ಶ್ರೀರಸ್ತು ಶುಭಮಸ್ತು ಆ್ಯನಿವರ್ಸರಿ ಸಂಭ್ರಮದಲ್ಲಿ ಗೆಜ್ಜೆಯ ನಾದ: ಈ 'ನಿಗೂಢ' ಕಲಾವಿದೆಯ ನಾಟ್ಯದ ರಸದೌತಣ. ಯಾರೀಕೆ?
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಇದೀಗ ಕಂಪೆನಿಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದೆ. ಮನೆಗೆ ಬಂದಿರುವ ಕೋರಿಯೋಗ್ರಫರ್ ಇದಾಗಲೇ ಮನೆ ಮಂದಿಗೆಲ್ಲಾ ಡ್ಯಾನ್ಸ್ ಹೇಳಿಕೊಟ್ಟಾಗಿದೆ. ಇದೀಗ ಕಂಪೆನಿಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆಯೊಬ್ಬಳ ಪ್ರವೇಶವಾಗಿದೆ. ಆಕೆ ಯಾರು ಎಂದು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿದ್ದು, ಆ್ಯನಿವರ್ಸರಿ ಸಂಭ್ರಮದಲ್ಲಿ ಗೆಜ್ಜೆಯ ನಾದ ಎಂಬ ಶೀರ್ಷಿಕೆ ಕೊಟ್ಟಿದೆ. ಹಾಗಿದ್ದರೆ ಈ ಕಲಾವಿದೆ ಯಾರು ಎಂಬ ಬಗ್ಗೆ ಇದೀಗ ಕುತೂಹಲ ಮನೆಮಾಡಿದೆ.
ಅಷ್ಟಕ್ಕೂ ಈಕೆ ಸುಧಾರಾಣಿ ಎನ್ನುವುದೇ ಬಹುತೇಕ ನೆಟ್ಟಿಗರ ಅಭಿಮತ. ಅಭಿಗೆ ತನ್ನ ಈ ಹೊಸ ಅಮ್ಮ ತುಳಸಿಯನ್ನು ಕಂಡರೆ ಆಗುವುದಿಲ್ಲ. ನನ್ನ ಅಮ್ಮ ಕಾರು ಡ್ರೈವಿಂಗ್, ಡ್ಯಾನ್ಸ್ ಎಲ್ಲಾ ಮಾಡುತ್ತಿದ್ದರು. ನಿಮಗೇನು ಬರುತ್ತದೆ ಎಂದು ತುಳಸಿಗೆ ಹಂಗಿಸಿದ್ದ. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಿದ್ದ ತುಳಸಿ ಡ್ರೈವಿಂಗ್ ಕಲಿತು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಳು. ಆದರೆ ಭರತನಾಟ್ಯ ಕಲಿಯುವುದನ್ನಷ್ಟೇ ತೋರಿಸಲಾಗಿತ್ತೇ ವಿನಾ ಮುಂದೇನಾಯ್ತು ಎಂದು ತೋರಿಸಿರಲಿಲ್ಲ. ಇದೀಗ ಆಕೆಯ ನಾಟ್ಯ ತೋರಿಸುವ ಸಮಯ ಬಂದಿದೆ. ತುಳಸಿ ಹೇಗೆ ಭರತನಾಟ್ಯ ಮಾಡುತ್ತಾಳೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.
ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ
ಅಷ್ಟಕ್ಕೂ ತುಳಸಿ ಪಾತ್ರಧಾರಿ ಸುಧಾರಾಣಿ ಅವರು ಖುದ್ದು ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆಯೂ ಹೌದು. 54 ವರ್ಷದ ಸುಧಾರಾಣಿ ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.
ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಸುಧಾರಾಣಿಯವರ ನೃತ್ಯವನ್ನು ನೋಡುವ ಕಾತರದಲ್ಲಿದ್ದಾರೆ ಪ್ರೇಕ್ಷಕರು.
ಇಬ್ರನ್ನೂ ಬೇಗ ಒಂದ್ಮಾಡಿ ಎಂದು ಗೋಳಾಡ್ತಿದ್ದವರೇ ಈಗ ಸೀರಿಯಲ್ ಬೋರ್ ಆಗ್ತಿದೆ ಅಂತಿದ್ದಾರಲ್ಲಪ್ಪ!