ಬಿಗ್​ಬಾಸ್​ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್​ ನನಗೆ ಸಿಕ್ಕಿದೆ: ಲೈವ್​ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ

Published : Dec 30, 2024, 09:03 PM ISTUpdated : Dec 31, 2024, 09:44 AM IST
ಬಿಗ್​ಬಾಸ್​ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್​ ನನಗೆ ಸಿಕ್ಕಿದೆ: ಲೈವ್​ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ

ಸಾರಾಂಶ

13 ವಾರಗಳ ಬಿಗ್‌ಬಾಸ್‌ ಪಯಣ ಮುಗಿಸಿ, ಐಶ್ವರ್ಯ ಸಿಂಧೋಗಿ ಹೊರಬಂದಿದ್ದಾರೆ. ಬಿಗ್‌ಬಾಸ್‌ ಅವರನ್ನು "ಮಗಳೇ" ಎಂದು ಸಂಬೋಧಿಸಿ ಭಾವುಕ ವಿದಾಯ ನೀಡಿದ್ದು ವಿಶೇಷವಾಗಿತ್ತು. ಹೊರಬಂದ ನಂತರ ವೀಕ್ಷಕರ ಪ್ರೀತಿಗೆ ಚಿರಋಣಿ ಎಂದ ಐಶ್ವರ್ಯ, ಬಿಗ್‌ಬಾಸ್‌ ಮನೆಯ ದಿನಚರಿ, ಸಲೂನ್‌ ಸೌಲಭ್ಯಗಳ ಕೊರತೆ ಹಾಗೂ ತಮ್ಮ ಆಟದಲ್ಲಿನ ದೌರ್ಬಲ್ಯಗಳನ್ನು ಹಂಚಿಕೊಂಡರು. ಬಿಗ್‌ಬಾಸ್‌ ಮನೆಯನ್ನು ದೇವಸ್ಥಾನಕ್ಕೆ ಹೋಲಿಸಿದ ಅವರು, ಸುದೀಪ್‌ ಅವರನ್ನು ದೇವರಿಗೆ ಹೋಲಿಸಿದರು.

ಡೇಂಜರ್​ ಜೋನ್​ಲ್ಲಿ ಐಶ್ವರ್ಯಾ ಸಿಂಧೋಗಿ ಮತ್ತು ಮೋಕ್ಷಿತಾ ಅವರ ಪೈಕಿ ಐಶ್ವರ್ಯಾ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಬೈ ಹೇಳುವ ಮೂಲಕ, ಭಾವುಕ ವಿದಾಯ ನೀಡಿದ್ದಾರೆ.  ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.  'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಬರೆದಿದ್ದರು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದಾರೆ.

ಇದೀಗ ಅವರು ನೇರಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಸಂವಾದ ನಡೆಸಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಹೊರಗಡೆ ಏನು ನಡೆಯುತ್ತೆ ಎನ್ನುವುದು ಗೊತ್ತಿರುವುದಿಲ್ಲ. ಆದರೆ ಹೊರಗಡೆ ಬಂದು ನನ್ನ ಬಗೆಗಿನ ಕಮೆಂಟ್ಸ್​ ನೋಡಿ ಭಾವುಕಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ತುಂಬಾ ಪ್ರೀತಿ ಕೊಟ್ಟಿದ್ದೀರಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಬಿಗ್​ಬಾಸ್​ ಅನ್ನು ತುಂಬಾ ಮಿಸ್​ ಮಾಡಿಕೊಳ್ತಿದ್ದೇನೆ. ಆದರೆ ಬಿಗ್​ಬಾಸ್​​ ಇತಿಹಾಸದಲ್ಲಿ ಯಾರಿಗೂ ಸಿಗದ ಗಿಫ್ಟ್​ ನನಗೆ ಸಿಕ್ಕಿದೆ ಎನ್ನುತ್ತಲೇ ಅದರ ಬಗ್ಗೆ ಐಶ್ವರ್ಯ ಮಾತನಾಡಿದ್ದಾರೆ. ಅದು ನನಗೆ ಸಿಕ್ಕಿರುವ ಭಾವುಕ ವಿದಾಯ.  ಬಿಗ್​ಬಾಸ್​ ಸ್ವತಃ ಮಾತನಾಡಿ  ತವರಿನಿಂದ ಹೋಗುವ ರೀತಿಯಲ್ಲಿ ಮನೆಮಗಳಿಗೆ ಹೇಳುವಂತೆ ಹೋಗಿ ಬಾ ಮಗಳೇ ಎಂದಿದ್ದಾರೆ. ಇದು ಯಾರಿಗೂ ಸಿಗದ ಗಿಫ್ಟ್​. ಇದು ನನಗೆ  ಖುಷಿ ಕೊಟ್ಟಿದೆ. ಬಿಗ್​ಬಾಸ್​ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ ಎಂದಿದ್ದಾರೆ.

