
‘ಅಮೃತಧಾರೆʼ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ದಿವಾನ್‌ಗೆ ಮಗಳು ಸಿಕ್ಕಿಲ್ಲ ಎನ್ನೋದು ಚಿಂತೆ ಆಗಿತ್ತು. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಮಗಳು ಅನಾಥಾಶ್ರಮದಲ್ಲಿರೋದು ಗೊತ್ತಾಗಿದೆ. ಅವನು ಹೋಗಿ ಮಗಳನ್ನು ಹುಡುಕಿದ್ದಾನೆ, ಮಗಳು ಈಗ ಅವನ ಕೈಸೇರಿದೆ.
ಅಂದು ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಮೊದಲು ಮಗಳು ಹುಟ್ಟಿದ್ದಳು. ಅದನ್ನು ಜಯದೇವ್ ಕದ್ದು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬಿಸಾಕಿದ್ದನು. ರಾತ್ರಿಯಾಗಿದ್ದರಿಂದ ಮಗು ಎಲ್ಲಿ ಹೋಯ್ತು ಅಂತ ಗೌತಮ್‌ಗೆ ಕಾಣಿಸಲಿಲ್ಲ. ಇನ್ನು ಆ ಮಗು ಇದ್ದಿದ್ರೆ ಆಟ ಆಡಿಸಬಹುದಿತ್ತು ಅಂತ ಶಕುಂತಲಾ ಹೇಳಿದಾಗ ಅವನು ಆ ಮಗು ಹುಡುಕಿದರೂ ಕೂಡ ಸಿಗಲಿಲ್ಲ. ಒಟ್ಟಿನಲ್ಲಿ ಇಷ್ಟುದಿನಗಳಿಂದ ಮಗಳು ಸಿಗದೆ ಗೌತಮ್ ಮನಸ್ಸಿನಲ್ಲಿಯೇ ಕೊರಗುತ್ತಿದ್ದನು.
ಮಗಳು ಕಳೆದುಹೋಗಿರೋ ವಿಷಯವನ್ನು ಗೌತಮ್, ಪೊಲೀಸರಿಗೆ ತಿಳಿಸಿದ್ದನು. ಪೊಲೀಸರು ಕೂಡ ಮಗುವನ್ನು ಹುಡುಕುವ ಪ್ರಯತ್ನದಲ್ಲಿದ್ದರು. ಆ ಕಾಡಿನಲ್ಲಿ ಕಟ್ಟಿಗೆ ಕಡಿಯುವವರಿಗೆ ಮಗು ಸಿಕ್ಕಿದ್ದು, ಅವರು ಆ ಮಗುವನ್ನು ಅನಾಥಾಶ್ರಮದಲ್ಲಿ ಬಿಟ್ಟಿರೋದು ಪೊಲೀಸರಿಗೆ ಗೊತ್ತಾಗಿತ್ತು. ಅನಾಥಾಶ್ರಮಕ್ಕೆ ಹೋಗಿ ಆ ಮಗುವನ್ನು ನೋಡಿದಾಗ, ಅದು ಹೆಣ್ಣು ಮಗಳು, ತನ್ನಂತೆ ಹೋಲಿಕೆ ಇದೆ ಎನ್ನೋದು ಕೂಡ ಗೌತಮ್‌ಗೆ ಗೊತ್ತಾಗಿದೆ. ಮಗಳನ್ನು ನೋಡಿ ಅವನು ಫುಲ್ ಖುಷಿ ಆಗಿದ್ದಾನೆ. ಇದು ಕನಸು ಅಲ್ಲ ಎನ್ನೋದು ನಮ್ಮ ಅಭಿಪ್ರಾಯ, ನೋಡೋಣ..
