ಬೆಂಗಳೂರು ಜನರೇ ನಿಮಗೆ ನೀರು ಬೇಕಾದಲ್ಲಿ ಮಾಸಿಕವಾಗಿ ಹೆಚ್ಚುವರಿ 6,000 ರೂ. ವೆಚ್ಚ ಭರಿಸಲು ಸಿದ್ಧರಾಗಿ ಎಂದು ವಿಕಿಪೀಡಿಯಾ ಅವರು ವಿಡಿಯೋ ಮೂಲಕ ಸಲಹೆ ನೀಡಿದ್ದಾರೆ.
ಬೆಂಗಳೂರು (ಮಾ.07): ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನರು ಕಾವೇರಿ ನೀರಿನ ಸರಬರಾಜು ಇಲ್ಲದ್ದರಿಂದ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಿಂಗಳಿನಿಂದ ಮೆನಯ ವೆಚ್ಚದಲ್ಲಿ ನೀರಿಗಾಗಿ ಒಟ್ಟು 6,000 ರೂ. ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ ಎಂಬ ಸುಳಿವನ್ನು ನೀಡಲಾಗಿದೆ.
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಶುರುವಾದ ಬೆನ್ನಲ್ಲಿಯೇ ಎಲ್ಲ ಖಾಸಗಿ ಮಾಲೀಕರ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಸಿಕೊಂಡ ಸರ್ಕಾರವು, ಈಗ ದರವನ್ನು ನಿಗದಿಗೊಳಿಸಿದೆ. ಈ ಮೂಲಕ ಸಾರ್ವಜನಿಕರಿಂದ ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರಿಂದ ಉಂಟಾಗುತ್ತಿದ್ದ ಸುಲಿಗೆಯನ್ನು ತಪ್ಪಿಸಿದ್ದಾರೆ. ಆದರೆ, ಇನ್ನು 6,000 ಲೀ. ನೀರಿನ ಟ್ಯಾಂಕರ್‌ವೊಂದಕ್ಕೆ ಕನಿಷ್ಠ 600 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲಿಯೇ ಒಂದು ತಿಂಗಳಿಗೆ ಕನಿಷ್ಠ 6,000 ರೂ. ಹಣವನ್ನು ಹೆಚ್ಚಾಗಿ ವೆಚ್ಚ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಕಾಸ್ ಅಲಿಯಾಸ್ ವಿಕ್ಕಿಪಿಡಿಯಾ ಅವರು ಬೆಂಗಳೂರಿನ ನೀರಿನ ಸಮಸ್ಯೆ ಕುರಿತಾಗಿ ವಿಡಿಯೋವೊಂದನ್ನು ಮಾಡಿ ಹರಿಬಿಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ನೀರಿನ ಟ್ಯಾಂಕರ್‌ಗೆ ಕೇವಲ 600 ರೂ. ದರ ನಿಗದಿಪಡಿಸಿದ ಸರ್ಕಾರ!
