ಭಾಗ್ಯಲಕ್ಷ್ಮಿ ಮಗಳು ತನ್ವಿಯ ಕ್ಯೂಟ್​ ಫೋಟೋಶೂಟ್​​: ಬಾಲಕಿಯ ಕುರಿತು ಕೆಲವು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

Published : Feb 15, 2025, 06:02 PM ISTUpdated : Feb 15, 2025, 06:34 PM IST
ಭಾಗ್ಯಲಕ್ಷ್ಮಿ ಮಗಳು ತನ್ವಿಯ ಕ್ಯೂಟ್​ ಫೋಟೋಶೂಟ್​​: ಬಾಲಕಿಯ ಕುರಿತು ಕೆಲವು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

ಸಾರಾಂಶ

ಭಾಗ್ಯಲಕ್ಷ್ಮಿ ಧಾರಾವಾಹಿಯ ತನ್ವಿ ಪಾತ್ರಧಾರಿ ಅಮೃತಾ ಗೌಡ, ತನ್ನ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ತಂದೆ ತಾಯಿಯರ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ತನ್ವಿ ಪಾತ್ರದ ಭಾವನಾತ್ಮಕ ಏರಿಳಿತಗಳನ್ನು ಅಮೃತಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅಮೃತಾ, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಭವಿಷ್ಯದಲ್ಲಿ ನಾಯಕಿಯಾಗಿ ನೋಡುವ ಆಶಯವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

 ಭಾಗ್ಯಲಕ್ಷ್ಮಿ ಸೀರಿಯಲ್​  ವೀಕ್ಷಕರಿಗೆ ಈ ಮುಖ ಚಿರಪರಿಚಿತ. ಇವಳೇ ತನ್ವಿ. ಭಾಗ್ಯ ಮತ್ತು ತಾಂಡವ್​ ಪುತ್ರಿ. ಅಮ್ಮ ಹಳ್ಳಿಯ ಗುಗ್ಗು ಎಂದು ಹೀಯಾಳಿಸುತ್ತಲೇ ಅಮ್ಮನನ್ನು ಕಂಡರೆ ಇಷ್ಟಪಡದಿದ್ದ ತನ್ವಿ ಬದಲಾಗಿ ವರ್ಷವೇ ಕಳೆದಿದೆ. ಈಗ ಅಮ್ಮ ಎಂದರೆ  ಪಂಚಪ್ರಾಣ. ಅಮ್ಮನ ಮಹತ್ವ ತಿಳಿದಿದೆ. ಮಕ್ಕಳಿಗಾಗಿ ಅಮ್ಮ ಪಡುತ್ತಿರುವ ಕಷ್ಟದ ಅರ್ಥವಾಗಿದೆ. ಅಮ್ಮ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವ ಅರಿವಾಗುವಷ್ಟರಲ್ಲಿಯೇ ಕಥೆ ಇನ್ನೊಂದು ಟರ್ನ್​ ತೆಗೆದುಕೊಂಡಿದೆ. ತಾಂಡವ್​ ಲವರ್​ ಶ್ರೇಷ್ಠಾಳಿಂದಾಗಿ ಭಾಗ್ಯ ಕೆಲಸ ಕಳೆದುಕೊಂಡಿದ್ದಾಳೆ. ದುಡ್ಡಿಗಾಗಿ ಅಮ್ಮನನ್ನು ಕೇಳುವುದು ಸರಿಯಲ್ಲ ಎಂದ ತನ್ವಿ ಸದ್ಯ ಮತ್ತೆ ಅಪ್ಪನ ಕಡೆ ವಾಲುತ್ತಿದ್ದಾಳೆ. ಪತ್ನಿಯ ಮೇಲಿನ ಸಿಟ್ಟಿನಲ್ಲಿ ಎಲ್ಲರನ್ನೂ ತನ್ನತ್ತ ಒಲಿಸಿಕೊಳ್ಳುವ ಷರತ್ತು ಹಾಕಿರುವ ತಾಂಡವ್​, ಇದನ್ನೇ ದಾಳವಾಗಿ ಬಳಸಿಕೊಂಡು ಮಗಳು ತನ್ವಿಯನ್ನು ಸೆಳೆದುಕೊಳ್ಳುತ್ತಿದ್ದಾರೆ.

ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿರುವ ತನ್ವಿಯ ನಿಜವಾದ ಹೆಸರು  ಅಮೃತಾ ಗೌಡ. ಅಮೃತಾ ಗೌಡ ಹೈಸ್ಕೂಲ್​ ಓದುತ್ತಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಷಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾಳೆ. 

ನಿಮ್ಮ ಮಾತು ಕೇಳಿ ರೈಟರ್ಸ್​ ಕಥೆಯನ್ನೇ ಬದಲಿಸ್ತಿದ್ದಾರೆ ಎಂದ ಭಾಗ್ಯಲಕ್ಷ್ಮಿ ಭಾಗ್ಯ: ಮುಂದೇನಾಗತ್ತೆ ಕೇಳಿ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಹುಟ್ಟುಹಬ್ಬಕ್ಕೆಂದು ಅಪ್ಪ ತಾಂಡವ್​ ಕೊಡಿಸಿದ ಡ್ರೆಸ್​ನಿಂದ ಫೋಟೋಷೂಟ್​ ಮಾಡಿಸಿಕೊಂಡಿದ್ದಾಳೆ.

ಈಕೆ ಸೀರಿಯಲ್​ ಪ್ರಿಯರ ಪಾಲಿಗೆ ಅಮೃತಾ ಗೌಡ ಅಲ್ಲ, ಬದಲಿಗೆ ತನ್ವಿ ಅಷ್ಟೇ. ಮುದ್ದಾದ ಫೋಟೋಷೂಟ್​ ನೋಡಿ ಕ್ಯೂಟ್​ ಅಂತಿರೋ ಫ್ಯಾನ್ಸ್​, ನಿನ್ನ ಅಮ್ಮ ಭಾಗ್ಯಳ ಕೈಬಿಡಬೇಡಮ್ಮಾ ಎಂದು ಬುದ್ಧಿ ಮಾತು ಹೇಳುತ್ತಿದ್ದಾರೆ. ಅಪ್ಪನ ದುಡ್ಡಿಗೆ ಮರುಳಾಗಬೇಡ. ಆತ ಮೋಸಗಾರ. ನಿನಗೆ ಅಮ್ಮನೇ ಎಲ್ಲಾ ಎಂದೆಲ್ಲಾ ತನ್ವಿಗೆ ಹೇಳುತ್ತಿದ್ದಾರೆ. 

ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್​: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!