ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಯಾರು?

By Mahmad Rafik  |  First Published Oct 6, 2024, 12:00 PM IST

ಬಿಗ್‌ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ಕಿಚ್ಚನ ಪಂಚಾಯ್ತಿ ಮುಕ್ತಾಯವಾಗಿದ್ದು, ಈ ವಾರ ಯಾರು ಮನೆಯಿಂದ ಹೊರಗೆ ಬರುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. 


ಬೆಂಗಳೂರು: ಮೊದಲ ವಾರದ ಕಿಚ್ಚನ ಪಂಚಾಯ್ತಿ ಮುಕ್ತಾಯವಾಗಿದ್ದು, ಇಂದು ಬಿಗ್‌ಬಾಸ್ ಮನೆಯಿಂದ ಯಾರು ಹೊರಗೆ ಬರಲಿದ್ದಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಬಹುತೇಕ ಎಲ್ಲಾ ಆಟಗಾರರು ಅಗ್ರೆಸ್ಸಿವ್‌ ಆಗಿಯೇ ಆಡಲು ಶುರು ಮಾಡಿದ್ದರು. ಈ ಹಿಂದಿನ 10 ಸೀಸನ್‌ಗ 9ನೇ ಎಪಿಸೋಡ್‌ನಿಂದ ಕಾಣಿಸುತ್ತಿದ್ದ ವಾತಾವರಣ ಮೊದಲನೇ ವಾರದಿಂದಲೇ ಶುರುವಾಗಿತ್ತು. ಸ್ವರ್ಗ ಮತ್ತು ನರಕವಾಸಿಗಳೆಂದು ಮನೆ ಎರಡು ಭಾಗವಾಗಿದ್ದು, ಮೊದಲ ಎಪಿಸೋಡ್‌ನಿಂದಲೇ ವೀಕ್ಷಕರನ್ನು ಬಿಗ್‌ಬಾಸ್ ಆಕರ್ಷಿಸುತ್ತಿದೆ. ಬಿಗ್‌ಬಾಸ್ ಎಕ್ಸಪೋಸ್ ಮಾಡ್ತೀನಿ ಎಂದಿದ್ದ ಜಗದೀಶ್‌ಗೆ ಕಿಚ್ಚ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು.

ಗೌತಮಿ ಜಾಧವ್, ಶಿಶಿರ್‌ ಶಾಸ್ತ್ರಿ, ಯಮುನಾ ಶ್ರೀನಿಧಿ, ಹಂಸಾ, ಭವ್ಯ ಗೌಡ, ಲಾಯರ್ ಜಗದೀಶ್, ಮಾನಸಾ, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಹಂಸಾ ಮೊದಲ ವಾರದ ಕ್ಯಾಪ್ಟನ್ ಆಗಿರೋದರಿಂದ ಸೇಫ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಮೊದಲ ಧರ್ಮ ಕೀರ್ತಿರಾಜ್, ಮೋಕ್ಷಿತಾ ಪೈ ಮತ್ತು ಗೌತಮಿ ಜಾಧವ್ ಮನೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ಆಟವನ್ನು ಆರಂಭಿಸಬೇಕು ಎಂಬ ಸಲಹೆಯನ್ನು ಸುದೀಪ್ ಮೊದಲ ವಾರದಲ್ಲಿಯೇ ಹೇಳಿದ್ದಾರೆ.

Tap to resize

Latest Videos

undefined

Bigg Boss Kannada - 11 ಧನರಾಜ್ ವಿನಯ್ ಆಗಿ ಬದಲಾಗ್ತಾ ಇದ್ದಾರ? ಹಾಗಿದ್ರೆ ಈ ಬಾರಿ ಎಲಿಮಿನೇಶನ್ ಆಗ್ತಿರೋರು ಇವ್ರೇನಾ?
 
ಮೊದಲ ಕಿಚ್ಚನ ಪಂಚಾಯ್ತಿಯಲ್ಲಿ ಬಹುತೇಕ ಸ್ಪರ್ಧಿಗಳಿಗೆ ತಾವೇನು ಮಾಡ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಾಗಿದೆ. ಮನೆಯಲ್ಲಿ ನಿಮ್ಮ ಸಾಮಾರ್ಥ್ಯವನ್ನು ಮೀರಿ ನಿಮಗೆ ನೀವೇ ಸವಾಲುಗಳನ್ನು ಹಾಕಿಕೊಳ್ಳಿ. ಎಲ್ಲರೂ ನಿಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬಂದಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ಇನ್ನು ಅಭಿವೃದ್ಧಿ ಮಾಡಿಕೊಳ್ಳುವ ಅವಕಾಶಗಳು ನಿಮಗೆಲ್ಲರಿಗೂ ಇದೆ. ಹಾಗಾಗಿ ಅದನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 

ಶನಿವಾರದ ಸಂಚಿಕೆಯಲ್ಲಿ ಭವ್ಯ ಗೌಡ, ಗೌತಮಿ ಜಾಧವ್ ಮತ್ತು ಮಾನಸಾ ಸೇಫ್ ಆಗಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಶಶಿರ್ ಶಾಸ್ತ್ರಿ, ಹಂಸಾ, ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಉಳಿದಿದ್ದು, ಇವರಲ್ಲಿ ಯಾರು ಹೊರಗೆ ಬರುತ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಯಮುನಾ ಶ್ರೀನಿಧಿ ಹೆಸರು ಕೇಳಿ ಬರುತ್ತಿದ್ದು, ಆದರೆ ಕೆಲವರು ಮೋಕ್ಷಿತಾ ಮನೆಯಿಂದ ಹೊರಗೆ ಬರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮೊದಲನೇ ವಾರಕ್ಕೆ ಜಗದೀಶ್ ತುಂಬಾ ಕಿರಿಕಿರಿಯನ್ನುಂಟು ಮಾಡಿದ್ದು, ಅವರು ಬಂದ್ರೆ ಸೂಕ್ತ ಎಂಬುವುದು ಹಲವರ ಅಭಿಪ್ರಾಯ ವ್ಯಕ್ತವಾಗಿದೆ. 

BBK11: ಬೆಂಕಿಯಲ್ಲಿ ಬೆಂದ ಸ್ಪರ್ಧಿಗಳು, ವೀಕೆಂಡ್‌ನಲ್ಲಿ ಯಾರಿಗೆ ಸಿಗುತ್ತೆ ಬಿಗ್‌ ಬಾಸ್‌ ಗೇಟ್‌ಪಾಸ್‌!

click me!