
ಬಿಗ್ ಬಾಸ್ ಸೀಸನ್ 11 (Bigg Boss Season 11) ರಲ್ಲಿ ತಮ್ಮ ಕಲ್ಮಶವಿಲ್ಲದ ಆಟ ಹಾಗೂ ಮುಗ್ಧತೆಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಅನುಷಾ ರೈ. ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಕೆಲವೇ ದಿನವಾದರೂ ಇವರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿಯೇ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಇವರು ಹೋದಲೆಲ್ಲಾ ಅಭಿಮಾನಿಗಳ ದಂಡೇ ಕಾಣಿಸಿಕೊಳ್ಳುತ್ತೆ. ಇದೀಗ ನಟಿ ಅನುಷಾ ರೈ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ (Kumbha Mela) ಭೇಟಿ ನೀಡಿದ್ದಾರೆ.
ಸಖತ್ ದುಬಾರಿ ಕಣ್ಣಮ್ಮ ನೀನು....; ಅನುಷಾ ರೈ ಶಾಪಿಂಗ್ ನೋಡಿ ಫ್ಯಾನ್ಸ್ ಶಾಕ್
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅನುಷಾ ರೈ
ಕಳೆದ ಒಂದು ತಿಂಗಳಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ (Prayagraj) ಕುಂಭಮೇಳ ನಡೆಯುತ್ತಿದೆ. ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನು ಸ್ವಲ್ಪ ದಿನಗಳ ಕಾಲ ಮಾತ್ರ ಕುಂಭಮೇಳ ನಡೆಯಲಿದೆ. ಹಾಗಾಗಿ ದೇಶ, ವಿದೇಶದಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಲು ಜನ ಪ್ರಯಾಗ್ ರಾಜ್ ಗೆ ಆಗಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ಇದಕ್ಕೆ ಹೊರತಾಗಿಲ್ಲ. ಈ ಹಿಂದೆ ನಟಿ, ನಿರೂಪಕಿ ಅನುಶ್ರೀ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್, ಶ್ರೀನಿಧಿ ಶೆಟ್ಟಿ, ಕಾರುಣ್ಯಾ ರಾಮ್, ಸೇರಿ ಕನ್ನಡದ ಹಲವು ನಟ ನಟಿಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದೀಗ ನಟಿ ಅನುಷಾ ರೈ (Actress Anusha Rai) ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಅನುಷಾ ರೈ; ಪಾರ್ಟಿ ಮಾಡಿಲ್ಲ ಅನ್ನೋದೇ ಖುಷಿ ಎಂದ ನೆಟ್ಟಿಗರು
ಕವಿತೆ ಬರೆದ ಅನುಷಾ ರೈ
ತಾವು ಪ್ರಯಾಗ್ ರಾಜ್ ಗೆ ಭೇಟಿ ಕೊಟ್ಟಿರುವ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರೈ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಒಂದು ಕವಿತೆಯನ್ನು ಬರೆದು, ತಾವು ಕಂಡ ಕುಂಭ ಮೇಳದ ವೈಭವವನ್ನು ಮೆಲುಕು ಹಾಕಿದ್ದಾರೆ. ಅನುಷಾ ರೈ ಬರೆದಂತಹ ಸಾಲುಗಳು ಹೀಗಿವೆ…
ಪ್ರಯಾಗ್ ರಾಜ್ ನ ಮಹಾ ಕುಂಭಮೇಳ
ನೋಡುತ್ತಲೇ ಹಾಕಿತ್ತು ಹೃದಯ ತಾಳ
ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ
ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ
ಜೊತೆಯಲ್ಲಿ ಕೋಟ್ಯಾಂತರ ಭಕ್ತರ ಸಮಾಗಮ
ಬೆಳಗಲಿ ನಮ್ಮ ಹಿಂದೂ ಧರ್ಮ
ಕಳೆಯಲಿ ಎಲ್ಲ ಪಾಪ ಕರ್ಮ
ಕಡೆಗೂ ಆಯ್ತು ಪುಣ್ಯ ಸ್ನಾನ
ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ
ದೋಣಿಯಲ್ಲಿ ಕುಳಿತು ತ್ರೀವೇಣಿ ಸಂಗಮಕ್ಕೆ (Triveni Sangama) ತೆರಳಿ ನೀರಿನಲ್ಲಿ ಮುಳುಗಿ ಎದ್ದಿದ್ದಾರೆ. ಇದೊಂದು ಮಹಾ ಸಂಭ್ರಮ ಎಂದು ಸಹ ಹೇಳಿದ್ದಾರೆ. ನಟಿಯ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಸಂಸ್ಕೃತಿ ಹೆಣ್ಣು ಅಂದ್ರೆ ಅನುಷಾ ಮೇಡಂ, ಓಂ ನಮ ಶಿವಾಯ, ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅಕ್ಕ, ಜೊತೆಗೆ ನಟಿ ಬರೆದಿರುವಂತಹ ಸಾಲುಗಳಿಗೂ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.