Annayya Kannada Serial: ಏಕಕಾಲಕ್ಕೆ ಎರಡು ಸತ್ಯ ಸ್ಫೋಟ; ಬದ್ಮಾಷ್‌ಗೆ ಕೊನೆಗೂ ಧರ್ಮದೇಟು ಕೊಟ್ಟ ರಾಣಿ!

Published : Jan 06, 2026, 01:14 PM IST
annayya serial

ಸಾರಾಂಶ

Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್‌ ಸೀನ ಹಾಗೂ ಮನು ಗೌಡ್ರ ಅಸಲಿಯತ್ತು ಏನು ಎಂದು ಇನ್ನೂ ಶಿವುಗೆ ಗೊತ್ತಾಗಿರಲಿಲ್ಲ. ಈಗ ಈ ಧಾರಾವಾಹಿಯಲ್ಲಿ ಸತ್ಯ ಸ್ಫೋಟವಾಗಿದೆ. ಹೀಗಾಗಿ ಮುಂದೆ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ. 

ಅಣ್ಣಯ್ಯ ಧಾರಾವಾಹಿಯಲ್ಲಿ ( Annayya Serial ) ತನ್ನ ಇಬ್ಬರು ತಂಗಿಯಂದಿರ ಜೀವನ ಸರಿ ಇಲ್ಲ ಎನ್ನೋದು ಇನ್ನೂ ಮಾರಿಗುಡಿಗೆ ಶಿವುಗೆ ಗೊತ್ತೇ ಆಗಿಲ್ಲ. ಆದರೆ ಈಗ ವಾಹಿನಿಯು ರಿಲೀಸ್‌ ಮಾಡಿದ ಪ್ರೋಮೋದಲ್ಲಿ ಜಿಮ್‌ ಸೀನನ ಸತ್ಯ ರಿವೀಲ್‌ ಆದಂತಿದೆ.

ರಾಣಿ ಗಂಡನ ಸತ್ಯ ರಿವೀಲ್‌ ಆಗತ್ತಾ?

ರಾಣಿ ಗಂಡ ಮನು ಗೌಡ್ರು ಬುದ್ಧಿ ಸರಿ ಇಲ್ಲ, ಚಿಕ್ಕಮಕ್ಕಳ ಥರ ಆಡ್ತಾರೆ. ಮದುವೆ ಆದಬಳಿಕವೇ ರಾಣಿಗೆ ಈ ಸತ್ಯ ಗೊತ್ತಾಯಿತು. ಇದು ಅಣ್ಣನಿಗೆ ಗೊತ್ತಾದರೆ ನೊಂದುಕೊಳ್ತಾನೆ ಎಂದು ರಾಣಿ ಈ ವಿಷಯವನ್ನು ಮುಚ್ಚಿಟ್ಟಳು. ಇನ್ನೊಂದು ಕಡೆ ತನ್ನ ಸಂಸಾರವನ್ನು ಸರಿ ಮಾಡೋಣ ಎಂದು ಅವಳು ಪ್ರಯತ್ನ ಪಡುತ್ತಿದ್ದಾಳೆ.

ಮನು ಗೌಡ್ರು ಜಿಮ್‌ ಸೀನ ಅವರು ಮಾವನಿಗೆ ಅಂತ ಗಿಫ್ಟ್‌ ತಂದಿದ್ದಾರೆ ಎಂದು ಹೇಳಿ ಎಣ್ಣೆ ಬಾಟಲಿಯನ್ನು ಎಲ್ಲರ ಮುಂದೆ ತೋರಿಸಿದ್ದಾನೆ. ಅಪ್ಪ ಕುಡಿಯೋದು ಬಿಟ್ಟಿದ್ದಾರೆ ಎನ್ನೋದು ಸೀನನಿಗೆ ಗೊತ್ತಿಲ್ಲ ಎಂದು ರಶ್ಮಿ ಹೇಳಿ ಆ ಮಾತನ್ನು ಸರಿ ಮಾಡಿಸಿದ್ದಾಳೆ.

