ಒಂದು ರೀಲ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!

By Vaishnavi Chandrashekar  |  First Published Sep 12, 2024, 11:14 AM IST

ಕಂಟೆಂಟ್‌ ಕ್ರಿಯೇಷನ್‌ ಮೂಲಕ ದುಡಿಯುತ್ತಿರುವ ಅನುಪಮಾ ಗೌಡ. ಒಂದು ರೀಲ್ಸ್‌ ಮಾಡಲು ಪಡೆಯುವ ಸಂಭಾವನೆ ಕೇಳಿ ಎಲ್ಲರೂ ಶಾಕ್.....


ಕನ್ನಡ ಕಿರುತೆರೆಯ ಅಕ್ಕ, ಸೂಪರ್ ಹಿಟ್ ನಿರೂಪಕಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ರಾಂಡ್‌ಗಳ ಪ್ರಮೋಷನ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಿರೂಪಣೆಯಲ್ಲಿ ಎಪಿಸೋಡ್‌ ಲೆಕ್ಕದಲ್ಲಿ ಲಕ್ಷ ಲಕ್ಷ ದುಡಿಯುವ ನಟಿ, ಆನ್‌ಲೈನ್‌ನಲ್ಲಿ ಬ್ರಾಂಡ್ ಪ್ರಮೋಷನ್ ಮಾಡಿ ಜನರಿಗೆ ಮೊಸ ಮಾಡುತ್ತಿದ್ದಾರೆ. ಅವರೇ ಯಾವುದು ಟ್ರೈ ಮಾಡಿರುವುದಿಲ್ಲ ಹಣದ ಮುಖ ನೋಡಿ ಜನರಿಗೆ ಮೋಸ ಮಾಡುತ್ತಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿತ್ತು. ಜನರ ಕನ್‌ಫ್ಯೂಶನ್‌ಗೆ ಉತ್ತರ ಸಿಕ್ಕಿದೆ....

'ಸೋಷಿಯಲ್ ಮೀಡಿಯಾದಿಂದ ನಾನು ಈ ಕಾಂಟೆಂಟ್ ಕ್ರಿಯೇಟರ್ಸ್‌ ಆಗಿದ್ದೀವಿ. ಈಗ ಟ್ರೆಂಡ್‌ನಲ್ಲಿ ಎಷ್ಟೋ ಜನ ಟಿವಿ ಮತ್ತು ಸಿನಿಮಾದಲ್ಲಿ ಬರುವ ಅಗತ್ಯವೇ ಇಲ್ಲ ಕಾಂಟೆಂಟ್ ಕ್ರಿಯೇಟ್ ಮಾಡಿಕೊಂಡು ದುಡಿಮೆ ಮಾಡುತ್ತಿದ್ದಾರೆ ಅಲ್ಲಿ ಎಷ್ಟೋಂದು ದುಡಿಯುತ್ತಿದ್ದಾರೆ. ಯೂಟ್ಯೂಬ್‌ಗೆ ಕಾಲಿಟ್ಟು ಬ್ರ್ಯಾಂಡ್‌ಗಳ ಜೊತೆ ನಾನು ಕೆಲಸ ಮಾಡಲು ಶುರು ಮಾಡಿದ್ದು 5 ವರ್ಷಗಳ ಹಿಂದೆ ಆಗ ತುಂಬಾ ಕಡಿಮೆ ಕ್ರಿಯೇಟರ್‌ಗಳಿದ್ದರು. ಒಂದು ಬ್ರಾಂಡ್ ಪ್ರಮೋಷನ್ ಮಾಡುವ ಮುನ್ನ ನಾನು ಎರಡು ವಾರಗಳ ಕಾಲ ಟೆಸ್ಟ್ ಮಾಡಿ ಆನಂತರ ನಾನು ಪ್ರಮೋಷನ್ ಮಾಡುವುದು.  ಒಂದು ಬ್ರಾಂಡ್‌ನ ರೀಲ್ಸ್‌ ಅಥವಾ ವಿಡಿಯೋ ಮಾಡಿ ಪ್ರಚಾರ ಮಾಡಲು ನಾನು 20 ಸಾವಿರ ರೂಪಾಯಿಗಳನ್ನು ಕೇಳುತ್ತೀನಿ. ಬಾಂಬೆ ಮತ್ತು ಡೆಲ್ಲಿಯಲ್ಲಿ ಇರುವ ಕಾಂಟೆಂಟ್ ಕ್ರಿಯೇಟ್‌ಗಳು ಮಾತ್ರ ಕ್ರಿಯೇಟರ್‌ಗಳು ಅಲ್ಲ ಕನ್ನಡದಲ್ಲೂ ಎಷ್ಟೋ ಕ್ರಿಯೇಟರ್‌ಗಳು ಇದ್ದರೆ ಅವರು ಸರಿಯಾಗಿ ಬೆಳೆಯುತ್ತಿಲ್ಲ' ಎಂದು ಅನುಪಮಾ ಗೌಡ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಶೂಟಿಂಗ್ ಮನೆ ಮಾಡಲು ಹೋಗಿ 70 ಲಕ್ಷ ಲಾಸ್, ಕೊನೆಗೂ ಸತ್ಯ ಬಿಚ್ಚಿಟ್ಟ ಅನುಪಮಾ ಗೌಡ!

