ಭಾಗ್ಯಲಕ್ಷ್ಮಿ ಸೀರಿಯಲ್‌ ತಾಂಡವ್‌ರನ್ನು ನಟಿ ಸಂಗೀತಾ ಮದ್ವೆಯಾಗಿದ್ದು ಇದಕ್ಕಂತೆ! ಉಫ್​ ಅಂದ ಫ್ಯಾನ್ಸ್​

By Suvarna News  |  First Published Dec 1, 2023, 8:51 PM IST

ಭಾಗ್ಯಲಕ್ಷ್ಮಿ ಸೀರಿಯಲ್​ ನಾಯಕ ಕಮ್​ ವಿಲನ್​ ಪಾತ್ರಧಾರಿ ತಾಂಡವ್​ ಅವರನ್ನು ಅವರನ್ನು ಮದ್ವೆಯಾಗಿದ್ದು ಏಕೆ ಎಂದು ಅವರ ರಿಯಲ್​ ಪತ್ನಿ ಸಂಗೀತಾ ಹೇಳಿದ್ದಾರೆ ಕೇಳಿ... 
 


ತಾಂಡವ್‌ ಎಂದರೆ ಸಾಕು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋ ಭಾಗ್ಯಲಕ್ಷ್ಮಿ ಸೀರಿಯಲ್‌ ಧಾರಾವಾಹಿ ಪ್ರಿಯರ ಕಣ್ಮುಂದೆ ಬರುತ್ತದೆ. ಸೀರಿಯಲ್​ ನಾಯಕನಾಗಿದ್ದರೂ ಧಾರಾವಾಹಿಯಲ್ಲಿ ತಾಂಡವ್​ ಖಳನಾಯಕ. ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಇನ್ನೊಬ್ಬಳ ಸಹವಾಸ ಮಾಡಿದ್ದಾನೆ. ಈಗಂತೂ ಮನೆ ಬಿಟ್ಟು ಹೋಗಿ ಲವರ್​ ಜೊತೆ ಬೇರೆ ಮನೆ ಮಾಡಿ ಸಂಸಾರ ಶುರುವಿಟ್ಟುಕೊಂಡಿದ್ದಾನೆ. ಇದೇ ಕಾರಣಕ್ಕೆ ತಾಂಡವ್​ನನ್ನು ಕಂಡ್ರೆ ಸೀರಿಯಲ್​ ಪ್ರಿಯರು ಉಗಿಯುತ್ತಿದ್ದಾರೆ. ಸಾಮಾನ್ಯವಾಗಿ ಖಳನಾಯಕ ಎಂದರೆ ಹೊರಗಡೆಯಲ್ಲಿಯೂ ಅವರನ್ನು ಬೈಯುವವರೇ ಹೆಚ್ಚು. ತಾವು ನೋಡುತ್ತಿರುವುದು ಧಾರಾವಾಹಿ, ಅದರಲ್ಲಿ ಇರುವುದು ಕಾಲ್ಪನಿಕ ಪಾತ್ರಗಳು ಎನ್ನುವುದನ್ನು ಮರೆತು, ಖಳನಾಯಕರನ್ನು ಚೆನ್ನಾಗಿ ಉಗಿಯುವುದೂ ಇದೆ. ಅದೇ ರೀತಿ ತಾಂಡವ್​ ಪಾತ್ರಧಾರಿಯೂ ಅನುಭವಿಸುತ್ತಿದ್ದಾರೆ. ಅಂದಹಾಗೆ, ಖಳನಾಯಕನಾಗಿ ಮಿಂಚುತ್ತಿರುವ ತಾಂಡವ್​ ಪಾತ್ರಧಾರಿಯ ನಿಜವಾದ ಹೆಸರು ಸುದರ್ಶನ್‌ ರಂಗಪ್ರಸಾದ್‌.

