
ಹನ್ನೆರಡು ವರ್ಷಗಳ ಹಿಂದೆ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಅಮೃತಾ ಆಗಿ ನಟಿಸಿದ್ದ ರಜಿನಿ ಅವರೀಗ ವಿಲನ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ 'ನೀ ಇರಲು ಜೊತೆಯಲಿ' ಧಾರಾವಾಹಿಯಲ್ಲಿ ಊರ್ಮಿಳಾ ದಿವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಜಿನಿ ಅವರು ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಜೊತೆಗೆ ರೀಲ್ಸ್ ಮಾಡುತ್ತ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಈಗ ಅವರು ಮದುವೆ, ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
“ನನಗೆ ಮದುವೆ ಆಗಿಲ್ಲ, ಮದುವೆ ಆದರೆ ನಾನು ಎಲ್ಲರನ್ನು ಕರೆದು ಮದುವೆ ಆಗ್ತೀನಿ. ಅರುಣ್ ವೆಂಕಟೇಶ್ ಅವರು ಜಿಮ್ ಟ್ರೇನರ್. ಇವರ ಜೊತೆಯೇ ರಜಿನಿ ಅವರು ರೀಲ್ಸ್ ಮಾಡುತ್ತಿರುತ್ತಾರೆ. ನನ್ನ ಜೊತೆ ವಿಡಿಯೋ ಮಾಡುವವರು ಕೇವಲ ವಿಡಿಯೋ ಪಾರ್ಟ್ನರ್, ಸ್ನೇಹಿತ ಅಷ್ಟೇ. ಫ್ರೆಂಡ್ಸ್ ಆಗಿದ್ದವರು ಮದುವೆ ಆದರೆ ತಪ್ಪಿಲ್ಲ. ಇದು ಅವರವರಿಗೆ ಬಿಟ್ಟಿದ್ದು” ಎಂದು ರಜಿನಿ ಅವರು ಹೇಳಿದ್ದಾರೆ.
“ಸೀರಿಯಲ್‌ನಲ್ಲಿ ನಟಿಸುವ ಮುಂಚೆ ನಾನು ದಿನಕ್ಕೆ 2-3 ಗಂಟೆ ವರ್ಕೌಟ್ ಮಾಡ್ತಿದ್ದೆ, ಈಗ ಬೆಳಗ್ಗೆ ಶೂಟಿಂಗ್‌ಗೆ ಬರೋಕೂ ಮುನ್ನ ನಾನು ಯೋಗ ಮಾಡುತ್ತೇನೆ. ಅರುಣ್ ಥರ ನಾನು ಬಾಡಿ ಬಿಲ್ಡ್ ಮಾಡೋಕೆ ಆಗಲ್ಲ, ಅದಕ್ಕೆ ಅಷ್ಟು ಶ್ರದ್ಧೆ, ಪರಿಶ್ರಮ ಬೇಕು. ಹೀಗಾಗಿ ಫಿಟ್‌ನೆಸ್ ಕಾಂಪಿಟೇಶನ್‌ನಲ್ಲಿ ಭಾಗವಹಿಸೋಕೆ ಆಗೋದಿಲ್ಲ, ಆದರೆ ಫಿಟ್‌ನೆಸ್, ತೂಕ ಮೆಂಟೇನ್ ಮಾಡೋಕೆ ಟ್ರೈ ಮಾಡ್ತೀನಿ ಅಷ್ಟೇ. ವ್ಯಾಯಾಮ ಮಾಡೋರು ವೇ ಪ್ರೋಟೀನ್ ತಗೊಳ್ಳುತ್ತಾರೆ, ವ್ಯಾಯಾಮ ಮಾಡದೆ ಪ್ರೋಟೀನ್ ತಗೋಬಾರದು” ಎಂದು ರಜಿನಿ ಹೇಳಿದ್ದಾರೆ.
“ನಾನು ಜಿಮ್‌ನಲ್ಲಿ ವರ್ಕೌಟ್ ಮಾಡ್ತೀನಿ, ಅದಕ್ಕೂ ಕೆಲವರು ನೆಗೆಟಿವ್ ಮಾತನಾಡಿದ್ದುಂಟು. ನಮಗೆ ನೆಗೆಟಿವ್ ಕಾಮೆಂಟ್ಸ್ ಬಂದಾಗ ನಾನು ಸೋಶಿಯಲ್ ಮೀಡಿಯಾದಲ್ಲಿ ಅವರ ಅಕೌಂಟ್‌ನ್ನು ಬ್ಲಾಕ್ ಮಾಡ್ತೀನಿ. ನಮಗೆ ವಯಸ್ಸಾಗಿದೆ, ಅಜ್ಜಿ ಆಂಟಿ ಅಂತೆಲ್ಲ ಕಾಮೆಂಟ್ ಮಾಡೋದು ತಪ್ಪಾಗುತ್ತದೆ. ನೆಗೆಟಿವ್ ಕಾಮೆಂಟ್ಸ್ ಮಾಡಿದವರನ್ನು ಬ್ಲಾಕ್ ಮಾಡಿ ಸುಮ್ಮನಾಗುತ್ತಾನೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟು ಡ್ರ್ಯಾಗ್ ಮಾಡಲು ನನಗೆ ಇಷ್ಟ ಇಲ್ಲ, ಟೈಮ್ ಇಲ್ಲ” ಎಂದು ರಜಿನಿ ಹೇಳಿದ್ದಾರೆ.
ಅಂದಹಾಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಟಿ ರಜಿನಿ ಅವರು 'ಮಜಾ ಟಾಕೀಸ್' ಶೋನಲ್ಲಿ ಕೂಡ ಭಾಗವಹಿಸಿದ್ದರು. ಒಟ್ಟಿನಲ್ಲಿ ರಜಿನಿ ಅವರು ಡ್ಯಾನ್ಸ್, ಸಂಗೀತ, ಕಾಮಿಡಿ, ನಟನೆ ಎಂದು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.