ಇವ್ರು ನನ್ನ ಒಳ್ಳೆಯ ಗಂಡ ಅಲ್ಲ... ಆದ್ರೆ... ನಟಿ ಮೇಘನಾ ರಾಜ್​ ಹಳೆಯ ವಿಡಿಯೋ ವೈರಲ್​

Published : Dec 25, 2024, 03:33 PM ISTUpdated : Dec 25, 2024, 03:38 PM IST
ಇವ್ರು ನನ್ನ ಒಳ್ಳೆಯ ಗಂಡ ಅಲ್ಲ... ಆದ್ರೆ... ನಟಿ ಮೇಘನಾ ರಾಜ್​ ಹಳೆಯ ವಿಡಿಯೋ ವೈರಲ್​

ಸಾರಾಂಶ

ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ನಟಿ. ಚಿರಂಜೀವಿ ಸರ್ಜಾ ಅವರ ಪತ್ನಿ. ಪತಿಯ ನಿಧನದ ನಂತರ ಸಿನಿಮಾಗಳಿಂದ ದೂರವಾಗಿದ್ದರು. "ತತ್ಸಮ ತದ್ಭವ"ದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಚಿರು ಜೊತೆಗಿನ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಭಾವುಕರಾಗಿದ್ದಾರೆ.

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಬರಸಿಡಿಲು ಬಡಿದಿತ್ತು. 2018ರ ಮೇ 2ರಂದು ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿ   ದಾಂಪತ್ಯ ಜೀವನ ನಡೆಸಿದ್ದು ಎರಡೇ ವರ್ಷ. 2020ರಲ್ಲಿ  ಚಿರು ಗರ್ಭಿಣಿಯಾಗಿದ್ದ ಪತ್ನಿ ಮೇಘನಾ ಸೇರಿದಂತೆ ಅಸಂಖ್ಯ ಅಭಿಮಾನಿಗಳನ್ನು  ಬಿಟ್ಟು ಹೋದರು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆದರು. ವರ್ಷಗಳ ಬಳಿಕ  ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿರು. ಸ್ನೇಹಿತ ಪನ್ನಗಾಭರಣ ಸ್ವತಃ ಮೇಘನಾಗಾಗಿ ತತ್ಸಮ ತದ್ಭವ ಸಿನಿಮಾ ನಿರ್ಮಾಣ ಮಾಡಿದರು. ಪ್ರಜ್ವಲ್‌ ದೇವರಾಜ್‌ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ ನಟಿ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಕೆಲ ಕಾಲ ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ ಆಗ ತಾನೇ ಮದುವೆಯಾದಾಗ, ಮಜಾ ಟಾಕೀಸ್​ನಲ್ಲಿ ಕಾಣಿಸಿಕೊಂಡಿದ್ದರು. ಅದರ ವಿಡಿಯೋ ಇದಾಗಿದೆ. ಈಗ ದಂಪತಿಗಳಾಗಿದ್ದೀರಿ. ಹೇಗನ್ನಿಸುತ್ತದೆ ಎಂದಾಗ ಮೇಘನಾ ಅವರು ಪತಿಯ ಮುಖ ನೋಡಿದ್ದಾರೆ. ಪತಿ ಏನೋ ಸನ್ನೆ ಮಾಡಿದ್ದಾರೆ. ಅದಕ್ಕೆ ಮೇಘನಾ ಅವರು ವಾರ್ನ್​ ಮಾಡ್ತಿದ್ದಾರೆ, ಅದಕ್ಕೆ ಚೆನ್ನಾಗಿದ್ದೇವೆ ಎಂದು ಹೇಳುತ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ. ಕೊನೆಗೆ ಅವರು ನನ್ನ ಗುಡ್​ ಹಸ್​ಬಂಡ್​ ಮಾತ್ರವಲ್ಲ, ಈಗಲೂ ಬೆಸ್ಟ್​ ಫ್ರೆಂಡ್​ ಎಂದಿದ್ದಾರೆ. ಇದೇ ವೇಳೆ ಚಿರು ಅವರಿಗೂ ಪತ್ನಿಯ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ಮೇಘನಾ ಅವರ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸಿದ್ದಾರೆ. ಈ ಕ್ಯೂಟ್​ ಜೋಡಿಯ ವಿಡಿಯೋ ಮತ್ತೊಮ್ಮೆ ಕಣ್ತುಂಬಿಸಿಕೊಂಡಿರುವ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಈ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಎನ್ನುತ್ತಿದ್ದಾರೆ.

ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಹೈಫೈ ಪತ್ನಿಗೆ ಉಗಿದು ಕಳಿಸಿದ ನ್ಯಾಯಾಧೀಶೆ: ಕೋರ್ಟ್​ ಕೇಸ್​ ವೈರಲ್​

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ಬಹುಭಾಷಾ ನಟಿ. ಕೆಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ನಾಟಕದ ನಂಟು ಹತ್ತಿತ್ತು.  ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ `ಕೃಷ್ಣಲೀಲೈ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು. ಆದರೆ ದುರದೃಷ್ಟವಶಾತ್‌ ಅದು ತೆರೆ ಕಾಣಲಿಲ್ಲ. ನಂತರ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. 2010ರಲ್ಲಿ ಬಿಡುಗಡೆಗೊಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಆದರೆ ಇವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟದ್ದು, ಹಾಗೂ ಇವರ ಚಿತ್ರ ರಂಗಕ್ಕೆ  ಬ್ರೇಕ್ ನೀಡಿದ್ದು ಮಾಲಿವುಡ್‌.  ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಮುಂತಾದ ಹಿಟ್ ಸಿನಿಮಾ ಕೊಟ್ಟಿದ್ದಾರೆ.

ಇನ್ನು ಚಿರಂಜೀವಿ  ಸರ್ಜಾ ಕುರಿತು ಹೇಳುವುದಾದರೆ, ವಾಯುಪುತ್ರ ಮೂಲಕ ಚಿತ್ರರಂಗವನ್ನು ಪ್ರವೇಶಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ 25ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.   ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.

 ಸುದೀಪ್​ - ನನ್ನದು ಫಸ್ಟ್​ ಲವ್​... ಆ ಆ್ಯಕ್ಸಿಡೆಂಟ್​ ಲೈಫನ್ನೇ ಬದಲಿಸಿಬಿಟ್ಟಿತು: ಸೀತಾರಾಮ ಶ್ಯಾಮ್ ಓಪನ್ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