
ಸ್ಯಾಂಡಲ್‌ವುಡ್ ನಟಿ, ಕಿರುತೆರೆ ಜನಪ್ರಿಯ ನಿರೂಪಕಿ ಶ್ವೇತಾ ಚಂಗಪ್ಪ ಇಂದು ಪುತ್ರನ ಎರಡನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಪತಿ ಹಾಗೂ ಪುತ್ರನೊಟ್ಟಿಗೆ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ.
'ಹ್ಯಾಪಿ ಬರ್ತಡೇ ಮೈ ಲವ್ ಮೈ ಸನ್ ಜಿಯಾನ್. ನಿನ್ನ ಕ್ಯೂಟ್ ಸ್ಮೈಲ್, ತುಂಟಾಟ ನನ್ನ ವೀಕ್‌ನೆಟ್. ನಿನಗಾಗಿ ನಾನು ಅದೆಷ್ಟೋ ದಿನಗಳು ನಿದ್ರೆ ಮಿಸ್ ಮಾಡಿಕೊಂಡಿರುವೆ, ಹೇಗೆ ರೆಡಿಯಾಗಬೇಕು ಹಾಗೂ ಯಾವುದು ನನ್ನ ನೆಚ್ಚಿನ ಫುಡ್ ಎಂದು ಮರೆತು ಹೋಗಿರುವೆ. ಒಮ್ಮೆ ನಿನ್ನ ತಬ್ಬಿಕೊಂಡರೆ ಎಲ್ಲಾ ಮರೆತು ಹೋಗುವೆ. ನೀನು ಕೊಟ್ಟ ಎರಡು ವರ್ಷದ ಜರ್ನಿ ಬ್ಯೂಟಿಫುಲ್ ಅಗಿದೆ. ಎರಡು ವರ್ಷ ಎಷ್ಟು ಬೇಗ ಮುಗೀತು ಎಂಬುದೇ ಗೊತ್ತಿಲ್ಲ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ಪುತ್ರ ಜಿಯಾನ್‌ಗೂ ಕೂಡ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಈಗಾಗಲೇ ಜಿಯಾನ್ ಸೆಲೆಬ್ರಿಟಿ ಕಿಡ್ ಆಗಿದ್ದು 29 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಶ್ವೇತಾ ಮತ್ತು ಜಿಯಾನ್ ಪ್ಯಾಂಪರ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ ಜಿಯಾನ್ ಮೊದಲ ಕ್ಯಾಮೆರಾ ಎದುರಿಸಿದ ಕ್ಷಣ. ಶ್ವೇತಾ ಜನಪ್ರಿಯತೆ ಪಡೆದಷ್ಟೇ ಪುತ್ರ ಕೂಡ ಜನಪ್ರಿಯತೆ ಪಡೆದಿದ್ದಾರೆ.
ಮಜಾ ಟಾಕೀಸ್ ನಂತರ ಕೊಂಚ ಬ್ರೇಕ್ ತೆಗೆದುಕೊಂಡು ಶ್ವೇತಾ ಇದೀಗ ಯುಟ್ಯೂಬ್ ಚಾನೆಲ್ ತೆರೆದಿದ್ದಾರೆ. ತಮ್ಮ ಬ್ಯಾಗ್‌ನಲ್ಲಿ ಏನಿದೆ, ಮನೆಯಲ್ಲಿ ಸಿಂಪಲ್ ಆಗಿ ಅಡುಗೆ ತಯಾರಿಸುವುದು ಹೇಗೆ ಎಂದೆಲ್ಲಾ ಅಭಿಮಾನಿಗಳಿಗೆ ತೋರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.