
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತಂಗಿಯ ಮದುವೆಗೆ ಪಡೆದ 10 ಲಕ್ಷ ರೂ. ಸಾಲಕ್ಕೆ ಸ್ವತಃ ಅವರ ಮಾವನೇ ಶಿವು ಅವರ ಮನೆಯನ್ನು ಹರಾಜು ಮಾಡಲು ಮುಂದಾಗಿರುತ್ತಾರೆ. ಆದರೆ, ಮನೆಯನ್ನು ಬಿಡಿಸಿಕೊಳ್ಳಲು ಹಣ ಹೊಂದಿಸಲಾಗದೇ ಮೂವರು ತಂಗಿಯರು ಹಾಗೂ ಹೆಂಡತಿಯ ಸಮೇತ ಬೀದಿಗೆ ಬೀಳುವ ಪರಿಸ್ಥಿತಿ ಬಂದಾಗ ಪಾರು, ಶಿವು ಮನೆಯನ್ನು ಉಳಿಸಿದ್ದಾರೆ. ಇದಕ್ಕೆ ಶಾರದಮ್ಮ ತನ್ನ ಮಗಳ ಮದುವೆ ನಿಲ್ಲಿಸಲು ಕದ್ದುಕೊಂಡು ಹೋಗಿದ್ದ ಹಣವನ್ನು ದೇವಸ್ಥಾನದಲ್ಲಿಟ್ಟು ಪಾರು ಕೈಗೆ ಸಿಗುವಂತೆ ಮಾಡಿದ್ದಾಳೆ. ಈ ಹಣ ತೆಗೆದುಕೊಂಡು ಹೋಗಿ ಹರಾಜು ಮಾಡುತ್ತಿದ್ದವರಿಗೆ ಕೊಟ್ಟು ಪಾರು ಮನೆಯನ್ನು ಉಳಿಸಿಕೊಟ್ಟು, ಕುಟುಂಬವನ್ನು ಕಾಪಾಡಿಕೊಂಡಿದ್ದಾಳೆ.
ಕನ್ನಡ ಕಿರುತೆರೆಯಲ್ಲಿ ಟಾಪ್-10 ಟಿಆರ್‌ಪಿ ಹೊಂದಿದ ಧಾರಾವಾಹಿಗಳಲ್ಲಿ ಒಂದಾಗಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ 2ನೇ ತಂಗಿಯನ್ನು ಮದುವೆ ಮಾಡಿಕೊಡಲು ಮೈತುಂಬಾ ಸಾಲ ಮಾಡಿಕೊಂಡಿದ್ದನು. ಮದುವೆಯ ವೇಳೆ ತುರ್ತಾಗಿ ಬೇಕಿದ್ದ 10 ಲಕ್ಷ ರೂ. ಹಣವನ್ನು ಗ್ರಾಮದ ಒಬ್ಬ ಲೇವಾದೇವಿಗಾರರ ದಾಸೇಗೌಡನ ಬಳಿ ಪಡೆದುಕೊಂಡು ಬಂದಿದ್ದನು. ಆದರೆ, ಸಾಲ ಪಡೆಯುವಾಗ ಬಿಳಿ ಕಾಗದ ಪತ್ರಕ್ಕೆ ಸಹಿ ಹಾಕಿ ಬಂದಿದ್ದನು. ಆದರೆ, ಜೈಲಿನಿಂದ ಹೊರಗೆ ಬಂದಿದ್ದ ಶಿವು ತಾಯಿ ಶಾರದಮ್ಮ ತನ್ನ ಮಗಳು ಕೀಚಕರ ಮನೆ ಸೇರಬಾರದು ಎಂದು ಮದುವೆ ನಿಲ್ಲಿಸಲು ವರದಕ್ಷಿಣೆಗೆ ಕೊಡಬೇಕಿದ್ದ 10 ಲಕ್ಷ ರೂ. ಹಣ ಕದ್ದುಬಿಡುತ್ತಾಳೆ. ಆಕೆ ಅಂದುಕೊಂಡಂತೆ ಮದುವೆ ನಿಂತು ಹೋಗುತ್ತದೆ. ಅದೇ ಸಮಯಕ್ಕೆ ಜಿಮ್ ಸೀನನ ಜೊತೆಗೆ ಶಿವು ತಂಗಿ ಮದುವೆ ಆಗುತ್ತದೆ.
ಇದನ್ನೂ ಓದಿ: ಅಣ್ಣಯ್ಯ ಧಾರಾವಾಹಿ ಶೂಟಿಂಗ್ ನಡೆಯುವ ಹಳ್ಳಿ ಯಾವುದು ಗೊತ್ತಾ? ನಿಶಾ ಶೂಟಿಂಗ್ ಅಡ್ರೆಸ್ ರಿವೀಲ್ ಆಯ್ತು!
