
ಸೀತಾರಾಮ ಸೀರಿಯಲ್ (Seetharama Serial) ಮುಗಿಯುತ್ತಿದ್ದಂತೆ ನಟಿ ವೈಷ್ಣವಿ ಗೌಡ (Vaishnavi Gowda) ವಧುವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಸದ್ದಿಲ್ಲದೆ ಅವರ ಮದುವೆ ಶಾಸ್ತ್ರ ಶುರುವಾಗಿದೆ. ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅರಿಶಿನ ಶಾಸ್ತ್ರ ಸಡಗರದಿಂದ ನಡೆದಿದೆ. ಮನೆಯವರ ಸಮ್ಮುಖದಲ್ಲಿ ವೈಷ್ಣವಿ ಮೈಗೆ ಅರಿಶಿನದ ಸ್ಪರ್ಶವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್ ಆಗ್ತಿದೆ. ಸೀರೆಯುಟ್ಟು, ಕೊರಳಿಗೆ ಮಾಲೆ ಹಾಕಿ ಕುಳಿತಿರುವ ವೈಷ್ಣವಿ ಗೌಡಗೆ, ಕುಟುಂಬಸ್ಥರು ಅರಿಶಿನ ಹಚ್ಚುತ್ತಿದ್ದಾರೆ. ಮನೆಯವರ ಜೊತೆ ಫೋಟೋಗಳಿಗೆ ವೈಷ್ಣವಿ ಫೋಸ್ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ವೈಷ್ಣವಿ ಮದುವೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಮನೆಯಿಂದ ಹೊರಗೆ ಬಂದ್ಮೇಲೆ ವೈಷ್ಣವಿಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ಹುಡುಗ ಸರಿ ಇಲ್ಲ ಎನ್ನುವ ಕಾರಣಕ್ಕೆ ಮದುವೆ ಮುರಿದು ಬಿದ್ದಿತ್ತು. ಈ ನೋವಿನಿಂದ ಕುಟುಂಬಸ್ಥರು ಹೊರಗೆ ಬಂದ್ದಿದ್ರು. ವೈಷ್ಣವಿ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ರು. ಈ ವರ್ಷ, ವೈಷ್ಣವಿ ತಮ್ಮ ಫ್ಯಾನ್ಸ್ ಗೆ ಮತ್ತೆ ಖುಷಿ ಸುದ್ದಿ ನೀಡಲು ಸಿದ್ಧವಾಗಿದ್ದಾರೆ. ವೈಷ್ಣವಿ ಗೌಡ ಏಪ್ರಿಲ್ 14 ರಂದು ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ವೈಷ್ಣವಿ ಶೀಘ್ರವೇ ಮದುವೆ ಆಗ್ತಾರೆ ಅನ್ನೋದು ಫ್ಯಾನ್ಸ್ ಗೆ ಗೊತ್ತಿತ್ತಾದ್ರೂ ಇಷ್ಟು ಬೇಗ ಮದುವೆ ಆಗ್ತಾರೆ ಎನ್ನುವ ಕಲ್ಪನೆ ಇರ್ಲಿಲ್ಲ. ಈಗ ವೈಷ್ಣವಿ ಅರಿಶಿನ ಶಾಸ್ತ್ರದ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಜೊತೆ ಖುಷಿಯಾಗಿದ್ದಾರೆ.
ಏರ್ ಫೋರ್ಸ್ನಲ್ಲಿ ಕೆಲಸ ಮಾಡ್ತಿರುವ ಅನುಕೂಲ್ ಮಿಶ್ರಾ ಅವರನ್ನು ವೈಷ್ಣವಿ ಕೈ ಹಿಡಿಯಲಿದ್ದಾರೆ. ಸದ್ದಿಲ್ಲದೆ ಅವರ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ಅನುರಾಗ್ ಮಿಶ್ರಾ ಜೊತೆ ಉಂಗುರ ಬದಲಿಸಿಕೊಂಡಿದ್ದ ವೈಷ್ಣವಿ, ಡಾನ್ಸ್ ಮಾಡಿ, ಹಿಂದಿಯಲ್ಲಿ ಪ್ರಪೋಸ್ ಮಾಡಿದ್ದರು. ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈಷ್ಣವಿ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಅನುಕೂಲ್ ಮಿಶ್ರಾ, ಏರ್ ಪೋರ್ಸ್ನಲ್ಲಿ ಕೆಲ್ಸ ಮಾಡ್ತಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ವೈಷ್ಣವಿ ನೀಡಿದ್ದರು. ವೈಷ್ಣವಿ – ಅನುರಾಗ್ ಲವ್ ಮ್ಯಾರೇಜ್ ಮಾಡಿಕೊಳ್ತಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಅದಕ್ಕೆ ವೈಷ್ಣವಿ ಗೌಡ ಹಾಗೂ ಅವರ ತಾಯಿ ಭಾನು ಸ್ಪಷ್ಟನೆ ನೀಡಿದ್ದರು. ಇದು ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್ ಮ್ಯಾರೇಜ್ ಎಂದಿದ್ದರು. ಮಗಳ ನಿಶ್ಚಿತಾರ್ಥದ ಖುಷಿಯಲ್ಲಿದ್ದ ತಾಯ ಭಾನು, ಶೀಘ್ರವೇ ಮದುವೆ ಮಾಡ್ತೇವೆ. ಮದುವೆಗೆ ಮೂರು ಮಂಟಪ ನೋಡಿದ್ದು, ಒಂದನ್ನು ಫಿಕ್ಸ್ ಮಾಡ್ತೇವೆ ಎಂದಿದ್ದರು. ಈ ವರ್ಷವೇ ಮದುವೆ ನಡೆಯಲಿದೆ ಎಂದಿದ್ದರು. ಈಗ ಮದುವೆ ಶಾಸ್ತ್ರ ವೈಷ್ಣವಿ ಮನೆಯಲ್ಲಿ ಶುರುವಾಗಿದೆ.
ಅಗ್ನಿಸಾಕ್ಷಿ ಸೀರಿಯಲ್ ನಂತ್ರ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ, ಸದ್ಯ ಸೀತಾರಾಮ ಸೀರಿಯಲ್ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೀತಾರಾಮ ಸೀರಿಯಲ್ ಮುಗಿದಿದ್ದು, ಆದಷ್ಟು ಬೇಗ ಶುಭ ಸುದ್ದಿ ನೀಡ್ತೇನೆ. ಹೊಸ ಪ್ರಾಜೆಕ್ಟ್ ಜೊತೆ ಬರ್ತೇನೆ ಎಂದಿದ್ದ ವೈಷ್ಣವಿ ಈಗ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ.
ಮದುವೆ ಆದ್ಮೇಲೂ ಬಣ್ಣ ಹಚ್ಚುತ್ತಾರಾ ವೈಷ್ಣವಿ ಗೌಡ : ನಿಶ್ಚಿತಾರ್ಥದ ಟೈಂನಲ್ಲಿಯೇ ಈ ಪ್ರಶ್ನೆಗೆ ವೈಷ್ಣವಿ ಉತ್ತರ ನೀಡಿದ್ದಾರೆ. ತನ್ನ ಜೀವ ಇರುವವರೆಗೂ ನಾನು ಇಂಡಸ್ಟ್ರಿಯಲ್ಲಿ ಇರ್ತೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.