
ಗೌತಮ್ ಸರ್, ಗೌತಮ್ ಸರ್ ನಾನು ನಿಮ್ಮನ್ನು ತುಂಬಾ ಲವ್ ಮಾಡ್ತೇನೆ ಎನ್ನುತ್ತಾ, ತನಗಿಂತ ಸಿಕ್ಕಾಪಟ್ಟೆ ಹಿರಿಯನಾಗಿರೋ ಗೌತಮ್ ಪ್ರೀತಿಯ ಬಲೆಗೆ ಬಿದ್ದು, ಕೊನೆಗೆ ಗೌತಮ್ನಿಂದಲೇ ಬದುಕಿನ ಪಾಠ ಹೇಳಿಸಿಕೊಂಡಾಕೆ ಸುಷ್ಮಾ. ಯೌವನದಲ್ಲಿ ಉಂಟಾಗುವ ಈ ಪ್ರೀತಿ ನಿಜವಾಗಿಯೂ ಏನು, ಪ್ರೀತಿಯ ಅರ್ಥ ತಿಳಿಯದೇ ಇಂಥ ವಯಸ್ಸಿನಲ್ಲಿ ಮೋಸ ಹೋಗುವ ಯುವತಿಯರಿಗೆ ಅತ್ಯಂತ ಸುಂದರವಾಗಿ ಪಾಠ ಮಾಡುವ ಮೂಲಕ, ನಿಜ ಜೀವನದಲ್ಲಿಯೂ ಯುವತಿಯರಿಗೆ ಮನಮುಟ್ಟುವ ಮಾತನಾಡಿದ್ದಾರೆ ಅಮೃತಧಾರೆಯ ಗೌತಮ್ ಅರ್ಥಾತ್ ರಾಜೇಶ್ ನಟರಂಗ ಅವರು. ಇಂಥದ್ದೊಂದು ಸುಂದರ ಪಾಠ ಮಾಡಲು ಸ್ಫೂರ್ತಿಯಾದಾಕೆ ಇದೇ ಸುಷ್ಮಾ.
ಹಾಗಿದ್ರೆ ಯಾರೀ ಸುಷ್ಮಾ? ಈ ಪಾತ್ರವನ್ನು ನಿಭಾಯಿಸ್ತಿರೋ ನಟಿಯ ಹೆಸರು ಸಹನಾ ಗೌಡ. ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಬಹುಶಃ ಸೀರಿಯಲ್ನಲ್ಲಿ, ಸುಷ್ಮಾ ಪಾತ್ರ ಮುಗಿದಂತೆ ಕಾಣಿಸುತ್ತಿದೆ.ಏಕೆಂದರೆ, ವಠಾರದ ಪಾತ್ರವಿನ್ನೂ ಮುಕ್ತಾಯದ ಹಂತದಲ್ಲಿದೆ.
ಭೂಮಿಕಾ ಮತ್ತು ಗೌತಮ್ ಒಂದಾಗಿರೋ ಕಾರಣದಿಂದಾಗಿ, ಭೂಮಿಕಾ ಕೈಯಲ್ಲಿಯೇ ಗೌತಮ್ಗೆ ಲವ್ ಲೆಟರ್ ಬರೆಸಿದ್ದ ಸುಷ್ಮಾ ಪಾತ್ರವೂ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ಸಹನಾ ಅವರು ಇಡೀ ತಂಡದ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕಿಟಕಿಯಿಂದಲೇ ಗೌತಮ್‌ನನ್ನು ನೋಡಿ ಲವ್ ಮಾಡಿ, ಕೊನೆಗೆ ಗೌತಮ್ಗೆ ಪ್ರೀತಿಯ ನಿವೇದನೆಯನ್ನು ಹೇಳಿಕೊಳ್ಳಲು ಲವ್ ಲೆಟರ್ ಬರೆಯಲು ಬಾರದೇ ಭೂಮಿಕಾ ಕೈಯಿಂದಲೇ ಬರೆಸಿದ್ದಳು ಸುಷ್ಮಾ. ಈ ವಯಸ್ಸಿನಲ್ಲಿನ ತೊಳಲಾಟವನ್ನು ಗಮನಿಸಿದ್ದ ಭೂಮಿಕಾ ಕೂಡ, ಸತ್ಯಾಂಶ ಏನು ಎಂದು ಹೇಳದೇ ಲವ್ ಲೆಟರ್ ಬರೆದು ಕೊಟ್ಟಿದ್ದಳು. ಕೊನೆಗೆ ಈ ಪ್ರೇಮ ಪತ್ರವನ್ನು ಭೂಮಿಕಾಳೇ ತನಗೆ ಬರೆದದ್ದು ಎಂದು ಗೌತಮ್ ಅಂದುಕೊಂಡಿದ್ದ. ಒಟ್ಟಿನಲ್ಲಿ ಈ ಲವ್ ಲೆಟರ್ ಭೂಮಿಕಾ ಮತ್ತು ಗೌತಮ್‌ನನ್ನು ಒಂದು ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.