ಉಪೇಂದ್ರ ಇರೋ ಕಡೆ ಬಿಗ್​ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್​ ಮಾತು ಕೇಳಿ...
 
ಇದೇ ವೇಳೆ ತಮ್ಮ ದಿನನಿತ್ಯದ  ಜೀವನ ಬಿಗ್​ಬಾಸ್​ನಲ್ಲಿ ಹೇಗಿತ್ತು ಎನ್ನುವುದನ್ನು ಐಶ್ವರ್ಯ ಹೇಳಿಕೊಂಡಿದ್ದಾರೆ.  ಬಿಗ್​ಬಾಸ್​ ಸ್ಪರ್ಧಿಗಳು ಏಳಲು  ಲೌಡ್ ಮ್ಯೂಸಿಕ್ ಹಾಕ್ತಿರೋದು ನಿಮಗೆಲ್ಲಾ ಗೊತ್ತಿರೋದೇ. ಮೊದಲಿಗೆ ಎದ್ದ ತಕ್ಷಣ  ಡಾನ್ಸ್​ ಮಾಡ್ತಾ ಇದ್ವಿ.ಅದರಲ್ಲಿ ಮುಂಚೂಣಿಯಲ್ಲಿ ಇದ್ದವಳೇ ನಾನು.  ಅದನ್ನು ಮಿಸ್​ ಮಾಡಿಕೊಳ್ತಾ ಇದ್ದೇನೆ. ಡಾನ್ಸ್​ ಮುಗಿದ ಮೇಲೆ  ಬಿಸಿನೀರು ಕುಡೀತಾ ಇದ್ದೆ. ಫ್ರೆಷಪ್​ ಆಗಿ ಮುಂದಿನ ಕೆಲಸ ಮಾಡುತ್ತಿದ್ದೆ. ನನಗೆ ಅಂದು ಕೊಟ್ಟ ಟಾಸ್ಕ್​ ಅನ್ನು ಹೇಗೆ ಮಾಡಬೇಕು ಎನ್ನುವ ಬಗ್ಗೆ ಒಂದು ಐಡಿಯಾ ಮಾಡಿಕೊಂಡು ಎಲ್ಲವನ್ನೂ ವಿಂಗಡಿಸಿ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ.

