ ಸೋಶಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. 

Latest Videos

ಹಿಪ್ ಹಾಪ್ ಇಂಡಿಯಾ ಶೋನ ಪ್ರೋಮೋ ಇದಾಗಿದ್ದು, 16 ವರ್ಷದ ಸ್ಪರ್ಧಿಗೆ ಮಲೈಕಾ ಅರೋರಾ ಕ್ಲಾಸ್ ತೆಗೆದುಕೊಳ್ಳುತ್ತಿರೋದನ್ನು ಕಾಣಬಹುದಾಗಿದೆ. ಸ್ಪರ್ಧಿಯ ಡ್ಯಾನ್ಸ್ ನೋಡಿದ ಬಳಿಕ ಮಲೈಕಾ ಅರೋರಾ ಆತನ ತಾಯಿಯ ಫೋನ್ ನಂಬರ್ ನೀಡುವಂತೆ ಕೇಳಿದ್ದಾರೆ. ಜಡ್ಜ್ ಮಲೈಕಾ ಅರೋರಾ ದಿಢೀರ್ ಅಂತ ತಾಯಿ ನಂಬರ್ ಕೇಳಿದ್ದಕ್ಕೆ  16 ವರ್ಷದ ಸ್ಪರ್ಧಿ ಒಂದು ಕ್ಷಣ ಶಾಕ್ ಆಗಿದ್ದಾನೆ. ನೀನು 16 ವರ್ಷದ ಹುಡುಗ, ಈಗ ಡ್ಯಾನ್ಸ್ ಮಾಡ್ತಿದ್ದೀಯಾ. ನೇರವಾಗಿ ನನ್ನನ್ನೇ ನೋಡುತ್ತಾ ಕಣ್ಣು ಹೊಡೆಯುತ್ತಿದ್ದಾನೆ. ವೇದಿಕೆ ಮೇಲಿಂದಲೇ ನನಗೆ ಫ್ಲೈಯಿಂಗ್ ಕಿಸ್ ನೀಡುತ್ತಿದ್ದಾನೆ ಎಂದು ಕೋಪಗೊಂಡು ಮಲೈಕಾ ಆಕ್ರೋಶ ಹೊರ ಹಾಕಿದ್ದಾರೆ. 

ಈ ಪ್ರೋಮೋದಲ್ಲಿ ಮಲೈಕಾ ಅರೋರಾ ಮಾತ್ರವಲ್ಲ ಇತರೆ ಸ್ಪರ್ಧಿಗಳು ಸಹ ಯುವಕನ ಡ್ಯಾನ್ಸ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವನಿಗೆ ಇನ್ನು ಕೇವಲ 16 ವರ್ಷ ಮಾತ್ರ. ಯಾರ ಮುಂದೆ ಏನು ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು ಎಂದು ಓರ್ವ ಯುವಕ ಹೇಳಿದ್ದಾನೆ. ಮತ್ತೋರ್ವ ಮಹಿಳಾ ಸ್ಪರ್ಧಿ, ಮಲೈಕಾ ಅರೋರಾ ಬೈದಿರೋದು ಸರಿಯಾಗಿದೆ. ಈ ಕೆಲಸಗಳನ್ನು ಮಾಡುವಷ್ಟು ವಯಸ್ಸು ಅವನಿಗೆ ಆಗಿಲ್ಲ ಎಂದು ಮಲೈಕಾರನ್ನು ಸಮರ್ಥಿಸಿಕೊಂಡಿದ್ದಾನೆ.

ಇದನ್ನೂ ಓದಿ: ರಜೆಯ ಮಜಾದಲ್ಲಿ ಮಲೈಕಾ ಆರೋರಾ; ಇದು ಸ್ವರ್ಗ ಎಂದು ಕರೆದ ನಟಿ!

ನೆಟ್ಟಿಗರು ಹೇಳಿದ್ದೇನು?
ಈ ಪ್ರೋಮೋ ನೋಡಿದ ನೆಟ್ಟಿಗರು ಇದೆಲ್ಲಾ ಪೂರ್ವ ನಿರ್ಧರಿತವಾಗಿರುತ್ತದೆ. ವೀಕ್ಷಕರನ್ನು ಕಾರ್ಯಕ್ರಮದತ್ತ ಸೆಳೆಯಲು ಈ ರೀತಿಯ ಗಿಮಿಕ್ ಮಾಡಲಾಗುತ್ತದೆ. ಈ ವಿಡಿಯೋ ಸಹ ಕಾರ್ಯಕ್ರಮ ಪ್ರಚಾರದ ಒಂದು ಭಾಗವಾಗಿರುತ್ತದೆ. ಇಂತಹ ಗಿಮಿಕ್ ಹಳೆಯದ್ದಾಗಿದ್ದು, ವಾಹಿನಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸರ್‌ಗಳು ವೇದಿಕೆ ಮೇಲಿಂದಲೇ ತೀರ್ಪುಗಾರರಿಗೆ ಫ್ಲೈಯಿಂಗ್ ಕಿಸ್ ಮಾಡುತ್ತಿರುತ್ತಾರೆ. ಹಾಗೆಯೇ ಆ ಹುಡುಗ ಡ್ಯಾನ್ಸ್ ಮಾಡುತ್ತಾ ಕಣ್ಸನೆ ಮಾಡಿ ಫ್ಲೈಯಿಂಗ್ ಕಿಸ್ ಕೊಟ್ಟಿರಬಹುದು ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 51 ರಲ್ಲೂ ನವ ತರುಣಿಯಂತೆ ಸೂಪರ್ ಫಿಟ್; ಮಲೈಕಾ ಆರೋರಾ ಡಯಟ್ ಸೀಕ್ರೆಟ್ ರಿವೀಲ್!

click me!