ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್​

Published : Jul 08, 2024, 09:19 PM IST
ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್​

ಸಾರಾಂಶ

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಸೀರಿಯಲ್​  ಮಕ್ಕಳಾದ ತನ್ವಿ ಮತ್ತು ಗುಂಡ ಜೊತೆ ಕುಂಟಬಿಲ್ಲೆ ಆಡಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ ಬರುತ್ತಿವೆ.  

ಗ್ರಾಮೀಣ ಆಟಗಳ ಸೊಗಡೇ ಬೇರೆ. ಈಗಿನ ಮಕ್ಕಳಿಗೆ ಅದರಲ್ಲಿಯೂ ನಗರ ಪ್ರದೇಶಗಳಲ್ಲಿನ ಮಕ್ಕಳಿಗೆ ಇದು ಬಲು ದೂರ. ಅದರಲ್ಲಿಯೂ ಕಂಪ್ಯೂಟರ್​ ಗೇಮ್​, ಮೊಬೈಲ್​  ಗೇಮ್​ ಬಂದ ಮೇಲಂತೂ ನಗರಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಥ ಆಟಗಳು ನಶಿಸಿ ಹೋಗುತ್ತಿವೆ. ಅದರಲ್ಲಿ ಒಂದು ಕುಂಟಬಿಲ್ಲೆ ಆಟ. ಈ ಆಟವನ್ನು ಈಗ ಆಡಿ ತೋರಿಸಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್​ ಸುಷ್ಮಾ ರಾವ್​. ಇವರಿಗೆ ಆಟದಲ್ಲಿ ಸಾಥ್​ ನೀಡಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್​ ಮಕ್ಕಳಾದ ತನ್ವಿ ಮತ್ತು ಗುಂಡ. ಅಷ್ಟಕ್ಕೂ, ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯಳಷ್ಟೇ ಮಹತ್ವ ಇರುವ ಕ್ಯಾರೆಕ್ಟರ್​ಗಳು ಅವಳ ಮಕ್ಕಳಾದ ತನ್ವಿ ಮತ್ತು ಗುಂಡ. ಅಮ್ಮನ ಪರವಾಗಿ ಮೊದಲಿನಿಂದಲೂ ಇರುವ ಪಾತ್ರ  ಮಗ ಗುಂಡಂದು. ಪೆದ್ದು ಅಮ್ಮನನ್ನು ಕಂಡರೆ ಆಗದೇ ಅಪ್ಪನ ಜೊತೆ ಅವಳನ್ನು ಸದಾ ಹೀಯಾಳಿಸುತ್ತಾ ಇದ್ದ ಕ್ಯಾರೆಕ್ಟರ್​ ತನ್ವಿ. ಆದರೆ ಈಗ ತನ್ವಿ ಬದಲಾಗಿದ್ದಾಳೆ. ಅಪ್ಪನ ಕೆಟ್ಟ ಬುದ್ಧಿ ತಿಳಿದಿದೆ. ಈಗ ಅವಳೂ ಅಮ್ಮನ ಪರ. ಅಮ್ಮನೇ ಈ ಇಬ್ಬರು ಮಕ್ಕಳ ಸರ್ವಸ್ವ. ಅಮ್ಮನಿಗೆ ಇಂಗ್ಲಿಷ್​ ಪಾಠವನ್ನೂ ಮಾಡುತ್ತಿದ್ದಾಳೆ ತನ್ವಿ.  

