ಬ್ರೇನ್ ವಾಷ್ ಮಾಡಿ, ಮಂತ್ರ ಮಾಡ್ಸಿ ವಶ ಮಾಡಿಕೊಂಡಳು: ಅಮೃತಧಾರೆ ಅಪರ್ಣಾ ಪತಿ ಹೇಳಿದ್ದೇನು?

By Suchethana D  |  First Published Nov 21, 2024, 9:53 AM IST

ಅಮೃತಧಾರೆಯ ಅಪರ್ಣಾ ಉರ್ಫ್ ಸ್ವಾತಿ ಅವರ ಪತಿ ಅನಿಲ್ ಮಾತನಾಡಿದ್ದು, ತಮ್ಮ ಕುತೂಹಲದ ಮದುವೆಯ ಪ್ರಸಂಗ ವಿವರಿಸಿದ್ದಾರೆ. ಸಂದರ್ಶನದಲ್ಲಿ ಅವರು ಹೇಳಿದ್ದೇನು?  
 


ಅಮೃತಧಾರೆಯ ಅಪರ್ಣಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪತಿ ಆನಂದ್‌ಗೆ ತಕ್ಕ ಪತ್ನಿಯಾಗಿ, ಪತಿಯ ಮೇಲೆ ಸದಾ ಕಣ್ಣು ಇಡುತ್ತಲೇ ಎಲ್ಲರ ಮನಸ್ಸನ್ನೂ ಗೆದ್ದವು ಅಪರ್ಣಾ. ಇಂತಿಪ್ಪ ಅಪರ್ಣಾ ಅವರ ರಿಯಲ್ ಹೆಸರು ಸ್ವಾತಿ, ಪತಿಯ ಹೆಸರು ಅನಿಲ್. ಇವರ ಮದುವೆಯ ಕಥೆಯೇ ಕುತೂಹಲವಾಗಿದೆ. ಅಕ್ಕ-ಪಕ್ಕದ ಮನೆಯವರಾಗಿದ್ದ ಇವರುಲವ್ ಮಾಡಿ ಮದ್ವೆಯಾಗಿದ್ದಾರೆ. ಈಗಲೂ ತಮಾಷೆಯಾಗಿಯೇ, ಒಬ್ಬರ ಕಾಲು ಒಬ್ಬರು ಎಳೆಯುತ್ತಲೇ ಮಾತನಾಡುತ್ತಾರೆ. ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಸಂದರ್ಶನದಲ್ಲಿ ಅನಿಲ್ ಮತ್ತು ಸ್ವಾತಿ ಕೆಲವೊಂದು ತಮಾಷೆ ಹಾಗೂ ಗಂಭೀರದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. 

ನಾವು ಶಿಫ್ಟ್ ಆಗಿ ಇವಳ ಮನೆ ಪಕ್ಕಕ್ಕೇ ಬಂದಿದ್ವಿ. ಅಲ್ಲಿ ನನ್ನನ್ನು ನೋಡಿದ್ಲು, ಹುಡುಗ ಸಕತ್ ಇದ್ದಾನೆ, ಇನ್ನೋಸೆಂಟ್ ಇದ್ದಾನೆ ಅಂತ ಸ್ಕೆಚ್ ಹಾಕಿದ್ರು, ಇವರೇ ಬಂದು ಪ್ರಪೋಸ್ ಮಾಡಿದ್ಲು ಎಂದು ತಮಾಷೆಯಾಗಿ ಅನಿಲ್ ಹೇಳಿದ್ರೆ, ಸ್ವಾತಿ, ಹಾಗೇನೂ ಇಲ್ಲ. ಅವರದ್ದು ಮೂರನೇ ಫ್ಲೋರ್ ಆಗಿತ್ತು, ನಮ್ಮದು ಎರಡನೆಯ ಫ್ಲೋರ್. ಮೇಲಿಂದ ಪೇಪರ್ ಎಸೀತೀದ್ರು, ಸೀಟಿ ಹಾಕ್ತಿದ್ರು, ತರ್ಲೆ ಮಾಡ್ತಿದ್ರು. ಯಾರಪ್ಪಾ ಇದು ಎಂದು ನೋಡಿದ್ರೆ ಮುಖ ಕಾಣಿಸ್ತಾ ಇರಲಿಲ್ಲ. ಆಗ ತಾನೇ ತಿರುಪತಿಗೆ ಹೋಗಿ ಬಂದು ತಲೆ ಬೋಳ ಮಾಡಿಸಿಕೊಂಡಿದ್ರು. ಬೋಳ ತಲೆಮಾಡ್ತಾ ಕಾಣಿಸ್ತಾ ಇತ್ತು, ಮುಖ ಕಾಣಿಸ್ತಾ ಇರಲಿಲ್ಲ ಎಂದಿದ್ದಾರೆ. ಆಗ ಕೂಡಲೇ ಅನಿಲ್, ನೋಡಿ ಬೋಳ ತಲೆ ನೋಡಿನೇ ಇವಳು ಪ್ರಪೋಸ್ ಮಾಡಿದ್ಲು. ಅಷ್ಟಕ್ಕೂ ನಾನು ಬೋಳು ತಲೆ ಮಾಡಿಸಿಕೊಂಡಿದ್ದು ಏಕೆ ಅಂದ್ರೆ, ಮುಂದೊAದು ದಿನ ತಲೆಗೂಲು ಉದುರಿ ಹೋದ್ರೆ ಹೇಗೆ ಕಾಣಿಸ್ತೀನಿ ಎಂದು ಇವಳಿಗೆ ಗೊತ್ತಾಗಬೇಕಲ್ಲಾ, ಅದಕ್ಕೆ ಎಂದು ಹಾಸ್ಯ ಮಾಡಿದ್ದಾರೆ. 

