ಕನ್ನಡಿಗ ವಿನಯ್ 'ದಾವಣಗೆರೆ ಎಕ್ಸ್‌ಪ್ರೆಸ್' ಎಂಬ ಖ್ಯಾತಿ ಹೊಂದಿದ್ದು, ಮುಂಬರುವ'ಬಿಗ್ ಬಾಸ್ ಕನ್ನಡ 10' ಶೋನಲ್ಲಿ ಸ್ಪರ್ಧಿಸಲಿದ್ದಾರಾ? 'ಬಿಗ್ ಬಾಸ್-10' ರಿಯಾಲಿಟ್ ಶೋಗೆ ಇನ್ನೊಂದು ವಾರ ಬಾಕಿಯಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಅಕ್ಟೋಬರ್ 8 ರಿಂದ (8 ಅಕ್ಟೋಬರ್ 2023) ಬಿಗ್ ಬಾಸ್-10 ರಿಯಾಲಿಟಿ ಶೋ ಪ್ರಸಾರ ಕಾಣಲಿದೆ. ಸ್ಪರ್ಧಿಗಳ ಪಟ್ಟಿಯನ್ನು ಕಲರ್ಸ್ ಕನ್ನಡ ಚಾನೆಲ್ ಸೀಕ್ರೆಟ್ ಆಗಿ ಇಟ್ಟಿದೆ. ಹೊರಗಡೆ ಕೇಳಿ ಬರುತ್ತಿರುವ ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳೇ ಹೊರತೂ ಅಧಿಕೃತವಲ್ಲ. ಈಗಾಗಲೇ ಹಲವರ ಹೆಸರುಗಳು ಊಹೆ ಲಿಸ್ಟ್‌ನಲ್ಲಿದ್ದು, ಇದೀಗ 'ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ಕ್ರಿಕೆಟರ್ ವಿನಯ್ ಕುಮಾರ್ (Vinay Kumar ) ಹೆಸರು ಕೇಳಿ ಬರುತ್ತಿದೆ. ವಿನಯ್ ಕುಮಾರ್ ಹೆಸರು ಕಳೆದ ಬಾರಿಯ ಬಿಗ್ ಬಾಸ್-9 ರಲ್ಲೇ ಕೇಳಿ ಬಂದಿತ್ತು. ಆದರೆ, ವಿನಯ್ ಬಿಗ್ ಮನೆಗೆ ಬಂದಿರಲಿಲ್ಲ.
ಇದೀಗ ಮತ್ತೆ ಕ್ರಿಕೆಟರ್ ವಿನಯ್ ಕುಮಾರ್ ಹೆಸರು ಮುನ್ನೆಲೆಗೆ ಬಂದಿದೆ. ಭಾರತ ಟೀಮ್ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಅವರು ತಮ್ಮ ಕ್ರಿಕೆಟ್ ಕೆರಿಯರ್‌ನಲ್ಲಿ ವೃತ್ತಿ ಸ್ವಿಂಗ್ ಹಾಗೂ ನಿಖರವಾದ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾಗಿದ್ದವರು. ಈ ಕ್ರಿಕೆಟರ್ ಅಪ್ಪಟ ಕನ್ನಡಿಗ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಹಲವು ಬಾರಿ ಗೆಲ್ಲಿಸಿದ್ದಾರೆ.
ಕಂಗನಾ ರಣಾವತ್ 'ಚಂದ್ರಮುಖಿ-2' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಕನ್ನಡಿಗ ವಿನಯ್ 'ದಾವಣಗೆರೆ ಎಕ್ಸ್‌ಪ್ರೆಸ್' ಎಂಬ ಖ್ಯಾತಿ ಹೊಂದಿದ್ದು, ಮುಂಬರುವ'ಬಿಗ್ ಬಾಸ್ ಕನ್ನಡ 10' ಶೋನಲ್ಲಿ ಸ್ಪರ್ಧಿಸಲಿದ್ದಾರಾ? 'ಬಿಗ್ ಬಾಸ್-10' ರಿಯಾಲಿಟ್ ಶೋಗೆ ಇನ್ನೊಂದು ವಾರ ಬಾಕಿಯಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ವೈರಲ್ ಆಗಿದೆ. ಇಲ್ಲಿ ಕೂಡ, ಈ ಬಾರಿ 'ಬಿಗ್ ಬಾಸ್-10' ರಲ್ಲಿ ಕ್ರಿಕೆಟರ್ ವಿನಯ್ ಕುಮಾರ್ ಸ್ಪರ್ಧಿ ಎಂಬ ಬಗ್ಗೆ ಉಲ್ಲೇಖವಿದೆ.
1984ರಲ್ಲಿ ದಾವಣಗೆರೆಯಲ್ಲಿ ಜನಿಸಿರುವ ವಿನಯ್ ಕುಮಾರ್, ತಮ್ಮ ಬಾಲ್ಯದ ದಿನಗಳಲ್ಲಿ 'ಬೌಲಿಂಗ್' ಮೂಲಕ ಬಹಳಷ್ಟು ಗಮನ ಸೆಳೆದಿದ್ದರು. ಕ್ಲಬ್ ಕ್ರಿಕೆಟ್ ಹಾಗೂ ವಲಯ ಕ್ರಿಕೆಟ್‌ನಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ್ದ ವಿನಯ್, ಕರ್ನಾಟಕ ಹಿರಿಯರ ತಂಡಕ್ಕೆ ಕಾಲಿಟ್ಟು ಅಲ್ಲೂ ಕೂಡ ತಮ್ಮ ಕೈಚಳಕ ತೋರಿಸಿದ್ದಾರೆ. ಎದುರಾಳಿಗಳಿಗೆ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ 'ಡೇಂಜರ್' ಎನ್ನುವಂತಿದ್ದ ವಿನಯ್, 'ದಾವಣಗೆರೆ ಎಕ್ಸ್‌ಪ್ರೆಸ್' ಎಂದೇ ಖ್ಯಾತಿ ಪಡೆದಿದ್ದರು.