ಅಮೃತಧಾರೆ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ ಜೋಡಿ ಶಶಿ ಹೆಗ್ಡೆ- ಲಾವಣ್ಯ ಭಾರದ್ವಾಜ ರೀಲ್ಸ್ ಮಾಡಿದ್ರೆ ತಮ್ಮ ಮನೆಯ ಗೋಳು ತೋಡಿಕೊಳ್ತಿದ್ದಾರೆ ಮಹಿಳೆಯರು. ಅಷ್ಟಕ್ಕೂ ಈ ರೀಲ್ಸ್ನಲ್ಲಿ ಏನಿದೆ?
ಮೊಬೈಲ್ ಬಂದ ಮೇಲಂತೂ ಬಹುತೇಕ ಮಂದಿಯ ಜೀವನವೇ ಬದಲಾಗಿ ಹೋಗಿದೆ. ಮಕ್ಕಳು ಶಾಲೆಯನ್ನಾದ್ರೂ ಬಿಟ್ಟೇನು, ಮೊಬೈಲ್ ಬಿಡಲ್ಲ ಎಂದ್ರೆ, ದಂಪತಿ ವಿಷಯಕ್ಕೆ ಬರೋದಾದ್ರೆ ಪತಿ-ಪತ್ನಿಗಿಂತ ಹೆಚ್ಚಾಗಿ ಅವರಿಗೆ ಮೊಬೈಲ್ ಮೇಲೆನೇ ಹೆಚ್ಚು ಪ್ರೀತಿ. ಕೆಲವೇ ವರ್ಷಗಳ ಹಿಂದೆ ಪತ್ನಿಯರು ನನ್ನ ಗಂಡನಿಗೆ ಆಫೀಸು ಎರಡನೆ ಹೆಂಡ್ತಿ ಇದ್ದ ಹಾಗೆ ಅಂತಿದ್ರು, ಆದ್ರೆ ಈಗ ಕಾಲ ಬದಲಾಗಿದೆ. ಮೊಬೈಲ್ ನನ್ನ ಗಂಡನಿಗೆ ಮೊದಲ ಹೆಂಡ್ತಿ... ನಾನು ಎರಡನೆವಳು ಎನ್ನೋ ಹಾಗಾಗಿದೆ. ಹಾಗೆಂದು ಹೆಣ್ಣುಮಕ್ಕಳೇನೂ ಕಮ್ಮಿ ಇಲ್ಲ. ಕೆಲವು ಮನೆಗಳಲ್ಲಿ ಮನೆಗೆಲಸ, ಅಡುಗೆ ಮಾಡುವುದನ್ನೂ ಮರೆತು ಹೆಣ್ಣುಮಕ್ಕಳು ಮೊಬೈಲ್ನಲ್ಲಿ ಮುಳುಗಿರುತ್ತಾರೆ.
ಇದೀಗ ಸೀರಿಯಲ್ ಜೋಡಿ ರೀಲ್ಸ್ ಮಾಡಿದ್ದು, ಅದನ್ನು ನೋಡಿ ಹಲವು ಮಹಿಳೆಯರು ನಮ್ಮ ಮನೆಯಲ್ಲೂ ಇದೇ ಗೋಳು, ಹೇಳಿ ಹೇಳಿ ಸಾಕಾಗಿ ಹೋಗಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಇದರಲ್ಲಿ, ಸೀರಿಯಲ್ ಜೋಡಿ ಶಶಿ ಹೆಗ್ಡೆ ಮತ್ತು ಲಾವಣ್ಯ ಭಾರದ್ವಾಜ್ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಡಾ.ರಾಜ್ಕುಮಾರ್ ಮತ್ತು ನಟಿ ಕಲ್ಪನಾ ಅಭಿನಯದ ಚಿತ್ರವೊಂದರ ಡೈಲಾಗ್ ಅನ್ನು ಲಾವಣ್ಯ ಪತಿಗೆ ಹೇಳಿದ್ದಾರೆ. ಶಶಿ ಅವರು ಮೊಬೈಲ್ನಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಎರಡೇ ಎರಡು ಮಾತನ್ನು ಪತ್ನಿಯ ಬಳಿ ಮಾತನಾಡಬೇಕು ಎಂದು ನಿಮಗೆ ಅನ್ನಿಸೋದೇ ಇಲ್ವಾ ಎನ್ನುವ ಡೈಲಾಗ್ ಇದು. ಚಿತ್ರದಲ್ಲಿ ನಾಯಕ ರಾಜ್ಕುಮಾರ್ ಪತ್ನಿಯ ಮೇಲೆ ಸಿಟ್ಟಿನಿಂದ ಮಾತು ಬಿಟ್ಟಾಗ ಪತ್ನಿ ಕಲ್ಪನಾ ಈ ಡೈಲಾಗ್ ಹೇಳುತ್ತಾರೆ. ಆದರೆ ಇಲ್ಲಿ ಶಶಿ ಮೊಬೈಲ್ನಲ್ಲಿ ಮುಳುಗಿದಾಗ ಲಾವಣ್ಯ ಈ ಮಾತನ್ನು ಹೇಳುವ ಮೂಲಕ ಬಹುತೇಕ ಮಹಿಳೆಯರು ತಮ್ಮ ಮನೆಯಲ್ಲೂ ಇದೇ ಕಥೆ ಎನ್ನುವ ಹಾಗೆ ಮಾಡಿದ್ದಾರೆ.
undefined
ಹನಿಮೂನ್ಗೆ ಹೋಗಲು ಆಗಿಲ್ವಾ? ಇಲ್ಲಿಂದ್ಲೇ ನೋಡಿ ಮನಾಲಿ ಸಿಸ್ಸು ವಾಟರ್ಫಾಲ್ಸ್ ಅಂತಿದೆ ಈ ಶಶಿ-ಲಾವಣ್ಯ ಜೋಡಿ!
ಅಷ್ಟಕ್ಕೂ ಸೀರಿಯಲ್ ಪ್ರೇಮಿಗಳಿಗೆ ತಿಳಿದಿರುವಂತೆ, ಅಮೃತಧಾರೆಯ ನಾಯಕಿ ಭೂಮಿಕಾಳ ಸಹೋದರ ಜೀವನ್ ಆಗಿ ಶಶಿ ನಟಿಸುತ್ತಿದ್ದಾರೆ. ಈ ಸೀರಿಯಲ್ನಲ್ಲಿ ಇವರು ಮಹಿಮಾ ಪತಿ. ಆದರೆ ಅಸಲಿಗೆ ಇವರು ಲಾವಣ್ಯ ಅವರ ಪತಿ. ಅಂದಹಾಗೆ, ಲಾವಣ್ಯ ಅವರು ಶ್ರೀರಸ್ತು ಶುಭಮಸ್ತುವಿನಲ್ಲಿ ಅವಿಯ ಪತ್ನಿ ಪೂರ್ಣಿಯಾಗಿ ನಟಿಸುತ್ತಿದ್ದಾರೆ. ಈ ಜೋಡಿ ಇದಾಗಲೇ ಹಲವಾರು ರೀಲ್ಸ್ಗಳನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ರಂಜಿಸುತ್ತಲೇ ಇರುತ್ತದೆ. ಇನ್ನು ಈ ಜೋಡಿಯ ಕುರಿತು ಇಂಟರೆಸ್ಟಿಂಗ್ ವಿಷ್ಯವೂ ಇದೆ. ಕೆಲ ದಿನಗಳ ಹಿಂದಷ್ಟೇ ಶಶಿ ಮತ್ತು ಲಾವಣ್ಯ ಅವರು ತಮ್ಮ ಎರಡನೆಯ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮದುವೆಯಾದ ಮೇಲೆ ಹನಿಮೂನ್ಗೆ ಹೋಗಲು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಇದೀಗ ಆ ಆಸೆಯನ್ನು ಜೋಡಿ ಮನಾಲಿಗೆ ಹೋಗಿ ತೀರಿಸಿಕೊಂಡಿದೆ. ಇದಾಗಲೇ ದಂಪತಿ ಮನಾಲಿಯ ಹಲವಾರು ಸ್ಥಳಗಳ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.
ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್