ಅಮೃತಧಾರೆ ಭೂಮಿಕಾಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್: ಪತಿಯನ್ನು ಕಂಡು ಕಣ್ಣೀರಿಟ್ಟ ನಟಿ

Published : Oct 30, 2026, 04:48 PM IST
Chaya Singh Surprise Gift

ಸಾರಾಂಶ

ಅಮೃತಧಾರೆ ಧಾರಾವಾಹಿಯ ಭೂಮಿಕಾ ಖ್ಯಾತಿಯ ಛಾಯಾ ಸಿಂಗ್ ಅವರಿಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್ ಸಿಕ್ಕಿದೆ. ಪತಿ ಕೃಷ್ಣ ಅವರ ವಿಶೇಷ ಎಂಟ್ರಿ ಹಾಗೂ ಜೀ ಕನ್ನಡ ನೀಡಿದ ನಾಯಿ ಮರಿ ಉಡುಗೊರೆ ನಟಿಯನ್ನು ಭಾವುಕರನ್ನಾಗಿಸಿದೆ.

ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯ ಭೂಮಿಕಾ ಪಾತ್ರಧಾರಿ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಛಾಯಾ ಸಿಂಗ್ ಅವರಿಗೆ ‘ಜೀ ಕುಟುಂಬ ಅವಾರ್ಡ್ಸ್’ ವೇದಿಕೆ ಎಂದಿಗೂ ಮರೆಯಲಾಗದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಿದ್ದ ನಟಿಗೆ ಪತಿಯಿಂದ ಸಿಕ್ಕ ಅನಿರೀಕ್ಷಿತ ಸರ್ಪ್ರೈಸ್ ಒಂದು ಕಡೆಯಾದರೆ, ವಾಹಿನಿಯ ಕಡೆಯಿಂದ ಸಿಕ್ಕ ಮುದ್ದಾದ ಉಡುಗೊರೆ ಮತ್ತೊಂದು ಕಡೆ. ಈ ಎರಡು ವಿಶೇಷ ಕ್ಷಣಗಳು ನಟಿಯನ್ನು ಭಾವುಕರಾಗಿಸಿವೆ.

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಂದ ನೆಚ್ಚಿನ ನಟಿ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ್ದ ಛಾಯಾ ಸಿಂಗ್, ತಮ್ಮ ವೈಯಕ್ತಿಕ ಬದುಕಿನ ಕೆಲವು ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡರು. ‘ಅಮೃತಧಾರೆ’ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಕುಟುಂಬದಿಂದ ದೂರವಿದ್ದು, ಚೆನ್ನೈ ಮತ್ತು ಬೆಂಗಳೂರು ನಡುವೆ ನಿರಂತರವಾಗಿ ಪ್ರಯಾಣಿಸುತ್ತಿರುವುದನ್ನು ನೆನಪಿಸಿಕೊಂಡರು.

ಭಾವುಕರಾಗಿ ಕಣ್ಣೀರು ಹಾಕಿದ ಛಾಯಾ

ಇದೇ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ವೇದಿಕೆಗೆ ಎಂಟ್ರಿ ಕೊಟ್ಟವರು ಅವರ ಪತಿ ಕೃಷ್ಣ! ಛಾಯಾ ಸಿಂಗ್ ಅವರ ಹಿಂದೆ ಬಂದು ನಿಂತ ಪತಿಯನ್ನು ಕಂಡ ನಟಿಗೆ ಒಂದು ಕ್ಷಣ ಅಚ್ಚರಿಯಾಯಿತು. ಬಳಿಕ ಪತಿಯನ್ನು ತಬ್ಬಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದರು. ತಮ್ಮ ವೃತ್ತಿಜೀವನದ ಈ ಪಯಣದಲ್ಲಿ ಪತಿ ನೀಡಿದ ಬೆಂಬಲವನ್ನು ನೆನಪಿಸಿಕೊಂಡ ಅವರು, ‘ಅಮೃತಧಾರೆ ಆರಂಭವಾದ ದಿನದಿಂದಲೂ ಇವರು ಒಬ್ಬಂಟಿಯಾಗಿ ಕಾಲ ಕಳೆಯುತ್ತಿದ್ದಾರೆ. ನಿಮ್ಮ ಬೆಂಬಲದಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದು ಪ್ರೀತಿಯಿಂದ ಹೇಳಿದರು.

ಭಾವನೆಗಳ ಸುಂದರ ಸಂಗಮ

ಇನ್ನು ಅಚ್ಚರಿಗಳ ಸರಮಾಲೆ ಇಲ್ಲಿಗೇ ಮುಗಿಯಲಿಲ್ಲ. ಈ ಸುಂದರ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಲು ಜೀ ಕನ್ನಡ ವಾಹಿನಿಯ ವತಿಯಿಂದ ಛಾಯಾ ಸಿಂಗ್ ಅವರಿಗೆ ಮುದ್ದಾದ ನಾಯಿ ಮರಿಯೊಂದನ್ನು ಉಡುಗೊರೆಯಾಗಿ ನೀಡಲಾಯಿತು. ಅನಿರೀಕ್ಷಿತವಾಗಿ ಸಿಕ್ಕ ಈ ಪುಟ್ಟ ಅತಿಥಿಯನ್ನು ಕಂಡು ನಟಿ ಖುಷಿಪಟ್ಟರು. ಪತಿಯ ಪ್ರೀತಿ, ವಾಹಿನಿಯ ಉಡುಗೊರೆ ಹಾಗೂ ಅಭಿಮಾನಿಗಳ ಪ್ರೀತಿಯ ನಡುವೆ ಛಾಯಾ ಸಿಂಗ್ ಪಾಲಿಗೆ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್ ವೇದಿಕೆ ಭಾವನೆಗಳ ಸುಂದರ ಸಂಗಮವಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದುಬೈ ಸಮುದ್ರ ತೀರದಲ್ಲಿ ಪವಿತ್ರ ಬಂಧನ ನಾಯಕಿಯ ಬಿಂದಾಸ್ ಲುಕ್
ಶಿಕ್ಷಕಿ ವಂದನಾ ರೈ ಅವರನ್ನು ನೋಡಿ ಕಾರಿಂದಿಳಿದು ಬಂದ ಅನುಶ್ರೀ: ನಿರೂಪಕಿಯ ಸರಳತೆಗೆ ಮತ್ತೆ ಫಿದಾ ಆದ ಕನ್ನಡಿಗರು