ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್​ಗೆ ಶಿಕ್ಷೆ ಆಗತ್ತಾ, ಅಥ್ವಾ..?

Published : Mar 27, 2024, 04:58 PM IST
ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್​ಗೆ ಶಿಕ್ಷೆ ಆಗತ್ತಾ, ಅಥ್ವಾ..?

ಸಾರಾಂಶ

ಪರೀಕ್ಷೆಯಿಂದ ಡಿಬಾರ್​ ಮಾಡಲು ಕಾರಣವಾಗಿರುವ ಕನ್ನಿಕಾ ಮಿಸ್​ ಮೇಲೆ ಹರಿಹಾಯ್ದಿದ್ದಾಳೆ ಭಾಗ್ಯ. ಮುಂದೇನಾಗುತ್ತದೆ?  

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ... ಎನ್ನುವ ಗಾದೆ ಮಾತಿನಂತೆ ಭಾಗ್ಯ ಕೊನೆಗೂ ರಣಚಂಡಿ ಅವತಾರ ಎತ್ತಿದ್ದಾಳೆ. ತನಗೆ ಮತ್ತು ಮಗಳು ತನ್ವಿಗೆ ಪರೀಕ್ಷೆ ಬರೆಯಲು ಕೊಡದವರು ಕನ್ನಿಕಾ ಮಿಸ್​ ಎಂಬ ಅನುಮಾನ ಆಕೆಗೆ. ಏಕೆಂದರೆ ಮೊದಲ ದಿನದಿಂದಲೂ ಕನ್ನಿಕಾ ಭಾಗ್ಯ ವಿರುದ್ಧ ಕಿಡಿ ಕಾರುತ್ತಲೇ ಬಂದವಳು. ಪ್ರತಿಬಾರಿಯೂ ಅವಮಾನ ಎದುರಿಸಿದ್ದಳು. ಇದೇ ಕಾರಣಕ್ಕೆ ಪರೀಕ್ಷೆ ಬರೆಯಲು ಕೊಟ್ಟಿಲ್ಲ ಎನ್ನುವ ಸಿಟ್ಟಿನಲ್ಲಿ ಇದ್ದಾಳೆ ಭಾಗ್ಯ. ಹೇಗಾದರೂ ಮಾಡಿ ಮಗಳಿಗೆ ನ್ಯಾಯ ಕೊಡಿಸುವುದಾಗಿ ಮಾತು ಕೊಟ್ಟು ಬಂದಿದ್ದಾಳೆ. ಇತ್ತ ಕನ್ನಿಕಾ ಮನೆಯಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿರುವ ಸಂದರ್ಭದಲ್ಲಿ ಕಾಳಿ ಅವತಾರದಲ್ಲಿ ಬಂದಿರುವ ಭಾಗ್ಯಳನ್ನು ನೋಡಿ ಕನ್ನಿಕಾಗೆ ಶಾಕ್​ ಆಗಿದೆ. ಎಲ್ಲರ ಎದುರೂ ಏಕವಚನದಲ್ಲಿಯೇ ಕನ್ನಿಕಾಗೆ ಮಾತನಾಡಿರುವ ಭಾಗ್ಯ ಅವಳಿಗೆ ಚೆನ್ನಾಗಿ ಬೈದಿದ್ದಾಳೆ.

ಭಾಗ್ಯ ಮತ್ತು ಮಗಳು ತನ್ವಿ ಇಬ್ಬರ ಡೆಸ್ಕ್​, ಡಸ್ಟ್​ಬಿನ್​ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿದೆ. ಇದನ್ನು ನೋಡಿದ ಟೀಚರ್​ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್​ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್​ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್​ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ. ಇದಕ್ಕಾಗಿ ಭಾಗ್ಯ ಕನ್ನಿಕಾ ಮೇಲೆ ಕಿಡಿ ಕಾರುತ್ತಿದ್ದಾಳೆ. ಆದರೆ ಭಾಗ್ಯ ಏನೇ ಆರೋಪ ಮಾಡಿದರೂ  ಇದ್ಯಾವುದಕ್ಕೂ ಕನ್ನಿಕಾ ಜಗ್ಗುತ್ತಿಲ್ಲ. ನಾನೇ ಮಾಡಿಸಿದ್ದು ಎಂದು ಹೇಗೆ ಹೇಳುತ್ತಿಯಾ ಎಂದು ಕೇಳಿದ್ದಾಳೆ.

ಬಿಗ್​ಬಾಸ್​ ಸ್ಪರ್ಧಿಗಳ ಸುತ್ತ ವಿವಾದಗಳ ಹುತ್ತ... 4 ಕೋಟಿ ರೂ. ಕಾರು ಸೀಜ್​, 3 ಕೋಟಿ ರೂ. ದಂಡ!

