
ಬಿಗ್ಬಾಸ್ ಸೀಸನ್ 10, ಕಾಂಟ್ರವರ್ಸಿ, ಚೀರಾಟ, ಒದರಾಟ, ಬೈದಾಟಗಳಿಂದಲೇ ಈ ಬಾರಿ ಫೇಮಸ್ ಆಗ್ಹೋಗಿರೋದು. ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ, ಕಂಟೆಸ್ಟಂಟ್ ಒಂದೇ ಒಂದು ದಿನ ಖುಷಿ-ಖುಷಿಯಾಗಿ ಕಳೆದಿರೋದೇ ಇಲ್ಲ. ಅಷ್ಟೋ ಇಷ್ಟೋ ಫ್ಯಾಮಿಲಿ ರೌಂಡ್ನಲ್ಲಿ, ನಕ್ಕಿದ್ದು ಅಷ್ಟೆ. ಅದರಲ್ಲೂ ಕಂಟೆಸ್ಟಂಟ್ ವಿನಯ್ ಎಲ್ಲೆಲ್ಲಿ ಇರ್ತಾರೋ ಅಲ್ಲೆಲ್ಲ ಜಗಳ ಆಗಿದ್ದೇ ಹೆಚ್ಚು. ಈ ವಾರದ ಆರಂಭದಲ್ಲೇ ವಿನಯ್ ಮತ್ತೆ ರೊಚ್ಚಿಗೆದ್ದಿದ್ದಾರೆ. ಅದು ಕೂಡ ಮನೆಯಲ್ಲಿ ಸದಾ ಶಾಂತವಾಗಿರೋ ಡ್ರೋಣ್ ಪ್ರತಾಪ್ ವಿರುದ್ಧ. ಬಿಗ್ಬಾಸ್ ಮನೆಯಲ್ಲಿರೋರನ್ನ ಕೆಣಕಿ-ಕೆಣಕಿ ಜಗಳಕ್ಕೆ ಹೋಗೋರಲ್ಲಿ ವಿನಯ್ ಎಕ್ಸ್ಪರ್ಟ್.
ಮೊದ ಮೊದಲಿಗೆ ಸಂಗೀತಾ ಜೊತೆ ಜಗಳ ಆಡಿಯೇ ಎಲ್ಲರ ಗಮನ ಸೆಳೆದಿದ್ದ ವಿನಯ್ ಕೊನೆಗೆ ಕಾರ್ತಿಕ್, ತನಿಶಾ, ಸಿರಿ ಅವರ ಜೊತೆಗೂ ಜಗಳ ಆಡಿದ್ದುಂಟು. ಈಗ ಬಿಗ್ಬಾಸ್ ಫೈನಲ್ಗೆ, ಕೆಲವೇ ಕೆಲವು ವಾರ ಬಾಕಿ ಇದೆ ಅನ್ನೊವಾಗ್ಲೇ ವಿನಯ್, ಡ್ರೋಣ್ ಪ್ರತಾಪ್ ಮೇಲೆ ಮುಗಿಬಿದ್ದಿದ್ದಾರೆ. ಪ್ರತಾಪ್ ಅಮಾಯಕನಂತೆ ನಟಿಸುತ್ತಾ ಎಲ್ಲರ ಸಿಂಪತಿ ಗಿಟ್ಟಿಸ್ಕೊಳ್ತಾನೆ ಎಂದು ವಿನಯ್ ಆರೋಪ ಮಾಡಿದ್ದಾರೆ. ಈ ಮಾತು ಪ್ರತಾಪ್ಗೆ ಸ್ವಲ್ಪವೂ ಇಷ್ಟವಾಗಿರ್ಲಿಲ್ಲ. ಇದರ ಎಫೆಕ್ಟ್ ಈಗ ಇವರಿಬ್ಬರ ನಡುವೆ ಮಾತಿನ ಯುದ್ಧ ಆರಂಭವಾಗಿದೆ. ಕಳೆದೆರಡು ವಾರದಿಂದ ಶಾಂತವಾಗಿದ್ದ ವಿನಯ್ ಈಗ ಮತ್ತೆ ಹಳೆ ವರಸೆ ಶುರು ಮಾಡಿದ್ದಾರೆ.
ಬಿಗ್ಬಾಸ್ ಮನೆ, ಡ್ರೋಣ್ ಪ್ರತಾಪ್ ಹಾಗೂ ವಿನಯ್ ವಾದ ವಿವಾದಕ್ಕೆ ಕುರುಕ್ಷೇತ್ರವೇ ಆಗ್ಹೋಗಿದೆ. ವಿನಯ್ ರೋಶಾವೇಶದ ಮಾತುಗಳಿಗೆ ಸುಮ್ಮನಾಗದ ಡ್ರೋಣ್ ಪ್ರತಾಪ್, ವಿನಯ್ಗೆ ಸರಿಯಾಗಿ ಟಕ್ಕರ್ ಕೊಟ್ಟಿದ್ದಾರೆ. ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗ್ತಿದ್ದ ಹಾಗೆಯೇ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಇವರು ಮಧ್ಯ ಬಂದು ಜಗಳ ನಿಲ್ಲಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ಆದರೂ ಡ್ರೋಣ್ ಪ್ರತಾಪ್, ಪರಿಣಾಮ ನೆಟ್ಟಗಿರೋಲ್ಲ ಎಂದು ವಿನಯ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇವರಿಬ್ಬರ ಈ ಜಟಾಪಟಿ ನೋಡ್ತಿದ್ರೆ, ಬಿಗ್ಬಾಸ್ ಮನೆಯಲ್ಲಿ ಈಗ ಇನ್ಯಾವ ತಿರುವು ಸಿಗಲಿದೆ ಅನ್ನೊ ಕುತೂಹಲ ಬಿಗ್ಬಾಸ್ ವೀಕ್ಷಕರಿಗೆ ಕಾಡ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.