ಬಿಗ್​ಬಾಸ್​ ಸ್ಪರ್ಧಿಗಳ ಸುತ್ತ ವಿವಾದಗಳ ಹುತ್ತ... 4 ಕೋಟಿ ರೂ. ಕಾರು ಸೀಜ್​, 3 ಕೋಟಿ ರೂ. ದಂಡ!

Published : Mar 27, 2024, 04:12 PM IST
ಬಿಗ್​ಬಾಸ್​ ಸ್ಪರ್ಧಿಗಳ ಸುತ್ತ ವಿವಾದಗಳ ಹುತ್ತ...  4 ಕೋಟಿ ರೂ. ಕಾರು ಸೀಜ್​, 3 ಕೋಟಿ ರೂ. ದಂಡ!

ಸಾರಾಂಶ

ಬಿಗ್​ಬಾಸ್​ ಸ್ಪರ್ಧಿ, ಯೂಟ್ಯೂಬರ್ ಅನುರಾಗ್ ದೋಬಲ್ ಅವರ ನಾಲ್ಕು ಕೋಟಿ ರೂಪಾಯಿ ಕಾರು ಸೀಜ್​ ಆಗಿದ್ದು, 3 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟಕ್ಕೂ ಆಗಿದ್ದೇನು?   

ವಿವಾದಗಳಿಂದ ಕುಖ್ಯಾತಿ ಪಡೆದರಷ್ಟೇ ಬಿಗ್​ಬಾಸ್​ ಮನೆಯೊಳಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳಲು ಸಾಧ್ಯ ಎನ್ನುವ ಮಾತಿದೆ. ಆದರೆ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೂ ಹಲವು ವಿವಾದಗಳು ಕೆಲವು ಬಿಗ್​ಬಾಸ್​ ಸ್ಪರ್ಧಿಗಳ ಮೇಲೆ ಸುತ್ತುವರಿಯುತ್ತಲೇ ಇರುತ್ತದೆ.  ಬಿಗ್​ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಎಲ್ವಿಶ್ ಯಾದವ್, ಹಾವಿನ ವಿಷದ ರೇವ್ ಪಾರ್ಟಿ ಆಯೋಜಿಸಿದ ಆರೋಪದಲ್ಲಿ ಕೆಲ ದಿನಗಳ ಹಿಂದಷ್ಟೆ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಬಿಗ್​ಬಾಸ್ 17ರ ವಿಜೇತ ಮುನಾವತ್ ಫಾರುಖಿ ಹುಕ್ಕಾ ಬಾರ್ ಒಂದರಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. 

ಅದೇ ರೀತಿ ಹಿಂದಿನ ಬಿಗ್​ಬಾಸ್​ ಸೀಸನ್​ 17ರಲ್ಲಿ ಸ್ಪರ್ಧಿಯಾಗಿದ್ದ ಯೂಟ್ಯೂಬರ್ ಅನುರಾಗ್ ದೋಬಲ್ (Anurag Dobhal) ಅವರ 4 ಕೋಟಿ ಬೆಲೆಯ ಐಶಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, 3 ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ. ಅನುರಾಗ್ ದೋಬಲ್ ಅವರು, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.  ಐಪಿಎಲ್ ಮ್ಯಾಚ್​  ವಿಡಿಯೋ ಮಾಡಲೆಂದು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ವಿಶೇಷವಾಗಿ ಐಪಿಎಲ್ ಸೀಸನ್​ನಲ್ಲಿ ಕಂಟೆಂಟ್ ಕ್ರಿಯೇಷನ್ ಮಾಡಲೆಂದು ಈ ಕಾರು ಖರೀದಿ ಮಾಡಲಾಗಿತ್ತು. ಕ್ರಿಕೆಟಿಗ ಸುರೇಶ್ ರೈನಾ ಜತೆ ವಿಡಿಯೊ ಮಾಡಿ ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದು, ಅವರಿಗೆ ದಂಡ ವಿಧಿಸಿದ್ದಾರೆ.

27 ಕೆ.ಜಿ ತೂಕ ಇಳಿಸಿಕೊಂಡ ಬೋನಿ ಕಪೂರ್​: ಪತ್ನಿ ಶ್ರೀದೇವಿ ನೀಡಿದ್ದ ಟಿಪ್ಸ್ ನೆನಪಿಸಿಕೊಂಡ ನಿರ್ಮಾಪಕ

ಚಿತ್ರೀಕರಣ ಮುಗಿದ ನಂತರ, ಅನುರಾಗ್ ಮುಂಬೈಗೆ ಪ್ರಯಾಣಿಸುವ ಉದ್ದೇಶವನ್ನು ಹೊಂದಿದ್ದರು. ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜತೆಗೆ ಲ್ಯಾಂಬೊರ್ಗಿನಿ ಕಾರನ್ನು ಸಹ ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲ, 3 ಕೋಟಿ ರೂ. ದಂಡವನ್ನೂ ವಿಧಿಸಿದ್ದಾರೆ.

ಅಂದಹಾಗೆ, ಅನುರಾಗ್ ದೋಬಲ್  4 ಕೋಟಿಗೂ ಹೆಚ್ಚು ಬೆಲೆಯ ಲ್ಯಾಂಬೊರ್ಗಿನಿ ಹುರಿಕೇನ್ ಕಾರನ್ನು  ಇತ್ತೀಚೆಗಷ್ಟೆ ಖರೀದಿ ಮಾಡಿದ್ದರು.   ಚೆನ್ನೈಗೆ ಕಾರನ್ನು ಪ್ಲಾಟ್​ಬೆಡ್ ಮೇಲೆ ಟ್ರಾನ್ಸ್​ಪೋರ್ಟ್ ಮಾಡಿಕೊಂಡು ಇಲ್ಲಿ ಸುರೇಶ್ ರೈನಾ ಜೊತೆ ಶೂಟ್ ಮಾಡಿದ್ದ ಅವರು, ಮುಂದಿನ ಶೂಟ್​ಗಾಗಿ ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ದೊಡ್ಡ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜೊತೆಗೆ ಲ್ಯಾಂಬೊರ್ಗಿನಿ ಕಾರನ್ನು ಸಹ ಸೀಜ್ ಮಾಡಿದ್ದಾರೆ. ಈ ದೃಶ್ಯಗಳನ್ನೂ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಶೇರ್​ ಮಾಡಿದ್ದಾರೆ.  

ವೀರ್​ ಸಾವರ್ಕರ್​ ಚಿತ್ರಕ್ಕೆ ಸಂಭಾವನೆ ಬೇಡವೆಂದ ಬಿಗ್​ಬಾಸ್​​ ಖ್ಯಾತಿಯ ಅಂಕಿತಾ ಲೋಖಂಡೆ: ಮಾಹಿತಿ ರಿವೀಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?