ಅದಕ್ಕೆ ಭಾಗ್ಯ ಡೆಸ್ಕ್​ ಮೇಲೆ ಕಾಪಿ ಬರೆದಿರುವ ಹುಡುಗನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಆತ ಬಾಯಿ ಬಿಟ್ಟರೆ ನಿನ್ನ ಬಂಡವಾಳ ಬಯಲಾಗುತ್ತದೆ ಎಂದಿದ್ದಾಳೆ.  ಆದರೆ ಆ ಹುಡುಗ ಬಾಯಿಯೇ ಬಿಡದಿದ್ದರೆ ಎಂದು ಕನ್ನಿಕಾ ಕೇಳಿದ್ದಾಳೆ. ಅಲ್ಲಿಗೆ ಅವಳು ಏನೋ ಪ್ಲ್ಯಾನ್​ ಮಾಡಿರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗಾಗಲೇ ಭಾಗ್ಯಳಿಗೆ ಫೋನ್​ ಬರುತ್ತದೆ. ಕನ್ನಿಕಾ ಕುಹಕದಿಂದ ನಕ್ಕಿದ್ದಾಳೆ. ಅವಳ ಮುಂದಿನಪ್ಲ್ಯಾನ್​ ಏನು? ಇದಾಗಲೇ ಭಾಗ್ಯಳ ಹಾಲ್​ ಟಿಕೆಟ್​ ಕಾಣೆ ಮಾಡಿದ್ದು ತಾಂಡವ್​ ಆಗಿತ್ತು. ಆದರೆ ಕಾಪಿ ಬರೆದಿದ್ದು ಯಾರು ಎಂಬ ಬಗ್ಗೆ ಉತ್ತರ ಸಿಗಬೇಕಿದೆ. ತಾಂಡವ್​ ಪತ್ನಿಯ ವಿರುದ್ಧ ಮಸಲತ್ತು ಮಾಡಿದರೂ ಮಗಳ ವಿರುದ್ಧ ಅಂತೂ ಮಾಡಲು ಸಾಧ್ಯವಿಲ್ಲ. ಉಳಿದದ್ದು ಕನ್ನಿಕಾ ಮಿಸ್​ ಒಬ್ಬಳೇ. ಆದರೆ ಅವಳು ಏನೋ ಸಂಚು ಮಾಡಿದಂತೆ ಕಾಣುತ್ತಿದೆ. ಅಷ್ಟೇ ಅಲ್ಲದೇ ಫೋನ್​ ರಿಂಗ್​ ಆದಾಗಲೂ ನಕ್ಕಿದ್ದಾಳೆ. ಮುಂದೇನು?

ಆದರೆ ಇಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯ ಸಿಡಿದೆದ್ದಿರುವುದನ್ನು ನೋಡಿರುವ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ಭಾಗ್ಯಳಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ.  ಇದೀಗ ಮಗಳು ತನ್ವಿಗೆ ಪರೀಕ್ಷೆ ಬರೆಯುವಂತೆ ಮಾಡುವ ಜವಾಬ್ದಾರಿ ಭಾಗ್ಯ ಮೇಲಿದೆ.  ಆಕೆ ಸಕ್ಸಸ್ ಆಗ್ತಾಳಾ? ಮಗಳು ಕಾಪಿ ಮಾಡಲು ಭಾಗ್ಯಳೇ ಕಾರಣ ಎಂದು ತಾಂಡವ್​ ಕೂಡ ಕಿಡಿ ಕಾರಿದ್ದಾನೆ.  ತನ್ವಿ ಕಾಪಿ ಮಾಡಿದ್ದಾಳೆ ಎಂದು ನಂಬಿರೋ ಈತ, ಇದಕ್ಕೆಲ್ಲಾ ಭಾಗ್ಯಳೇ ಕಾರಣ ಎಂದಿದ್ದಾನೆ. ಅಲ್ಲಿಂದ ಹೊರಡಲು ರೆಡಿಯಾಗುವಷ್ಟರಲ್ಲಿ ಶ್ರೇಷ್ಠಾ ಅವನನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಮಗಳು ಕಷ್ಟದಲ್ಲಿ ಇರುವಾಗ ಅವನು ಹೋಗದಿದ್ದರೆ ಹೇಗೆ? ಪರೀಕ್ಷಾ ಕೊಠಡಿ ಸಮೀಪ ಬಂದಿದ್ದಾನೆ. ಅದಾಗಲೇ ಅಮ್ಮ-ಮಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹಾಕಲಾಗಿತ್ತು. ಅಪ್ಪನನ್ನು ನೋಡಿ ತನ್ವಿ ಕಣ್ಣೀರು ಹಾಕಿದ್ದಾಳೆ. ನಾನು ಕಾಪಿ ಮಾಡಲಿಲ್ಲ. ಇವೆಲ್ಲಾ ಹೇಗೆ  ಆಯಿತು ಎಂದು ತಿಳಿದಿಲ್ಲ ಎಂದಿದ್ದಾಳೆ. ಆದರೆ ಆಗಲೂ ಪತ್ನಿಯ ಮೇಲೆ ಕಿಡಿ ಕಾರಿರುವ ತಾಂಡವ್​, ಭಾಗ್ಯಳನ್ನು ಚೆನ್ನಾಗಿ ಬೈದಿದ್ದಾನೆ. ಹೇಗಾದರೂ ಮಾಡಿ ಮಗಳಿಗೆ ಪರೀಕ್ಷೆ ಬರೆಸಲೇಬೇಕು ಎನ್ನುವ ಪಣ ತೊಟ್ಟಿದ್ದಾಳೆ ಭಾಗ್ಯ. ಮುಂದೇನಾಗುತ್ತದೆ ಎಂದು ನೋಡಬೇಕಿದೆ. 

ಠುಮಕ... ಠುಮಕ... ಹಾಡಿಗೆ ಸುಧಾರಾಣಿ ಭರ್ಜರಿ ಸ್ಟೆಪ್​: ನಿಮ್ಮ ಲೆವೆಲ್ಲೇ ಬೇರೆ ಬಿಡಿ ಮೇಡಂ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!