ಇದೇ ವೇಳೆ,  ಬಿಗ್​ಬಾಸ್​ ಯಾವುದೇ ಸಲೂನ್​ ಇರಲಿಲ್ಲ ಎಂಬ ಬಗ್ಗೆಯೂ ತಿಳಿಸಿರುವ ಐಶ್ವರ್ಯ, ಐಬ್ರೋ ನಾವೇ ಮಾಡಿಕೊಳ್ಳಬೇಕಿತ್ತು. ಫೇಷಿಯಲ್​ ಬೇಕು ಅಂತ ಇದ್ರೆ ಪರಸ್ಪರ ಮಾಡಿಕೊಳ್ಳಬೇಕು. ವೀಕೆಂಡ್​ನಲ್ಲಿಯೂ ನಾವೇ ಮೇಕಪ್​ ಮಾಡಿಕೊಳ್ಳಬೇಕಿತ್ತು.  ಆದರೂ ನನ್ನ ಡ್ರೆಸ್​ ಸೆನ್ಸ್​ಗೆ ನೀವೆಲ್ಲಾ ಹೊಗಳಿದ್ದು ತುಂಬಾ ಖುಷಿ ಕೊಟ್ಟಿದೆ ಎಂದಿದ್ದಾರೆ ಐಶ್ವರ್ಯ. ಇನ್ನು ಅಡುಗೆ ಮನೆಯಲ್ಲಿ ಎಲ್ಲವೂ ಲಿಮಿಡೆಡ್​ ಆಗಿ ಇರುತ್ತಿತ್ತು. ಒಮ್ಮೊಮ್ಮೆ ಬೇಳೆ ಇರುತ್ತಿರಲಿಲ್ಲ. ತರಕಾರಿಗಳೂ ಸ್ವಲ್ಪವೇ ಇರುತ್ತಿತ್ತು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಿ ಮಾಡಬೇಕಿರುತ್ತದೆ ಎಂದಿದ್ದಾರೆ. ಇನ್ನು, ಬಿಗ್​ಬಾಸ್​ನಿಂದ ಹೊಕ್ಕೆ ಬರುವ ಸಮಯದಲ್ಲಿ ಐಶ್ವರ್ಯ ಅವರು, ಸುದೀಪ್​ ಜೊತೆ ಬಿಗ್​ಬಾಸ್​ನಲ್ಲಿ ತಮ್ಮ ವೀಕ್​ ಪಾಯಿಂಟ್​ ಬಗ್ಗೆ ಮಾತನಾಡಿದ್ದರು.  ‘ಆರಂಭದಲ್ಲಿ ಇದ್ದ ಎನರ್ಜಿ ಕ್ರಮೇಣ ನನ್ನಲ್ಲಿ ಕಡಿಮೆ ಆಗುತ್ತಾ ಬಂದಿರುವುದು ತಿಳಿದಿದೆ. ಅದೇ ತಪ್ಪಾಯಿತು ಎನ್ನುವುದು ನಾನು ಒಪ್ಪಿಕೊಳ್ಳುತ್ತೇನೆ. ಬಿಗ್​ಬಾಸ್​ ನನ್ನ ಮನೆಯೇ ಅನಿಸಿತು. ನನಗೆ ಒಂದು ಫ್ಯಾಮಿಲಿ ಸಿಕ್ಕಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಕಳೆದ ಮೂರು   ತಿಂಗಳು ನಾನು ಬಿಗ್​ ಬಾಸ್ ಮನೆಯಲ್ಲಿ ಬದುಕಿದ್ದಕ್ಕೆ ನನ್ನ ಜೀವನ ಸಾರ್ಥಕ ಎನ್ನಿಸುತ್ತಿದೆ.  ಬಿಗ್ ಬಾಸ್ ಮನೆ ನನಗೆ ದೇವಸ್ಥಾನ. ಅದರಲ್ಲಿ ಸುದೀಪ್ ಅವರು ದೇವರ ರೀತಿ. ನನ್ನನ್ನು ಇಷ್ಟಪಡುವ ಕರ್ನಾಟಕದ ಜನತೆಗೆ ಧನ್ಯವಾದ. ಯಾರೂ ಇಲ್ಲ ಎಂಬ ಫೀಲಿಂಗ್ ಬಂದಿಲ್ಲ. ಇನ್ಮುಂದೆ ಬರುವುದೂ ಇಲ್ಲ’ ಎಂದು ಐಶ್ವರ್ಯಾ ಹೇಳಿದ್ದರು. 

ಜೀವನದುದ್ದಕ್ಕೂ ಚಿನ್ನದೊಡವೆ ಧರಿಸದ ಬಿಗ್​ಬಾಸ್​ ಯಮುನಾ: ಇದರ ಹಿಂದಿರೋದು ಊಹಿಸಲಾಗದ ರೋಚಕ ಘಟನೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