ಇವರೆಲ್ಲರೂ ಸೇರಿ ಕುಂಟಬಿಲ್ಲೆ ಆಟವಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ನಶಿಸಿ ಹೋಗ್ತಿರೋ ಇಂಥ ಆಟವನ್ನು ಇಂಥ ಕಲಾವಿದರು ತೋರಿಸಿದರೆ ಅದರಿಂದ ಒಂದಿಷ್ಟು ಉತ್ತೇಜನ ಸಿಗುತ್ತದೆ ಎನ್ನುತ್ತಿದ್ದಾರೆ. ಸುಷ್ಮಾ ರಾವ್​ ಅವರು ಸೋಷಿಯಲ್​  ಮೀಡಿಯಾದಲ್ಲಿ ಆ್ಯಕ್ಟೀವ್​  ಆಗಿದ್ದು, ಅಲ್ಲಿ ಈ ಆಟವನ್ನು ಶೇರ್​ ಮಾಡಿಕೊಂಡಿದ್ದಾರೆ. ಹಿಂದೆ ಸೀತಆರಾಮ ಸೀರಿಯಲ್​ ವೈಷ್ಣವಿ ಬುಗುರಿ ಆಟವಾಡಿ ತೋರಿಸಿದ್ದರು. ಹೀಗೆ ಕಲಾವಿದರು ಆಟವನ್ನು ಆಡಿ ತೋರಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕು  ಎನ್ನುವುದು ಅಭಿಮಾನಿಗಳ ಮಾತು. ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆಗೆ ಬರುವುದಾದರೆ,  ಸದ್ಯ ಭಾಗ್ಯಳ ಗೋಳು ಮುಗಿದಿದೆ. ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗ ಸಿಕ್ಕಿದೆ ಭಾಗ್ಯಳಿಗೆ. ಮಕ್ಕಳೆದುರು ಕೆಲಸದ ವಿಷಯ ಹೇಳಿದರೂ ಅತ್ತೆಯ ಎದುರು ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾಳೆ ಭಾಗ್ಯ. ಏಕೆಂದರೆ ಅವಳು ನೌಕರಿಗೆ ಹೋಗುವುದು ಅಲ್ಲಿ ಯಾರಿಗೂ ಇಷ್ಟವಿಲ್ಲ. ಇನ್ನು ಭಾಗ್ಯಳ ಮಗಳು ತನ್ವಿ ಈಗ ಬದಲಾಗಿದ್ದಾರೆ. ಪೆದ್ದು ಅಮ್ಮ ಎಂದು ಅಮ್ಮನ ಕಂಡರೆ ಆಗದಿದ್ದ ತನ್ವಿ ತನ್ನ ಅಪ್ಪ ತಾಂಡವ್​ನ ಅವತಾರ, ಅಮ್ಮ ಕಷ್ಟಪಡುತ್ತಿರುವ ರೀತಿ ಎಲ್ಲವನ್ನೂ ನೋಡಿ ಬದಲಾಗಿದ್ದಾಳೆ. ಈಗ ಅವಳಿಗೂ ಅಮ್ಮ ಎಂದರೆ ಅಚ್ಚುಮೆಚ್ಚು.  ಇದೀಗ ಈ ಇಬ್ಬರೂ ಅಮ್ಮ ಮತ್ತು ಮಕ್ಕಳು  ಸೇರಿ ಕುಂಟಬಿಲ್ಲೆ ಆಡಿ ಭೇಷ್​ ಎನ್ನಿಸಿಕೊಂಡಿದ್ದಾರೆ. ರಿಯಲ್​ ಜೀವನದಲ್ಲಿಯೂ ಇಂಥ ಅಮ್ಮ ಸಿಕ್ಕರೆ  ಮಕ್ಕಳಿಗೆ ಅದುವೇ ಸ್ವರ್ಗ ಎನ್ನುತ್ತಿದ್ದಾರೆ. 

ಕೆಲಸ ಸಿಕ್ಕ ಖುಷಿಯಲ್ಲಿ ಅಮ್ಮನ ಜೊತೆ ಭಾಗ್ಯ ಮಕ್ಕಳ ಭರ್ಜರಿ ಡಾನ್ಸ್​: ಮಧ್ಯೆ ಭಯ ಹುಟ್ಟಿಸಿದ ಅಜ್ಜಿ!

 ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್​. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ.  ಚಿಕ್ಕಮಗಳೂರಿನ ಕೊಪ್ಪ ಸುಷ್ಮಾ ಅವರು,  ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. 

ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು. ಕಳೆದ ಹತ್ತು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. 

ರಾಮನ ಮದುಮಗಳಾಗಿ ಸೀತಾ ರೆಡಿಯಾಗಿದ್ದು ಹೇಗೆ? ವಿಡಿಯೋದೊಂದಿಗೆ ಮಾಹಿತಿ ನೀಡಿದ ವೈಷ್ಣವಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!