ತಾನು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದೀನಿ, ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎನ್ನೋದು ಭೂಮಿಕಾಗೆ ಗೊತ್ತಿಲ್ಲ. ಈ ವಿಷಯ ಕೇವಲ ಆನಂದ್, ಗೌತಮ್, ಶಕುಂತಲಾ, ಜಯದೇವ್‌ಗೆ ಮಾತ್ರ ಗೊತ್ತಿದೆ. ತನ್ನ ಮಗನಿಗೆ ಸ್ವಲ್ಪ ಸಮಸ್ಯೆ ಆದರೂ ಕೂಡ ಭೂಮಿಕಾ ಸಹಿಸುತ್ತಿರಲಿಲ್ಲ. ಇದನ್ನು ನೋಡಿದ ಡಾಕ್ಟರ್, “ಭೂಮಿಕಾ ತುಂಬ ಸೆನ್ಸಿಟಿವ್ ಆಗಿದ್ದಾರೆ. ಅವಳಿಗೆ ಯಾವುದೇ ಶಾಕಿಂಗ್ ವಿಷಯವನ್ನು ತಿಳಿಸಬೇಡಿ” ಅಂತ ಹೇಳಿದ್ದರು. ಭೂಮಿಕಾರನ್ನು ಉಳಿಸಿಕೊಳ್ಳಬೇಕು ಎಂದು ಗೌತಮ್ ಕೂಡ ಸುಮ್ಮನಿದ್ದನು.
ಭೂಮಿಕಾಗೆ ಸತ್ಯ ಗೊತ್ತಾದರೆ ಏನಾಗುವುದು ಎಂಬ ಪ್ರಶ್ನೆ ಇದೆ. ನನ್ನಿಂದ ನನ್ನ ಮಗಳ ವಿಷಯವನ್ನು ಮುಚ್ಚಿಟ್ಟರು ಎಂದು ಅವಳು ಗೌತಮ್ ಮೇಲೆ ಬೇಸರ ಮಾಡಿಕೊಳ್ಳಬಹುದು. ಇದೇ ವಿಷಯವನ್ನು ಇಟ್ಟುಕೊಂಡು ಗೌತಮ್ ಹಾಗೂ ಭೂಮಿಕಾ ನಡುವೆ ಶಕುಂತಲಾ ತಂದಿಡಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಶಕುಂತಲಾ ಕೆಟ್ಟವಳು ಅಮೃತದ ಲೇಬಲ್ ಹಾಕಿಕೊಂಡಿರೋ ವಿಷ ಎನ್ನೋದು ಭಾಗ್ಯಮ್ಮಳಿಂದ ಭೂಮಿಗೆ ಗೊತ್ತಾಗಿದೆ. ತನ್ನ ಗಂಡನ ನಿಜವಾದ ತಾಯಿ ಭಾಗ್ಯ ಈ ವಿಷಯವನ್ನು ಹೇಳಿದ್ದಾಳೆ ಎನ್ನೋದನ್ನು ಕೂಡ ಶಕುಂತಲಾಗೆ ಭೂಮಿ ಹೇಳಿದ್ದಾಳೆ. ಈ ವಿಷಯದ ಬಗ್ಗೆ ನೇರವಾಗಿ ಶಕುಂತಲಾ ಬಳಿ ಭೂಮಿ ವಾದ ಮಾಡಿದ್ದಾಳೆ. ಈಗ ಇವರಿಬ್ಬರ ನೇರ ಯುದ್ಧ ಕೂಡ ಶುರುವಾಗಿದೆ.
ಗೌತಮ್ ಹಾಗೂ ಭೂಮಿಕಾ ಮನೆಯವರ ಖುಷಿಗೋಸ್ಕರ ಮದುವೆ ಆಗುತ್ತಾರೆ, ಆಮೇಲೆ ಅವರ ಮಧ್ಯೆ ಪ್ರೀತಿ ಹುಟ್ಟಿ ಈಗ ಪಾಲಕರಾಗಿದ್ದಾರೆ. ಗೌತಮ್‌ಗೆ ಮದುವೆಯಾಗಿ ಮಕ್ಕಳಾದರೆ ಆಸ್ತಿ ಅವರ ಪಾಲಾಗುತ್ತದೆ ಎಂದು ಶಕುಂತಲಾ ಒಂದಿಷ್ಟು ಪ್ಲ್ಯಾನ್ ಮಾಡಿದರೂ ಕೂಡ ಗೌತಮ್‌ಗೆ ಮದುವೆ ಆಗೋದನ್ನು ತಪ್ಪಿಸಲಾಗಲಿಲ್ಲ, ಮಕ್ಕಳಾಗೋದನ್ನು ಕೂಡ ತಡೆಯಲಾಗಲಿಲ್ಲ. ಶಕುಂತಲಾ ಹಾಗೂ ಅವಳ ಮಗ ಜಯದೇವ್ ಇನ್ಮುಂದೆ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ.
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಶಕುಂತಲಾ- ವನಿತಾ ವಾಸು
ಜಯದೇವ್- ರಾಣವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.