ಬೆಂಗಳೂರಿನಲ್ಲಿ ಒಂದು ತಿಂಗಳಿಗೆ ನೀರನ ವೆಚ್ಚಕ್ಕಾಗಿ 6 ಸಾವಿರ ರೂ. ಹಣವನ್ನು ಕೊಡಿ ಎಂದು ಗಂಡನ ಬಳಿ ಕೇಳಿದ್ದಾಳೆ. ಆದರೆ, ಮಾಸಿಕ ನೀರಿನ ಬಿಲ್ ಸರಾಸರಿ 500 ರೂ. ಪಾವತಿ ಮಾಡುತ್ತೇವೆ. ಆದರೆ, ಏಕಾಏಕಿ 6 ಸಾವಿರ ರೂ. ಬೇಕೆಂದು ಕೇಳಿದಾಗ ಗಂಡ ಶಾಕ್ ಆಗಿದ್ದಾನೆ. ನಂತರ, ಹೆಂಡತಿ ಗಂಡನನ್ನು ಕರೆದುಕೊಂಡು ಹೋಗಿ ನದಿಗಳು, ಕೆರೆಗಳು, ಕೊಳವೆ-ಬಾವಿ, ನೀರಿನ ಸಂಪ್ ಎಲ್ಲ ಜಲಮೂಲಗಳಲ್ಲಿಯೂ ನೀರಿಲ್ದೇ ಒಣಗೊದ ಬಗ್ಗೆ ತೋರಿಸಿದ್ದಾಳೆ. ಆಗ ಏನಿಲ್ಲಾ.. ಏನಿಲ್ಲಾ ಎಂಬ ಹಾಡಿನ ಮಾದರಿಯಲ್ಲಿ ನೀರಿಲ್ಲಾ... ನೀರಿಲ್ಲಾ.. ಎಂದು ಹಾಡನ್ನು ಹಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಂತೆ ಪ್ರತಿ ಮೂರು ದಿನಕ್ಕೊಮ್ಮೆ ಒಂದು ಟ್ಯಾಂಕರ್ ನೀರಿಗೆ (6 ಸಾವಿರ ಲೀ. ಸಾಮರ್ಥ್ಯದ ಒಂದು ಟ್ಯಾಂಕರ್‌ಗೆ) 600 ರೂ.ನಂತೆ ಪಾವತಿ ಮಾಡುತ್ತಾ ಹೋದರೆ, 30 ದಿನಗಳಲ್ಲಿ 10 ಟ್ಯಾಂಕರ್ ನೀರನ್ನು ಮನೆಗೆ ಹಾಕಿಸಿಕೊಳ್ಳಬೇಕಾಗುತ್ತದೆ. ಆಗ ಒಂದು ತಿಂಗಳಿಗೆ ನೀರಿನ ವೆಚ್ಚ 6,000 ರೂ. ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ನೀರಿನ ವೆಚ್ಚವನ್ನು ಭರಿಸಲು ಸಿದ್ಧರಾಗಿ ಎಂಬ ಸಂದೇಶವನ್ನೂ ಇನ್ಸ್‌ಸ್ಟಾಗ್ರಾಂ ಮೂಲಕ ಹಂಚಲಾಗಿದೆ.
ಸರ್ಕಾರದಿಂದ ನಿಗದಿ ಮಾಡಲಾದ ನೀರಿನ ದರಗಳ ಪಟ್ಟಿ ಇಲ್ಲಿದೆ ನೋಡಿ:
100 ಮೀಟರ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನೀರಿ ಸರಬರಾಜಿಗೆ ದರ:
ಟ್ಯಾಂಕರ್‌ಗಳು ಕ್ಯಾಪಾಸಿಟಿ ನಿಗದಿಪಡಿಸಿದ ದರ
6000 ಲೀ. ನೀರಿನ ಟ್ಯಾಂಕರ್ 600 ರೂಪಾಯಿ
8000 ಲೀ. ನೀರಿನ ಟ್ಯಾಂಕರ್ 700 ರೂಪಾಯಿ
12,000 ಲೀ ವಾಟರ್ ಟ್ಯಾಂಕರ್ 1,000 ರೂಪಾಯಿ
ಬಿಬಿಎಂಪಿಯಲ್ಲಿ ಕೈ-ಕೈ ಹಿಡಿದುಕೊಂಡು ಕುಣಿದಾಡಿದ ಮಾಲಾಶ್ರೀ-ರವಿಚಂದ್ರನ್ ಜೋಡಿ!
5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ದರ:
6000 ಲೀ. ನೀರಿನ ಟ್ಯಾಂಕರ್ 750 ರೂಪಾಯಿ
8000 ಲೀ. ನೀರಿನ ಟ್ಯಾಂಕರ್ 850 ರೂಪಾಯಿ
12,000 ಲೀ ವಾಟರ್ ಟ್ಯಾಂಕರ್ 1,200 ರೂಪಾಯಿ
ಇನ್ನು 8,000 ಲೀ.ನಿಂದ 12,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳು 10 ಕಿ.ಮೀ.ಗಿಂತ ದೂರವಿದ್ದಲ್ಲಿ ಪ್ರತಿ ಕಿ.ಮೀಗೆ ತಲಾ 50 ರೂ. ಹೆಚ್ಚುವರಿಯಾಗಿ ಹಣ ನೀಡುವಂತೆ ಆದೇಶ ಹೊರಡಿಸಲಾಗಿದೆ.