ಮದುವೆ ನಿಲ್ಲಿಸಲು ನಡೆಸಿದ ಕುತಂತ್ರದಲ್ಲಿ ವೀರಭಧ್ರನ ಆಸೆ ಈಡೇರಿದರೂ ಪುನಃ ಶಿವು ತಂಗಿಗೆ ಮದುವೆ ಆಗಿದ್ದನ್ನು ಮಾತ್ರ ಸಹಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದನು. ನಂತರ ಶಿವುಗೆ ಸಾಲ ಕೊಟ್ಟ ದಾಸೇಗೌಡನ ಜೊತೆಗೆ ಸೇರಿ ಮನೆಯನ್ನು ಹರಾಜು ಹಾಕಿ ಅವನ ಕುಟುಂಬವನ್ನು ಬೀದಿಗೆ ತರಲು ಕುಂತ್ರ ಮಾಡಿದ್ದನು. . ಸಾಲ ಪಡೆದು ಒಂದು ವರ್ಷವಾಗಿದ್ದು, ಬಡ್ಡಿಯನ್ನೂ ಕಟ್ಟಿಲ್ಲ. ಮನೆ ಹರಾಜಿಗೆ ಈಗಾಗಲೇ 3 ಬಾರಿ ನೋಟಿಸ್ ನೀಡಿದ್ದರೂ ಉತ್ತರವಿಲ್ಲದ ಹಿನ್ನೆಲೆಯಲ್ಲಿ ಮನೆ ಹರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿ ಹೇಳಿರುತ್ತಾರೆ. ಇದೀಗ ಶಿವು ಮನೆ ಹರಾಜು ನಡೆಯುತ್ತಿದೆ ಎನ್ನುವಾಗ ಪಾರು ದೇವರ ಮೊರೆ ಹೋಗುತ್ತಾಳೆ.
ಪಾರುಗೆ ದೇವರ ರೀತಿ ಮರದ ಹಿಂದೆ ನಿಂತು ತಾನು ಮನೆ ಉಳಿಸುವುದಾಗಿ ಭರವಸೆ ಕೊಟ್ಟಿದ್ದ ಶಿವು ತಾಯಿ ಶಾರದಮ್ಮ, ನಾಳೆ ಮಹಾಕಾಳಮ್ಮ ದೇವಸ್ಥಾನಕ್ಕೆ ಬರುವಂತೆ ಹೇಳಿರುತ್ತಾಳೆ. ಇದೀಗ ಶಿವು ಮನೆ ಹರಾಜು ನಡೆಯುವ ವೇಳೆ ಮಹಾಕಾಳಮ್ಮ ದೇವಸ್ಥಾನಕ್ಕೆ ಬಂದ ಪಾರುಗೆ ಶಿವು ತಾಯಿ ಶಾರದಮ್ಮ 10 ಲಕ್ಷ ರೂ. ಹಣ ಇರುವ ಬ್ಯಾಗ್ ಅನ್ನು ನೀಡುತ್ತಾಳೆ. ಇದನ್ನು ತೆಗೆದುಕೊಂಡು ಹೋಗಿ ಪಾರು ಶಿವು ಮನೆ ಹರಾಜಾಗುವುದನ್ನು ಉಳಿಸುತ್ತಾಳೆ. ಈ ವೇಳೆ ದಾಸೇಗೌಡ ಲೈಸೆನ್ಸ್ ಇಲ್ಲದಿದ್ದರೂ ಹಣ ನೀಡಿದ್ದು, ಶಿವು ಕಡೆಯಿಂದ ಬಿಳಿ ಕಾಗದಕ್ಕೆ ಸಹಿ ಹಾಕಿಸಿಕೊಂಡಿದ್ದು, ಇತ್ತೀಚೆಗೆ ಪಡೆದ ಸಾಲಕ್ಕೆ ಒಂದು ವರ್ಷದ ಹಿಂದೆ ಸಾಲ ಪಡೆದಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದು ಹಾಗೂ 3 ಬಾರಿ ನೋಟಿಸ್ ಕೊಡದೇ ಸರ್ಕಾರಕ್ಕೆ ಸುಳ್ಳು ಹೇಳಿದ್ದನ್ನು ಕೂಡ ಇಲ್ಲಿ ಹೇಳಿದ್ದಾಳೆ. ಇದೀಗ ಶಿವು ಮನೆಯನ್ನು ಉಳಿಸಿದ ಪಾರು ತಬ್ಬಿಕೊಂಡು ಶಿವು ಸಂತಸಪಟ್ಟಿದ್ದಾನೆ.
ಇದನ್ನೂ ಓದಿ: Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಈ ಧಾರಾವಾಹಿ ಪ್ರೊಮೊ ವಿಡಿಯೋ ನೋಡಿದ ಧಾರಾವಾಹಿ ವೀಕ್ಷಕರು ಈ ವಾರದ ಕಿಚ್ಚನ ಚಪ್ಪಾಳೆ ಶಾರದಮ್ಮಗೆ ಎಂದು ಕಾಮೆಂಟ್ ಮಾಡಿದ್ದಾರೆ. ಶಿವು ಮನೆಯನ್ನು ಕಳೆದುಕೊಂಡು ಬೀದಿಗೆ ಬರುತ್ತಾನೆ ಎಂದು ಗೊತ್ತಾದಾಗ ಆಕೆ ಕಷ್ಟಪಟ್ಟು ದೇವಸ್ಥಾನಕ್ಕೆ ಬಂದು ಅಲ್ಲಿದ್ದ ಪಾರು ಕೈಗೆ ತಾನು ತೆಗೆದುಕೊಂಡಿದ್ದ 10 ಲಕ್ಷ ರೂ. ಹಣದ ಬ್ಯಾಗ್ ತಲುಪಿಸಿದ್ದಾರೆ. ಇನ್ನೂ ಬಿಗ್ ಬಾಸ್ ಗುಂಗಿನಲ್ಲಿರುವ ಜನರು ಈ ವಾರದ ಕಿಚ್ಚನ ಚಪ್ಪಾಳೆ ಶಾರದಮ್ಮಗೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.