ಸೀನ-ಪಿಂಕಿ ಲವ್‌ ವಿಷಯ

ಇನ್ನೊಂದು ಕಡೆ ಪಿಂಕಿ ಜೊತೆ ಸೀನ ಮಾತನಾಡುತ್ತಿರೋದು ರಾಣಿಗೆ ಕೇಳಿಸಿದೆ. ಈ ಬಗ್ಗೆ ಅವಳು ಪ್ರಶ್ನೆ ಮಾಡಿದಾಗ, “ನೀನು ಕೇಳಿಸಿಕೊಂಡಿರೋದು ಸತ್ಯ. ನಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಆಗ್ತೀನಿ” ಎಂದು ಹೇಳಿದ್ದಾನೆ. ಆ ಮಾತು ಕೇಳಿ ರಾಣಿ ರೊಚ್ಚಿಗೆದ್ದಿದ್ದಾಳೆ. “ಏನೋ ಹೇಳಿದ್ಯಾ ಬದ್ಮಾಷ್‌, ನಿನ್ನ ಎದೆ ಬಗೆಯುವೆ” ಎಂದು ಅವಳು ಅವಾಜ್‌ ಹಾಕಿದ್ದಾಳೆ.

ಸೀನ ಹಾಗೂ ಪಿಂಕಿ ಲವ್‌ ಮಾಡುತ್ತಿದ್ದರು. ಆದರೆ ಅನಿರೀಕ್ಷಿತವಾಗಿ ಸೀನ ಹಾಗೂ ರಶ್ಮಿ ಮದುವೆ ಆಗುವ ಹಾಗೆ ಆಯ್ತು. ಆದರೆ ನಾನು ಬೇರೆ ಹುಡುಗಿಯನ್ನು ಪ್ರೀತಿ ಮಾಡ್ತಿದೀನಿ ಎಂದು ಹೇಳದ ಸೀನ, ಬಲವಂತದಿಂದ ರಶ್ಮಿಯನ್ನು ಮದುವೆಯಾದನು. ಒಮ್ಮೆ ಡೌಟ್‌ಬಂದ ಪಾರು ಸೀನನಿಗೆ, “ಬಲವಂತದಿಂದ ಈ ಮದುವೆ ಆಗಿರಬಹುದು, ಆದರೆ ರಶ್ಮಿ ಒಳ್ಳೆಯ ಹುಡುಗಿ ಎಂದು ನಿನಗೆ ಗೊತ್ತಾಗುವುದು, ನೀನು ಯಾವತ್ತೂ ತಪ್ಪು ಮಾಡೋದಿಲ್ಲ ಎಂದು ನಾನು ನಂಬ್ತೀನಿ” ಎಂದು ಬುದ್ಧಿ ಹೇಳಿದ್ದಳು. ಅಲ್ಲಿ ಸೀನ ಬದಲಾಗಿದ್ದನು.

ಸೀನನ ತಾಯಿಗೆ ಸೀನ, ಪಿಂಕಿ ಮದುವೆ ಆಗಬೇಕು ಎನ್ನೋ ಆಸೆ. ತಾಯಿ ಹಾಗೂ ಪಿಂಕಿ ಒತ್ತಾಯದಿಂದ ಸೀನ ಈಗ ಮತ್ತೆ ಪಿಂಕಿ ಜೊತೆ ಸಂಸಾರ ಕಾಣುವ ಮೋಸ ಮಾಡುತ್ತಿದ್ದಾನೆ. ಗಂಡನನ್ನು ಬಿಟ್ಟುಕೊಡೋಕೆ ರಶ್ಮಿ ಕೂಡ ತಯಾರಿಲ್ಲ. ಈ ಸೀರಿಯಲ್‌ನಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಸೀನನ ಈ ನಾಟಕ ಶಿವುಗೆ ಗೊತಾದರೆ, ಅವನು ಸುಮ್ಮನೆ ಇರೋದಿಲ್ಲ. ಶಿವು ಏನಾದರೂ ಮಾಡ್ತಾನೆ ಎನ್ನೋದು ಶಿವುಗೆ ಕೂಡ ಗೊತ್ತಿದೆ. ಪಿಂಕಿಗೂ ಕೂಡ ಸೀನನಿಂದ ದೂರ ಇರು ಎಂದು ಶಿವು ಹೇಳಿದ್ದನು. ಆದರೆ ಅವಳು ಅವನ ಮಾತನ್ನು ಕೇಳಿಲ್ಲ.

ಪಾತ್ರಧಾರಿಗಳು

ಶಿವು- ವಿಕಾಶ್‌ ಉತ್ತಯ್ಯ

ಪಾರು- ನಿಶಾ ರವಿಕೃಷ್ಣನ್‌

ಸೀನ-ಸುಷ್ಮಿತ್‌ ಜೈನ್‌

ರಶ್ಮಿ-ಪ್ರತೀಕ್ಷಾ ಶ್ರೀನಾಥ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್‌ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?