ಭಜರಂಗಿ ಚಿತ್ರದ 'ಶ್ರೀ ಕೃಷ್ಣ' ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ. ನೀವು ನಿರೂಪಕಿ ಮಾತ್ರವಲ್ಲ, ಅದ್ಭುತ ನಟಿ, ಡ್ಯಾನ್ಸರ್ ಕೂಡ ಹೌದು ಎಂದು ನೆಟ್ಟಿಗರು....
ಕಿರುತೆರೆಯ ಕ್ಯೂಟಿ, ಅಭಿನೇತ್ರಿ, ಮಾತಿನ ಮಲ್ಲಿ, ಅದ್ಭುತ ನಿರೂಪಕಿ, ವೀಕೆಂಡ್‌ನಲ್ಲಿ ಸರಿಗಮಪ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಎಂಟ್ರಿ ಕೊಡುವ ಅನುಶ್ರೀ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಅನುಶ್ರೀ ಇಲ್ಲ ಅಂದ್ರೆ ನೋಡೋ ಮನಸ್ಸೇ ಬರುವುದಿಲ್ಲ. ಲಕ್ಷಣವಾಗಿ ವಸ್ತ್ರ ಧರಿಸುವ ಅನುಶ್ರೀ ವಾರ ವಾರವೂ ಡಿಫರೆಂಟ್ ಆಗಿಯೇ ಕಂಗೊಳಿಸುತ್ತಾರೆ. ವೀಕ್ಷಕರ ಮನ ಗೆಲ್ಲುತ್ತಾರೆ.
ಅನುಶ್ರೀ ಡ್ಯಾನ್ಸ್:
ಆನ್‌ಸ್ಕ್ರೀನ್‌ನಲ್ಲಿ ಅನುಶ್ರೀ ಹೇಗೆ ಪ್ರೆಸೆಂಟ್ ಮಾಡಿಕೊಳ್ಳುತ್ತಾರೆ ಎಂಬ ವಿಚಾರದ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ಆಗಿವೆ. ತಮ್ಮ ಪರ್ಸನಲ್ ಡಿಸೈನರ್ ಅಂಜಲಿ ರಾಜ್ ಕೈ ಚಳಕದಲ್ಲಿ ಅನುಶ್ರೀ ನೋಡಲು ಗೊಂಬೆನೇ. ಸರಿಗಮಪ ಸೀಸನ್ ಗ್ರ್ಯಾಂಡ್ ಫಿನಾಲೆ ವೇಳೆ ಧರಿಸಿದ ಉಡುಪು ಇಷ್ಟವಾಯ್ತು ಎಂಬ ಕಾರಣಕ್ಕೆ ಅನು ಹೆಜ್ಜೆ ಹಾಕಿದ್ದಾರೆ.
ಶಿವರಾಜ್‌ಕುಮಾರ್ ಸೂಪರ್ ಹಿಟ್ 'ಭಜರಂಗಿ' ಚಿತ್ರದ 'ಶ್ರೀ ಕೃಷ್ಣ' ಹಾಡಿಗೆ ತಮ್ಮ ಕ್ಯಾರವಾನ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. 'ನಂದ ನಂದನಾ ನೀನು ಶ್ರೀ ಕೃಷ್ಣ. ತೊಟ್ಟ ಉಡುಗೆ ಇಷ್ಟವಾದಾಗ ಮಾಡಿದ ಒಂದು ಪ್ರಯತ್ನ. ಥ್ಯಾಂಕ್ಸ್ ಅಂಜಲಿ ಈ ಔಟ್‌ಫಿಟ್‌ಗೆ,' ಎಂದು ಬರೆದುಕೊಂಡಿದ್ದಾರೆ.
ಟ್ರೋಲ್ಸ್‌ಗೆ Don't care,ಕೊನೆ ಉಸಿರಲ್ಲಿ Satisfaction ಇರ್ಬೇಕು; ನಿಖಿಲ್ ಮಾತುಗಳು ವೈರಲ್!
ನೆಟ್ಟಿಗರ ಕಾಮೆಂಟ್:
'ನೀವು ಒಳ್ಳೆಯ ನಿರೂಪಕಿ ಮಾತ್ರವಲ್ಲ, ಅದ್ಭುತ ಡ್ಯಾನ್ಸರ್. ನಿಮ್ಮ ಎಕ್ಸಪ್ರೆಷನ್ ಸೂಪರ್', 'ನಿಮ್ಮ ಹನುಮಂತಂಗೆ ತೊಂದರೆ ಆಗಿದೆ ಅಲ್ವಾ?' ಎಂದೆಲ್ಲಾ ನೆಟ್ಟಿಗರು ಅನುಶ್ರೀ ಪೋಸ್ಟಿಗೆ ಕಾಮೆಂಟ್ ಮಾಡಿದ್ದಾರೆ.