ಜೊತೆಯಲಿ ಜೊತೆಜೊತೆಯಲಿ... ರೆಟ್ರೋ ಸ್ಟೈಲ್​ನಲ್ಲಿ ಬಿಗ್​ಬಾಸ್​ ಅನುಪಮಾ ಮಿಂಚಿಂಗ್​: ವಿಡಿಯೋಗೆ ಫ್ಯಾನ್ಸ್​ ಫಿದಾ

Published : Dec 17, 2023, 04:33 PM IST
ಜೊತೆಯಲಿ ಜೊತೆಜೊತೆಯಲಿ... ರೆಟ್ರೋ ಸ್ಟೈಲ್​ನಲ್ಲಿ ಬಿಗ್​ಬಾಸ್​ ಅನುಪಮಾ ಮಿಂಚಿಂಗ್​: ವಿಡಿಯೋಗೆ ಫ್ಯಾನ್ಸ್​ ಫಿದಾ

ಸಾರಾಂಶ

ನಟಿ ಅನುಪಮಾ ಗೌಡ ಅವರು ಜೊತೆಯಲಿ ಜೊತೆ ಜೊತೆಯಲಿ ಹಾಡಿಗೆ ರೆಟ್ರೋ ಸ್ಟೈಲ್​ನಲ್ಲಿ ರೀಲ್ಸ್​ ಮಾಡಿದ್ದು ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.  

ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ  ನಟಿ ಕಮ್ ನಿರೂಪಕಿ ಎಂದೇ ಫೇಮಸ್​ ಆಗಿದ್ದಾರೆ.  ದರ್ಶನ ಅಭಿನಯದ ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು,  ಅಕ್ಕ ಸೀರಿಯಲ್​ ಮೂಲಕ. ಈ ಸೀರಿಯಲ್​ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್​ ಯಾವುದಕ್ಕೂ ಸೈ ಎನಿಸಿಕೊಂಡರು.  ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು  ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್​ ಫೇಮಸ್​ ಆಗಿದ್ದು,  ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿದ ನಂತರ.  

 ಅನುಪಮಾ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಇದರಲ್ಲಿ  ತಮ್ಮ ಪರ್ಸನಲ್ ಲೈಫ್‌, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ.  ಇದೀಗ ಜೊತೆಯಲಿ ಜೊತೆಜೊತೆಯಲಿ ಹಾಡಿಗೆ ಹಳೆಯ ಕಾಲದ ನಟಿಯಂತೆ ಕಾಣಿಸಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 1980ರಲ್ಲಿ ಬಿಡುಗಡೆಗೊಂಡ ಗೀತಾ ಚಿತ್ರದ,  ಶಂಕರ್​ನಾಗ್​ ಹಾಗೂ ಅಕ್ಷತಾ ರಾವ್​ ಅಭಿನಯದ ಜೊತೆಯಲಿ ಜೊತೆ ಜೊತೆಯಲಿ ಹಾಡು ಇಂದಿಗೂ ಸೂಪರ್​ಹಿಟ್​. ಆ ಹಾಡಿಗೆ ರೆಟ್ರೋ ಸ್ಟೈಲ್​ನಲ್ಲಿ ಸ್ಟೆಪ್​ ಹಾಕಿದ್ದಾರೆ ಅನುಪಮಾ ಗೌಡ. ಈ ಹಾಡಿಗೆ ಫ್ಯಾನ್ಸ್​ ಫಿದಾ ಆಗಿದ್ದು, ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. 

ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್​ ಡ್ರಗ್ಸ್​ ಕುರಿತು ಹೇಳಿದ್ದೇನು?

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ.  ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ   ಗಮನ ಸೆಳೆದಿದ್ದಾರೆ.  ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು.  ಸ್ಯಾಂಡಲ್​ವುಡ್​ನಲ್ಲಿಯೂ ಛಾಪು ಮೂಡಿಸಿರುವ ಅನುಪಮಾ ಅವರು,  ಜಯರಾಮ್ ಕಾರ್ತಿಕ್ ಅಭಿನಯದ  ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 2019ರಲ್ಲಿ ಬಿಡುಗಡೆಗೊಂಡ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ  ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದರು. 

ನಂತರ ಬಿಗ್​ಬಾಸ್​  ಮನೆಯಲ್ಲಿಯೂ ಹಲವು ದಿನಗಳು ಇದ್ದು ನಂತರ ನಾಮಿನೇಟ್​ ಆಗಿದ್ದರು. ಆಗಾಗ್ಗೆ ಹಲವಾರು ಬಗೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುತ್ತಾರೆ. ಇದೀಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜೊತೆಯಲಿ ಜೊತೆ ಜೊತೆಯಲಿ ಹಾಡಿನ ರೀಲ್ಸ್​ ಸಕತ್​ ಇಷ್ಟಪಟ್ಟು ನೋಡುತ್ತಿದ್ದಾರೆ ಫ್ಯಾನ್ಸ್​ 

ಹೆಂಡ್ತೀನ ಮುಟ್ಟದೇ ಐದು ಸಲ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗ್ತಾರಾ ಅಮೃತಧಾರೆ ಆನಂದ್​?
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