ಆ್ಯಂಕರ್​ ಅನುಶ್ರೀ @37: ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ರಿಲೀಸ್​- ಮುಂದಿನ ತಿಂಗಳೇ ಮದುವೆ?

Published : Jan 25, 2025, 04:20 PM ISTUpdated : Jan 27, 2025, 11:17 AM IST
ಆ್ಯಂಕರ್​ ಅನುಶ್ರೀ @37: ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ರಿಲೀಸ್​- ಮುಂದಿನ ತಿಂಗಳೇ ಮದುವೆ?

ಸಾರಾಂಶ

ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ೩೭ನೇ ಹುಟ್ಟುಹಬ್ಬದಂದು ಅಭಿಮಾನಿಗಳು ಮದುವೆಯ ಬಗ್ಗೆ ಕುತೂಹಲದಿಂದ ಪ್ರಶ್ನಿಸುತ್ತಿದ್ದಾರೆ. ಅನುಶ್ರೀ ಈ ಹಿಂದೆ ಮದುವೆಯಾಗುವುದಾಗಿ ಹೇಳಿದ್ದರೂ, "ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ" ಬಂದಾಗ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಮದುವೆ ಆಗಬಹುದೆಂಬ ಊಹಾಪನೆಗಳಿವೆ.

 ಕಿರುತೆರೆ ವೀಕ್ಷಕರಿಗೆ ಅನುಶ್ರೀ ಅವರ ಬಗ್ಗೆ ಹೇಳುವುದೇ ಬೇಡ. ಆ್ಯಂಕರ್​ ಅನುಶ್ರೀ ಎಂದೇ ಫೇಮಸ್​ ಆಗಿರುವ ಚಟಪಟ ಮಾತಿನ ಮಲ್ಲಿ ಈಕೆ. ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿಯ (Sandalwood star) ಪರಿಚಯ ಇಲ್ಲದವರೇ ಇಲ್ಲ ಎನ್ನಬಹುದೇನೋ.  ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ ಇವರು.   ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವತ್ತು ಅಂದರೆ ಜನವರಿ 25, ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 36 ವರ್ಷ ಮುಗಿದು 37ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಇವರು. ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡುವ ಮೂಲಕ ಅನುಶ್ರೀ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. 

ಆ್ಯಂಕರ್​ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್​ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್​ ಇದೇ ಪ್ರಶ್ನೆ ಕೇಳುತ್ತಾರೆ.   ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಅವರಿಗೆ 36ವರ್ಷ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. 

ನಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ 'ನಗುವಿನೊಡೆಯ'ನ ಪರಿಚಯಿಸಿದ ಆ್ಯಂಕರ್ ಅನುಶ್ರೀ

ಈಗಲೂ ಹುಟ್ಟುಹಬ್ಬದ ದಿನವೂ ಅವರ ವಿಡಿಯೋದಲ್ಲಿ ಬಂದಿರುವ ಪ್ರಶ್ನೆ ಅದೇ, ವಯಸ್ಸು 37 ಆಗೋಯ್ತು. ಮದ್ವೆ ಯಾವಾಗ ಎನ್ನುವುದು. ಈ ಹಿಂದೆ ಕೂಡ ನಟಿ,  ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ. ಈಗ ಅದು ಮತ್ತೆ ಮುನ್ನೆಲೆಗೆ ಬರಲು ಕಾರಣ ಏನೆಂದರೆ, ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಮದುವೆಯ ಬಗ್ಗೆ ಮಾತನಾಡುತ್ತಾ, ವಿಶೇಷ ದಿನದಂದು ಶೀಘ್ರದಲ್ಲಿ ಮದುವೆಯಾಗುತ್ತೇನೆ ಎಂದುಬಿಟ್ಟಿದ್ದರು. ಆ್ಯಂಕರ್​ ಅನುಶ್ರೀ ಅವರ ವಿಶೇಷ ದಿನ ಏನೆಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಅದು ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬವೇ ಎನ್ನುವುದು ಬಹುತೇಕರ ಅಭಿಮತ. ಪುನೀತ್​ ಅವರ ಹುಟ್ಟುಹಬ್ಬ ಮಾರ್ಚ್​ 17. ಇದೇ ಕಾರಣಕ್ಕೆ ಅನುಶ್ರೀಗೆ ಅಭಿಮಾನಿಗಳಿಗೆ ಈಗ ನೆನಪು ಮಾಡುತ್ತಿದ್ದಾರೆ. ಮದುವೆ ಘೋಷಣೆ ಮಾಡಿ ಅನ್ನುತ್ತಿದ್ದಾರೆ!

ಅಷ್ಟಕ್ಕೂ ಜೀ ಕನ್ನಡ ವೇದಿಕೆಯಲ್ಲಿ ಅನುಶ್ರೀ ಅವರು ಮದುವೆಯ ಬಗ್ಗೆ ಮಾತನಾಡುತ್ತಾ, ನನಗೂ ಜೀವನದಲ್ಲಿ ಒಬ್ಬ ಬಾಳಸಂಗಾತಿ ಬರಬೇಕು ಎನ್ನುವ ಆಸೆ ಇದೆ. ಎಲ್ಲದಕ್ಕೂ ತನ್ನದೇ ಆದಂಥ ಒಂದು ಟೈಮ್​ ಇರುತ್ತೆ. ಎಲ್ಲದ್ದಕ್ಕೂ ಅದರದ್ದೇ ಆದ ಒಂದು ಘಳಿಗೆ ಇರುತ್ತೆ. ಸರಿಯಾದ ಟೈಮ್​ನಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಮನಸ್ಸು ಮಾಡಬೇಕಿತ್ತು. ಆದರೆ ಈಗ ಮನಸ್ಸು ಮಾಡಿದ್ದೇನೆ. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ, ಕನ್ನಡಿಗರ ಆಶೀರ್ವಾದದಿಂದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂಥ ಆ ಸರದಾರ ನನ್ನ ಬದುಕಲ್ಲಿ ಬರಲಿ, ಅವನು ಬಂದರೆ ನಿಮ್ಮ ಮುಂದೆ ಅವನನ್ನು ಕರೆದುಕೊಂಡು ಬಂದು, ಪರಿಚಯ ಮಾಡಿಸಿ ಮುಂದಿನ ವರ್ಷವೇ ವಿಶೇಷ ದಿನದಂದು ಮದ್ವೆಯಾಗುತ್ತೇನೆ ಎಂದಿದ್ದರು. ಅದೇ ರೀತಿ ಮುಂದಿನ ವರ್ಷ ಅಂದರೆ 2025 ಬಂದಾಗಿದೆ. ವಿಶೇಷ ದಿನ ಅಂದ್ರೆ ಅಪ್ಪು ಹುಟ್ಟುಹಬ್ಬ. ಆದ್ದರಿಂದ ಗುಡ್​ನ್ಯೂಸ್​​ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ ಅಭಿಮಾನಿಗಳು. 

ಅನುಶ್ರೀನೇ ನನ್ನ ಸ್ವರ್ಗ ಎಂದ ಜಗದೀಶ್: ವೇದಿಕೆ ಮೇಲೆ ಇಬ್ಬರ ರೊಮಾನ್ಸ್​ ನೋಡಿ ನಾಚಿಕೊಂಡ ಶಿವಣ್ಣ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!