ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

Published : Jun 03, 2024, 01:03 PM ISTUpdated : Jun 03, 2024, 03:42 PM IST
ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

ಸಾರಾಂಶ

ಆ್ಯಂಕರ್​ ಅನುಶ್ರೀ ಅವರು ತಾವು ಮದುವೆಯಾಗುವುದಿಲ್ಲ ಎನ್ನುತ್ತಲೇ ಅದಕ್ಕೆ ಕಾರಣವನ್ನೂ ಹೇಳಿದ್ದಾರೆ. ಇವರ ಈ ನಿರ್ಧಾರ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ!  

 ಆ್ಯಂಕರ್​ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್​ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್​ ಇದೇ ಪ್ರಶ್ನೆ ಕೇಳುತ್ತಾರೆ.  

ಅನುಶ್ರೀ ಅವರಿಗೆ  ಜನವರಿ 25 ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಕಳೆದ ಜನವರಿಯಲ್ಲಿ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.

ಮದುಮಗಳಾದ ಆ್ಯಂಕರ್​ ಅನುಶ್ರೀ ವಿಡಿಯೋ ವೈರಲ್​! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​...

ಇದೀಗ ಸಂದರ್ಶನವೊಂದರಲ್ಲಿ ಮದುವೆಯ ಕುರಿತು ಅವರು ಓಪನ್​ ಆಗಿ ಮಾತನಾಡಿದ್ದಾರೆ. 'ನಿಮಗೆ ಹೇಳಿದ್ರೆ ವಿಚಿತ್ರ ಎನಿಸಬಹುದು. ಆದರೆ ನಿಜವಾಗಿಯೂ ನನಗೆ ಮದುವೆಯಾಗೋಕೆ ಇಷ್ಟವಿಲ್ಲ. ಹೌದು. ನಿಜವನ್ನೇ ಹೇಳುತ್ತೇನೆ. ನಾನು ಮದುವೆ ಮಟೀರಿಯಲ್​ ಗರ್ಲ್​ ಅಲ್ಲವೇ ಅಲ್ಲ. ಇದನ್ನು ನನಗೆ ಇದನ್ನು ಜ್ಞಾನೋದಯ ಮಾಡಿಸಿದ್ದ ಅರುಣ್​ ಸಾಗರ್​ ಅವರು. ಅದು ಯಾಕೆ ಅಂತ ಹೇಳ್ತೀನಿ ಕೇಳಿ. ಒಮ್ಮೆ ನನ್ನ ಹುಟ್ಟುಹಬ್ಬಕ್ಕೆ ವಿಷ್​ ಮಾಡಲು ಕಾಲ್​ ಮಾಡಿದ್ರು.  ಆಗ ಅವರು ಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ. ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋ ಅಂತೆಲ್ಲಾ ಹೇಳಿ ಆಮೇಲೆ ಒಂದು ಲೈನ್​ ಸೇರಿಸಿದ್ರು. ಅದೇ ನನಗೆ ಜ್ಞಾನೋದಯ ಮಾಡಿಸಿತು. ಕೊನೆಯಲ್ಲಿ ಅವರು 'ಇಷ್ಟವಿದ್ದರೆ ಮಾತ್ರ' ಎಂದರು ಎಂದು ಅಂದಿನ ದಿನ ನೆನಪಿಸಿಕೊಂಡರು ಅನುಶ್ರೀ.

ಅವರ ಆ ಕೊನೆಯ ಪಂಚಿಂಗ್​ ಡೈಲಾಗ್​ ಕೇಳಿ ನನಗೆ  ಜ್ಞಾನೋದಯ ಆಯಿತು. ಅವರು ಏನು ಹೇಳಿದ್ರು ಅಂದ್ರೆ ನೀನು ಎಲ್ಲರ ಹಾಗಲ್ಲ, ಸ್ವಲ್ಪ ನನ್ನ ಹಾಗೆ. ಆದರೆ  ಎಲ್ಲಾ ಕಡೆ ಇರ್ತಿಯಾ. ನಿನ್ನಂಥ ಹುಡುಗಿಗೆ ಮದುವೆಯಾಗಲು  ಗಂಡು, ಗಂಡ ಅಥವಾ ಬಾಯ್​ಫ್ರೆಂಡ್​ ಆಗಿಬರಲ್ಲ. ಆತ ಒಬ್ಬ  ಗೆಳೆಯನಾಗಿರಬೇಕು ಎಂದರು. ಆಗ ನನಗೆ  ನನ್ನ ತಲೆಯ ಹಿಂದೆ ಸನ್​ಲೈಟ್​ ಓಪನ್​ ಆದ ಹಾಗಾಯ್ತು. ಜೀವನದಲ್ಲಿ ಮದುವೆಯಾಗಬೇಕೆಂದರೆ ಒಳ್ಳೆಯ ಗೆಳೆಯ ಸಿಗಬೇಕು. ಈಗ ಅಂಥವರು ಎಲ್ಲಿ ಇರುತ್ತಾರೆ ಎನ್ನುತ್ತಲೇ ವಿಡಿಯೋ ಕಟ್​ ಮಾಡಿದ್ದಾರೆ ಅನುಶ್ರೀಯವರು. ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ವೇಟ್​ ಮಾಡ್ತಾ ಇದ್ದೀನಿ ಎನ್ನುತ್ತಲೇ ಅಭಿಮಾನಿಗಳ​ ತಲೆಗೆ ಹುಳು ಬಿಟ್ಟ ಆ್ಯಂಕರ್​ ಅನುಶ್ರೀ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!