KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

Published : Oct 10, 2023, 01:19 PM IST
KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ಸಾರಾಂಶ

ಕೌನ್​ ಬನೇಗಾ ಕರೋರ್​ಪತಿ ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​. ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ.  

ಅಮಿತಾಭ್​ ಬಚ್ಚನ್​... (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. 

ಇದೀಗ ಕೌನ್​ ಬನೇಗಾ ಕರೋರ್​ಪತಿ (KBC)ಯ 15ನೇ ಸೀಸನ್​ನಲ್ಲಿ ಅದೇ ಉತ್ಸಾಹದಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆ ಅಂದರೆ ಅಕ್ಟೋಬರ್​ 11ರಂದು 81ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಅಮಿತಾಭ್​ ಬಚ್ಚನ್​. ಈ ಸಂದರ್ಭದಲ್ಲಿ ಕೌನ್​ ಬನೇಗಾ ಕರೋರ್​ಪತಿ ವೇದಿಕೆಯಲ್ಲಿಯೇ ಅಮಿತಾಭ್​ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಇದು ಖುಷಿಯ ಕಣ್ಣೀರು. ಅವರ ಹುಟ್ಟುಹಬ್ಬದ ಪ್ರಯುಕ್ತ ಕೌನ್‌ ಬನೇಗಾ ಕರೋಡ್‌ಪತಿ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದ್ದು, ಇದರಲ್ಲಿ ಅವರು ಜನರು ತಮಗೆ ತೋರಿಸುವ ಅಪಾರ ಅಭಿಮಾನ ಕಂಡು ಭಾವುಕರಾದರು. ಸೀಟಿನಿಂದ ಎದ್ದು ಹೋದರು.

ಮರು ಜನ್ಮವಿದ್ದರೆ ನನಗಿರುವ ಒಂದೇ ಆಸೆ ಎಂದರೆ... 80 ವರ್ಷದ ಅಮಿತಾಭ್ ಹೇಳಿದ್ದೇನು?

ಇದರ  ಪ್ರಮೋ  ಬಿಡುಗಡೆಯಾಗಿದ್ದು, ಇದರಲ್ಲಿ ಅಮಿತಾಬ್‌ ಭಾವನಾತ್ಮಕವಾಗಿರುವುದು ಕಾಣಿಸುತ್ತದೆ. ಹುಟ್ಟುಹಬ್ಬದ ನಿಮಿತ್ತ ಅಮಿತಾಭ್​ ಅವರಿಗೆ ದೊಡ್ಡ ಸರ್​ಪ್ರೈಸ್​ ಮಾಡಲಾಗಿದೆ. ಅದನ್ನು ನೋಡಿ ಭಾವುಕರಾದ ನಟ, ಅಳುತ್ತಲೇ, ಇನ್ನೆಷ್ಟು ಎಂದು ನನ್ನನ್ನು ಅಳಿಸುವಿರಿ ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ಇಷ್ಟು ದಿನ ಇಲ್ಲಿ ಕುಳಿತವರಿಗೆ ಕಣ್ಣೀರು ಒರೆಸಿಕೊಳ್ಳಲು ನಾನು ಟಿಶ್ಯೂ ಕೊಡುತ್ತಿದ್ದೆ. ಈಗ ನನ್ನನ್ನೇ ಅಳಿಸುತ್ತಿದ್ದೀರಲ್ಲ ಎಂದಿರುವ ನಟ, ತಮ್ಮ ಮೇಲೆ ಅಸಂಖ್ಯ ಅಭಿಮಾನಿಗಳು ಇಟ್ಟಿರುವ ಪ್ರೀತಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹುಟ್ಟುಹಬ್ಬ ಆಯೋಜಿಸಿದ ಕೆಬಿಸಿ ತಂಡಕ್ಕೆ ಅವರು ಧನ್ಯವಾದ ತಿಳಿಸಿದರು.  "ಈ ಮೂಲಕ ನನ್ನ ಹುಟ್ಟುಹಬ್ಬ ಇಲ್ಲಿ ಸುಂದರವಾಗಿ ಆಚರಿಸಲ್ಪಟ್ಟಿತ್ತು" ಎಂದು ನಟ ಹೇಳಿದ್ದಾರೆ.  

ಅಷ್ಟಕ್ಕೂ ಈ ವಿಶೇಷ ಕಾರ್ಯಕ್ರಮದಲ್ಲಿ ಅಮಿತಾಭ್​ ಅವರ ಮಗ ಅಭಿಷೇಕ್ ಮತ್ತು ಪತ್ನಿ ಜಯಾ ಬಚ್ಚನ್​ ಅವರು ಸರ್​ಪ್ರೈಸ್​ ವಿಸಿಟ್​ ನೀಡಲಿದ್ದಾರೆ. ಮಾತ್ರವಲ್ಲದೇ,  ಕಾರ್ಯಕ್ರಮದಲ್ಲಿ ಜನಪ್ರಿಯ ಸರೋದ್ ವಾದಕ ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಪ್ರದರ್ಶನ ಇರಲಿದೆ. ಚಿರಂಜಿವಿ, ಅನುಪಮ್‌ ಖೇರ್‌, ವಿದ್ಯಾಬಾಲನ್‌, ವಿಕ್ಕಿ ಕೌಶಲ್‌, ಆರ್‌ ಮಾಧವನ್‌, ಬೊಮನ್‌ ಇರಾನಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಅಮಿತಾಬ್‌ ಬಚ್ಚನ್‌ಗೆ ವಿಶೇಷ ವಿಡಿಯೋ ಮೂಲಕ ವಿಶ್‌ ಮಾಡಲಿದ್ದಾರೆ. ಇದನ್ನೆಲ್ಲಾ ನೋಡಿ ಬಿಗ್​-ಬಿ ಕಣ್ಣೀರು ಹಾಕಿದ್ದಾರೆ. 
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?