Tap to resize

Latest Videos

undefined

ಎಂಟು ಮದುವೆಯಾದ ಕಿರುತೆರೆ ಅಣ್ಣಯ್ಯ ನಟಿ ನಿಶಾ ರವಿಕೃಷ್ಣನ್​! ಈಕೆಯ ಸ್ಟೋರಿ ಕೇಳಿ...

ನೀವು ತುಂಬಾ ಸುಂದರ ಆಗಿದ್ದೀರಾ ಅಂತ ನನ್ನ ಗೆಳೆತಿಯರೆಲ್ಲಾ ಹೇಳ್ತಾರೆ, ಅನಿಲ್ ಅವ್ರನ್ನೇ ಯಾಕೆ ಮದ್ವೆಯಾಗಬಾರದು ಎಂದು ಕೇಳ್ತಾರೆ... ಹಾಗೆ ಹೀಗೆ ಹೇಳಿ ನನ್ನ ಬ್ರೇನ್ ವಾಷ್ ಮಾಡಿ ಮದ್ವೆಯಾದ್ರು ಎಂದಿದ್ದಾರೆ. ಹೀಗೆ ತಮ್ಮ ಜೀವನದ ಹಲವು ವಿಷಯಗಳನ್ನು ದಂಪತಿ ತಮಾಷೆ ತಮಾಷೆಯಾಗಿಯೇ ಹೇಳಿದ್ದಾರೆ. ಕೊನೆಗೆ, ಡಿಗ್ರಿಯಲ್ಲಿ ಇರುವಾಗ ಒಮ್ಮೆ ತಾವು ಎಚ್ಚರ ತಪ್ಪಿ ಬಿದ್ದಾಗ, ಆಸ್ಪತ್ರೆಗೆ ದಾಖಲು ಮಾಡಿದ್ದನ್ನು ನೆನಪಿಸಿಕೊಂಡ ಸ್ವಾತಿ, ಆ ಸಮಯದಲ್ಲಿ ನನ್ನ ಅಮ್ಮ ಬಂದಿದ್ರು. ಆದ್ರೆ ಅವರ ಬಳಿ ಹಣ ಇರಲಿಲ್ಲ. ಆಗ ಅನಿಲ್ ಅವರ ತಾಯಿಯೇ ಬಂದು ಕಿವಿಯೋಲೆ ಕೊಟ್ಟು ಹಣದ ವ್ಯವಸ್ಥೆ ಮಾಡಿಸಿದ್ರು ಎಂದಿದ್ದಾರೆ. ಇದೇ ವೇಳೆ, ಸಿಂಪಲ್ ಆಗಿ ಮದ್ವೆಯಾಗಬೇಕು ಎಂದುಕೊAಡಿದ್ವಿ. ನೂರೋ, ಇನ್ನೂರೋ ಜನ ಅಂತಮಾಡಿದ್ರೆ, ನಾನು ಅಮೃತವರ್ಷಿಣಿಯಲ್ಲಿ ನಟಿಸುತ್ತಿದ್ದರಿಂದ ನಮ್ಮ ಮದುವೆಗೆ ಸೀರಿಯಲ್ ನಟ-ನಟಿಯರು ಬರುತ್ತಾರೆ ಎಂದು ಸಾವಿರಾರು ಜನ ಬಂದು ಬಿಟ್ರು. ವೇದಿಕೆ ಮೇಲೆಇದ್ದ ನಮಗೆ ಊಟದ್ದೇ ಚಿಂತೆಯಾಗಿ ಹೋಯ್ತು. ಕೊನೆಗೂ ಹೇಗೋ ಅಡ್ಜಸ್ಟ್ ಮಾಡಿಕೊಂಡ್ವಿ ಎಂದಿದ್ದಾರೆ ಸ್ವಾತಿ. 

2012ರಲ್ಲಿ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ, ಇಲ್ಲಿಗೆ ಬಂದು 12 ವರ್ಷಗಳು ಕಳೆದಿವೆ. ಈ ರಂಗಕ್ಕೆ ಬರಬೇಕು ಅಂತ ಅಂದುಕೊಂಡಿರಲಿಲ್ಲ. ಎಂಬಿಎ ಮಾಡಿ ನಾನು ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಬೆಳಗ್ಗೆ ಶಿಫ್ಟ್ ಇದ್ದುದದಿಂದ ಸಂಜೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ಕಾಂಟ್ಯಾಕ್ಟ್ ಆಗಿ ನನಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು ಎಂದು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ ಹೇಳಿದ್ದರು. ಅನಿಲ್ ಸಹ ನಟರಾಗಿದ್ದು, ಮೊದಲೇ ನಟನೆಯತ್ತ ಒಲವಿದ್ದ ಅನಿಲ್ ಅವರಿಗೆ ಈ ಕ್ಷೇತ್ರದಲ್ಲಿ ಕಾಲಿಡುವಂತೆ ಮಾಡಿದ್ದೆ ಪತ್ನಿ ಸ್ವಾತಿ. ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಸೂಪರ್ ಜೋಡಿ (Super Jodi) ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ವಿನ್ನರ್ ಆಗಿದ್ದರು. ಸದ್ಯ ಸ್ವಾತಿ ತಮಿಳು, ತೆಲುಗು ಕನ್ನಡ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದರೆ. ಬ್ಯುಸಿನೆಸ್ ಮ್ಯಾನ್ ಆಗಿರುವ ಅನಿಲ್ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.  

ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

click me!