
ವಾರಾಂತ್ಯ ಸಮೀಪ ಬಂದ ಹಾಗೆ ಎಲಿಮಿನೇಷನ್ ತೂಗುಗತ್ತಿಯಡಿಯಲ್ಲಿ ಸ್ಪರ್ಧಿಗಳೆಲ್ಲ ನಡುಗುತ್ತಿದ್ದಾರೆ. ಒಬ್ಬರನ್ನೊಬ್ಬರು ಮಣಿಸಲು, ಹಣಿಯಲು ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇದು ಪರಪಸ್ಪರ ದೂಷಣೆಗೂ, ಜಗಳಕ್ಕೂ ಎಡೆ ಮಾಡಿಕೊಡುತ್ತಿದೆ. ಅದರ ಒಂದು ಝಲಕ್ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಮನೆಯ ಕ್ಯಾಪ್ಟನ್, ‘ಈ ಟಾಸ್ಕ್ ಯಾರು ಆಡುತ್ತಿಲ್ಲವೋ ಅವರು ನೆಕ್ಸ್ಟ್ ಟಾಸ್ಕ್ ಆಡಿ’ ಎಂದು ಸಂಗೀತಾ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತುಕಾಲಿ ಸಂತೋಷ್ ಅವರು, ‘ವೋಟಿಂಗ್ ಅಂತ ಸ್ಟಾರ್ಟ್ ಮಾಡಿದ್ರಿ.
ಹೋಗ್ತಾ ಹೋಗ್ತಾ ಈಗ ಯಾರಿಗೆ ಅವಕಾಶ ಸಿಗಲ್ವೋ ಅವರು ಆಡಬೇಕು ಅಂತಿರಾ… ಇಲ್ಲಿ ವೋಟಿಂಗ್‌ನಿಂದಾನೇ ಎಲ್ಲಾನೂ ಆಗಬೇಕು’ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಅವರ ಮಾತಿಗೆ ಸಿಟ್ಟಿಗೆದ್ದಿರುವ ವಿನಯ್ ತುಕಾಲಿ ಜೊತೆಗೆ ಜಗಳಕ್ಕಿಳಿದಿದ್ದಾರೆ. ‘ಏನ್ ಮಾಡ್ತೀಯಾ ನೀನು? ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ. ನೀನು ಫಸ್ಟ್ ಡೇನಿಂದ ಏನು ಮಾಡ್ಕೊಂಡ್ ಬಂದಿದೀಯಾ ಅಂತ ಎಲ್ಲರಿಗೂ ಗೊತ್ತು’ ಎಂದು ಕಿರುಚಾಡಿದ್ದಾರೆ. ತುಕಾಲಿ ಕೂಡ ಜಗ್ಗದೇ ಅವರಷ್ಟೇ ಎತ್ತರದ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ಅವರು, ‘ಅಂಥ ಪದಗಳನ್ನೆಲ್ಲ ಬಳಸಬೇಡಿ ಇಲ್ಲಿ.
ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನಡೆಯುವಾಗ ಕಾರ್ತಿಕ್, ನಮ್ರತಾ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಸುಮ್ಮನೆ ಕುಳಿತಿರುತ್ತಾರೆ. ಅದರ ಮಧ್ಯೆಯೇ ಹೀಟೆಡ್ ಆಗ್ರ್ಯೂಮೆಂಟ್ ಶುರುವಾಗುತ್ತದೆ. ಸಂಗೀತಾ ಅವರು ಸೈಲೆಂಟಾಗಿ ಈ ಎಲ್ಲ ಫೈಟ್ ನೋಡಿದ್ದಾರೆ. ನಮ್ರತಾ ಅವರು ಕೂಡಾ ಇವರ ಜಗಳ ನೋಡಿ ಇವರದ್ದೇನು ಫೈಟಿಂಗ್ ಎಂಬಂಥಹಾ ರಿಯಾಕ್ಷನ್ ಕೊಟ್ಟಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಮನೆಯೊಳಗೆ ಡು ಆರ್ ಡೈ ಹೋರಾಟ ಶುರುವಾಗಿರುವುದಂತೂ ಖಚಿತ. ಇದರಲ್ಲಿ ಯಾರು ಗೆಲ್ತಾರೆ. ಯಾರು ಸೋತು ಗೇಟ್‌ಪಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ವಾರಾಂತ್ಯದ ಎಪಿಸೋಡ್‌ನಲ್ಲಿ ಕಾದುನೋಡೇಕು.
ಬಂದೆ ಬಿಡ್ತು ಸಂತು ಪಂತು ದೂರಾಗುವ ದಿನ: ಮನೆಯಿಂದ ಹೊರಗೆ ಹೋಗೋದು ವರ್ತೂರಾ- ತುಕಾಲಿನಾ?
ಡ್ರೋನ್ ಪ್ರತಾಪ್ ವಿರುದ್ಧ 50 ಲಕ್ಷ ರೂ. ಮಾನನಷ್ಟ ಕೇಸ್: ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದ ಬಿಗ್‌ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಈಗ ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅಧಿಕಾರಿ ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ಪ್ರಕಾರ, ಪ್ರಯಾಗ್ ರಾಜ್ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರಕ್ಕೆ ವಾದ – ಪ್ರತಿವಾದ ನಡೆದಿದ್ದು, ಪ್ರತಾಪ್‌ಗೆ ನೋಟಿಸ್ ನೀಡಲಾಗಿದೆ. ಮಾನನಷ್ಟ ಮೊಕದ್ದಮೆಗೆ ಉತ್ತರಿಸಲು ಅವಕಾಶ ನೀಡಿದ್ದು, ಮುಂದಿನ ವಿಚಾರಣೆ ಕೋರ್ಟ್‌ನಲ್ಲಿ ಇತ್ಯರ್ಥವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.