'ನಾವು ಪ್ರಮೋಷನ್ ಮಾಡಿ ದುಡ್ಡು ಮಾಡುತ್ತಿದ್ದೀನಿ ಎಂದು ಜನರು ಕಾಮೆಂಟ್ ಮಾಡುತ್ತಾರೆ ಆದರೆ ಯೂಟ್ಯೂಬ್‌ನಿಂದ ಬರುವುದು ತುಂಬಾ ಕಡಿಮೆ. ಪ್ರಮೋಷನ್ ಮಾಡುವ ಮುನ್ನವೇ ಹೇಳುತ್ತೀನಿ ನಾನು ಈ ರೀತಿ ಮಾಡುವುದಿಲ್ಲ ಈ ರೀತಿ ತೋರಿಸುವುದಿಲ್ಲ ಎಂದು ಒಂದಿಷ್ಟು ಕಂಡಿಷನ್ ಹಾಕುತ್ತೀನಿ ಆಮೇಲೆ ಎರಡು ವಾರಗಳ ಪ್ರಯೋಗ ಮಾಡಿದ ಮೇಲೆ ಜನರಿಗೆ ತೋರಿಸುತ್ತೀನಿ. ಹಣದ ಆಸೆ ತೋರಿಸಿ ಜನರಿಗೆ ಮೋಸ ಮಾಡಬಾರದು ಏಕೆಂದರೆ ನನ್ನ ಫಾಲೋವರ್ಸ್ ಇಷ್ಟ ಆದರೆ ಕಾಮೆಂಟ್ ಮಾಡುತ್ತಾರೆ ಇಷ್ಟ ಆಗಿಲ್ಲ ಅಂದ್ರೆ ಸುಮ್ಮನಿರುತ್ತಾರೆ ಎಲ್ಲೂ ನೆಗೆಟಿವ್ ಇಲ್ಲ. ಆದರೆ ಬ್ರ್ಯಾಂಡ್‌ಗಳು ನಮ್ಮ ಮಾತು ಕೇಳುವುದಿಲ್ಲ ಅರ್ಧ ಬಾಟಲ್ ಚಲ್ಲಿ ಜನರಿಗೆ ತೋರಿಸಿ ಎಂದು ಹೇಳುತ್ತಾರೆ. ನನ್ನ ಲಿಮಿಟ್ ಮೀರಿ ನಾನೂ ಏನೂ ಮಾಡುವುದಿಲ್ಲ ಹೀಗಾಗಿ ಬ್ರ್ಯಾಂಡ್‌ ಜೊತೆ ಮಾತುಕತೆ ಮಾಡುವುದು 2-3 ತಿಂಗಳು ತೆಗೆದುಕೊಳ್ಳುತ್ತದೆ ಅದಾದ ಮೇಲೆ ನಾನು ಶೂಟಿಂಗ್ ಮಾಡಿ ಅವರಿಗೆ ಇನ್‌ವಾಯ್ಸ್‌ ಕಳುಹಿಸಬೇಕು ಮತ್ತೆ 60 ದಿನಗಳ ನಂತರ ನನ್ನ ದುಡ್ಡು ಬರುವುದು. ಇಲ್ಲಿ ನಮ್ಮ ಸಮಯ, ನಮ್ಮ ಕ್ಯಾಮೆರಾ ನಮ್ಮ ಶ್ರಮಕ್ಕೆ ನಾನು ಹಣ ತೆಗೆದುಕೊಳ್ಳಬೇಕಾಗುತ್ತದೆ ಇಲ್ಲ ಅಂದ್ರೆ ನಾವು ಯಾವಾಗ ದುಡ್ಡು ಮಾಡುವುದು?' ಎಂದು ಅನುಪಮಾ ಗೌಡ ಹೇಳಿದ್ದಾರೆ. 

click me!