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಏನೂ ಗೊತ್ತಿಲ್ಲದ, ಹೆಚ್ಚು ಕಲಿಯದ, ಈಗಷ್ಟೇ ವಿದ್ಯಾಭ್ಯಾಸ ಶುರು ಮಾಡಿರುವ ಭಾಗ್ಯ ತಾಂಡವ್​ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್​, ತಾಂಡವ್​ ಅರ್ಥಾತ್​ ಸುದರ್ಶನ ರಂಗಪ್ರಸಾದ್​ ಅವರ ಪತ್ನಿ. ಸಂಗೀತಾ ಭಟ್‌ ನಟಿಯಾಗಿ, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್‌ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್‌ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು  2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್‌, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು.

Tap to resize

Latest Videos

ರಶ್ಮಿಕಾ ಹಗ್‌ ಮಾಡ ಬಂದಾಗ ಆಲಿಯಾ ಭಟ್‌ ಹೀಗ್‌ ಮಾಡೋದಾ? ಅವಳೇನು ಸವತಿನಾ ಕೇಳಿದ ನೆಟ್ಟಿಗರು!
 
ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ  '48 ಅವರ್ಸ್‌' ಸಿನಿಮಾ ಅವರ ಕೊನೆಯ ಚಿತ್ರ. ಇದೀಗ ಅವರು ಪತಿ ಸುದರ್ಶನ್‌ ರಂಗಪ್ರಸಾದ್​ ಜೊತೆಗೆ ಚಿಕ್ಕದೊಂದು ರೀಲ್ಸ್​ ಮಾಡಿದ್ದಾರೆ. ನನಗೆ ಮದುವೆಯಾಗಲು ಮನೆಯಲ್ಲಿ ಎಷ್ಟೊಂದೆಲ್ಲಾ ಗಂಡು ತೋರಿಸಿದ್ರು. ಆದ್ರೂ ಅವರನ್ನು ಬಿಟ್ಟು ನಿಮ್ಮನ್ನು ಯಾಕೆ ಮದ್ವೆಯಾದೆ ಗೊತ್ತಾ ಎಂದು ಸಂಗೀತಾ ಪತಿ ಸುದರ್ಶನ್​ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಖುಷಿಯಿಂದ  ಕಾಲರ್​ ಎಳೆದುಕೊಂಡ ಪತಿ, ಯಾಕೆ ಎಂದು ಕೇಳುತ್ತಾರೆ. ಅದಕ್ಕೆ ಸಂಗೀತಾ ನನ್ನ ಕರ್ಮರೀ... ಅದಕ್ಕೇ ಆದೆ ಎಂದಾಗ ಹಿಂಬದಿಯಿಂದ ನಗುವಿನ ಸುರಿಮಳೆ. 

ಈ ಜೋಕ್​ ನೋಡಿ ಹಲವರು ಸುದರ್ಶನ್​ ಅವರ ಕಾಲೆಳೆದಿದ್ದಾರೆ. ಭಾಗ್ಯ ಆಯ್ತು, ಶ್ರೇಷ್ಠಾನೂ ಆಯ್ತು ಈಗ ಇವ್ರಾ ಎಂದು ತಮಾಷೆ ಮಾಡಿದ್ದಾರೆ. ನಿಮ್ಮ ಜೋಡಿ ಸದಾಕಾಲ ಹೀಗೆಯೇ ನಗುನಗುತ್ತಾ ಇರಲಿ ಎಂದು ಹಲವರು ಆಶೀರ್ವದಿಸಿದ್ದಾರೆ. 

ಹಸಿಬಿಸಿ ದೃಶ್ಯ ಮುಗಿಸಿದ ಮೇಲಾದ್ರೂ ಮಗಳು ನೆನಪಾದ್ಲಾ ಎಂದು ರಣಬೀರ್‌ ಕಪೂರ್‌ ಕಾಲೆಳೆದ ನೆಟ್ಟಿಗರು
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!