
ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಒಂದು ಶೋ ಮುಗಿಯುತ್ತಿದ್ದಂತೆ ಮತ್ತೊಂದು ರಿಯಾಲಿಟಿ ಶೋ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುತ್ತವೆ. ಕಾಮಿಡಿ, ಸಿಂಗ್, ಡಾನ್ಸ್ ಸೇರಿದಂತೆ ಅನೇಕ ರೀತಿಯ ರಿಯಾಲಿಟಿ ಶೋಗಳು ಕನ್ನಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿವೆ. ಇವುಗಳ ಜೊತೆಗೆ ಕನ್ನಡದಲ್ಲಿ ವಿಭಿನ್ನ ಕಾರ್ಯಕ್ರಮಗಳು ಸಹ ಪ್ರಸಾರವಾಗುತ್ತಿವೆ. ಅಂತಹ ಶೋಗಳಲ್ಲಿ ಕನ್ನಡಿಗರ ಗಮನ ಸೆಳೆದ ಕಾರ್ಯಕ್ರಮ ಜೋಡಿಗಳ ರಿಯಾಲಿಟಿ ಶೋ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಶೋ. ಈ ಶೋ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಕಲರ್ಸ್ ವಾಹಿನಿಯಲ್ಲಿ ಜೋಡಿಗಳ ರಿಯಾಲಿಟಿ ಶೋ ಹಿಟ್ ಆದ ಬೆನ್ನಲ್ಲೇ ಜೀ ವಾಹಿನಿ ಕೂಡ ಜೋಡಿ ನಂ.1 ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬರ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಹಿಟ್ ಆದ ಬೆನ್ನಲ್ಲೇ ರಾಜಾ ರಾಣಿ-2 ಶೋ ಬರ್ತಿದೆ. ಜೂನ್ 11ರಿಂದ ಶೋ ಪ್ರಾರಂಭವಾಗುತ್ತಿದೆ. ಅದೇ ದಿನ ಜೀ ವಾಹಿನಿಯಲ್ಲಿ ಜೋಡಿ ನಂ.1 ಶೋ ಪ್ರಸಾರವಾಗುತ್ತಿದೆ. ರಾಜಾ ರಾಣಿ ಶೋಗೆ ಪೈಪೋಟಿ ನೀಡಲು ಜೋಡಿ ನಂ.1 ಸಿದ್ಧವಾಗಿದೆ. ಈಗಾಗಲೇ ಜೀ ವಾಹಿನಿ ಸ್ಪರ್ಧಿಗಳ ಪಟ್ಟಿ ರಿವೀಲ್ ಮಾಡಿದ್ದು ಪ್ರೋಮೋ ಕೂಡ ರಿಲೀಸ್ ಮಾಡಿದೆ. ಸೆಲೆಬ್ರಿಟಿ ಜೋಡಿಗಳು ಪ್ರೇಕ್ಷಕರನ್ನು ರಂಜಿಸಲು ಕಿರುತೆರೆಯಲ್ಲಿ ಬರ್ತಿದ್ದಾರೆ. ಅಂದಹಾಗೆ ಈ ಶೋನಲ್ಲಿ ಆಂಕರ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಮೂಲಗಳ ಪ್ರಕಾರ ನಿರೂಪಕಿಯಾಗಿ ಅನುಪಮಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಅನುಪಮಾ ಗೌಡ ಈಗಾಗಲೇ ರಾಜಾ ರಾಣಿ ಶೋ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಶೋ ನಡೆಸಿಕೊಟ್ಟಿದ್ದ ಅನುಪಮಾ ಇದೀಗ ಜೀ ವಾಹಿನಿಗೆ ಶಿಫ್ಟ್ ಆಗಿದ್ದಾರೆ. ಜೀ ವಾಹಿನಿಯಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಪ್ರೋಮೋದಲ್ಲಿ ಆಂಕರ್ ಮುಖ ರಿವೀಲ್ ಮಾಡಿಲ್ಲ. ಹಾಗಾಗಿ ಪ್ರೇಕ್ಷಕರು ಯಾರಿರಬಹುದು ಎಂದು ಊಹಿಸುತ್ತಿದ್ದಾರೆ. ಆದರೀಗ ಮೂಲಗಳ ಪ್ರಕಾರ ಅನುಪಮಾ ಎಂದು ಹೇಳಲಾಗುತ್ತಿದೆ.
ರಾಜಾ ರಾಣಿ ಸೀಸನ್ 2 v/s ಜೋಡಿ ನಂ.1; ಕಿರುತೆರೆಯಲ್ಲಿ ಜೋಡಿಗಳ ರಿಯಾಲಿಟಿ ಶೋ ಪೈಪೋಟಿ
ಅಂದಹಾಗೆ ರಾಜಾ-ರಾಣಿ 2ಯಲ್ಲಿ ಅನುಪಮಾ ಜಾಗಕ್ಕೆ ಬೇರೆ ಆಂಕರ್ ಎಂಟ್ರಿ ಕೊಟ್ಟಿದ್ದಾರೆ. ರಾಜಾ - ರಾಣಿ 2 ಶೋ ಅನ್ನು ಜಾಹ್ನವಿ ಎನ್ನುವ ನಿರೂಪಕಿ ನಡೆಸಿಕೊಡುತ್ತಿದ್ದಾರೆ. ಜಾಹ್ನವಿ ಮೊದಲ ಬಾರಿಗೆ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈಗಾಗಲೇ ಅನುಪಮಾ ಜೋಡಿಗಳ ರಿಯಾಲಿಟಿ ಶೋ ನಡೆಸಿಕೊಟ್ಟಿರುವುದರಿಂದ ಜೋಡಿ ನಂ.1 ಹೇಗೆ ಹೋಸ್ಟ್ ಮಾಡಲಿದ್ದಾರೆ ಎಂದು ನೋಡಲು ಕಾತರದಿಂದ ಕಾಯುತ್ತಿದ್ದರು.
ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್
ಅಂದಹಾಗೆ ಜೋಡಿ ನಂ.1ರಲ್ಲಿ ಕಿರಿಕ್ ಕೀರ್ತಿ ದಂಪತಿ, ಕಂಬದ ರಂಗಯ್ಯ ದಂಪತಿ, ನಿನಾದ್ ಜೋಡಿ, ಕೃಷ್ಣೇಗೌಡ ದಂಪತಿ, ಅಭಿಜಿತ್ ದಂಪತಿ ಸೇರಿದಂತೆ ಅನೇಕ ಸೆಲೆಬ್ರಿಟಿ ಜೋಡಿಗಳು ಸ್ಪರ್ಧಿಗಳಾಗಿ ಭಾಗಿಯಾಗುತ್ತಿದ್ದಾರೆ. ಎರಡು ವಾಹಿನಿಯಲ್ಲಿ ವಾರಾಂತ್ಯದಲ್ಲಿ ಜೋಡಿಗಳ ಶೋ ಪ್ರಸಾರವಾಗುತ್ತಿದ್ದು ಯಾವ ಶೋ ಹೇಗಿರಲಿದೆ, ಪ್ರೇಕ್ಷಕರ ಹೃದಯ ಗೆಲ್ಲುವ ಶೋ ಯಾವುದು ಎಂದು ಕಾದುನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.