ರಿಯಲ್​ ಗಂಡನ ಜೊತೆ ಲಾಕ್​ ಆದ ಭೂಮಿಕಾ: ಗೌತಮ್​ ಜೊತೆ ಯಾವಾಗ ಲಾಕಾಗೋದು ಕೇಳ್ತಿದ್ದಾರೆ ಫ್ಯಾನ್ಸ್​!

By Suvarna News  |  First Published Jan 26, 2024, 12:16 PM IST

ಅಮೃತಧಾರೆ ಭೂಮಿಕಾ, ರಿಯಲ್​ ಪತಿ ಕೃಷ್ಣ ಜೊತೆ ಭೀಮ ಚಿತ್ರದ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಫ್ಯಾನ್ಸ್​ ಏನು ಹೇಳುತ್ತಿದ್ದಾರೆ ಕೇಳಿ... 
 


ಭೂಮಿಕಾ (Bhoomika) ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರೋ ಛಾಯಾ ಸಿಂಗ್​ ಆಗಾಗ್ಗೆ ಕೆಲವೊಂದು ರೀಲ್ಸ್​ ಮಾಡುತ್ತಿರುತ್ತಾರೆ, ಕೆಲವೊಂದು ಮಾಹಿತಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. 

ಇದೀಗ ಅವರು ರಿಯಲ್​ ಲೈಫ್​ ಪತಿ ಜೊತೆ ರೀಲ್ಸ್​ ಮಾಡಿದ್ದಾರೆ. ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ಭೀಮ ಚಿತ್ರದ ಸೈಕಾಗೋದೆ ಸೈಕಾದೆ ನೀನು ತುಂಬಾ ಲೈಕಾದೆ  ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇಬ್ಬರೂ ಸಕತ್​ ಆಗಿ ಸ್ಟೆಪ್​ ಹಾಕಿದ್ದು ಫ್ಯಾನ್ಸ್​ ಹಾರ್ಟ್​ ಎಮೋಜಿ ಹಾಕುತ್ತಿದ್ದಾರೆ. ಇನ್ನು ಕೆಲವರು ನಟಿಯ ಕಾಲೆಳೆಯುತ್ತಿದ್ದು, ಗೌತಮ್​ ಜೊತೆ ಬೇಗ ಹೀಗೆ ಲಾಕಾಗೋಗಿ, ಸೈಕಾದೆ, ಲೈಕಾದೆ ಅಂತೆಲ್ಲಾ ಹಾಡು ಹೇಳಿ ಅಂತಿದ್ದಾರೆ. 

Tap to resize

Latest Videos

ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್​: ನಟಿ ಹೇಳಿದ್ದೇನು?

ಅಂದಹಾಗೆ,  ಭೂಮಿಕಾ ಅವರ  ರಿಯಲ್​ ಲೈಫ್​ ಪತಿಯ ಹೆಸರು ಕೃಷ್ಣ. ಭೂಮಿಕಾ ಹೆಸರು ಛಾಯಾ ಸಿಂಗ್​.  ಛಾಯಾ ಅವರು ಆಗ್ಗಾಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ  ಪತಿಯ ಜೊತೆಗಿನ  ಫೋಟೋ, ವಿಡಿಯೋ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.  ಇವರ ಮದುವೆಯಾಗಿ 11 ವರ್ಷಗಳಾಗಿವೆ. ನಿಜ ಜೀವನದಲ್ಲಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 

'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು. 

ಝುಮಕ ಝುಮಕ ಎಂದು ಸ್ಟೆಪ್ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಪ್ರೆಗ್ನೆಂಟ್​ ಹೀಗೆಲ್ಲಾ ಮಾಡ್ಬಾರ್ದು ಎಂದ ಫ್ಯಾನ್ಸ್​

ಅಮೃತಧಾರೆ ಸೀರಿಯಲ್​ ಇದೀಗ ಮಹತ್ವದ ಘಟ್ಟ ತಲುಪಿದ್ದು, ಪತಿಯ ಮೇಲೆ ಭೂಮಿಕಾಗೆ ಲವ್​ ಆಗಲು ಶುರುವಾಗಿದೆ. ಆದರೆ ಗೌತಮ್​ಗೆ ಇದೆಲ್ಲಾ ಅರ್ಥ ಆಗುತ್ತಿಲ್ಲ. ಪ್ರೀತಿ ಮಾಡ್ತಿರೋ ವಿಷಯವನ್ನು ಹೇಗೆ ಪತಿಗೆ ಹೇಳಬೇಕು ಅನ್ನೋ ತಳಮಳದಲ್ಲಿ ಭೂಮಿಕಾ ಇದ್ದಾಳೆ. ಮುಂದೆ ಇವರ ಲವ್​ ಸ್ಟೋರಿ ಏನಾಗುತ್ತದೋ ನೋಡಬೇಕಿದೆ. 

click me!