ಸುಧಾರಾಣಿ, ಭೂಮಿ ಶೆಟ್ಟಿನಟನೆಯ 'ಬ್ರೇಕ್‌ ದಿ ಸ್ತ್ರೀಯೋಟೈಪ್‌'!

Suvarna News   | Asianet News
Published : Mar 07, 2020, 08:56 AM IST
ಸುಧಾರಾಣಿ, ಭೂಮಿ ಶೆಟ್ಟಿನಟನೆಯ 'ಬ್ರೇಕ್‌ ದಿ ಸ್ತ್ರೀಯೋಟೈಪ್‌'!

ಸಾರಾಂಶ

ಜನಪ್ರಿಯ ನಟಿ ಸುಧಾರಾಣಿ ಈಗ ಸಾಮಾಜಿಕ ಕಾಳಜಿಯ ಕಿರುಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋ ನಿರ್ಮಾಣದ ‘ಬ್ರೇಕ್‌ ದಿ ಸ್ತ್ರೀಯೋ ಟೈಪ್‌’ ಹೆಸರಿನ ಒಂದು ನಿಮಿಷದ ಕಿರುಚಿತ್ರದಲ್ಲಿ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅದು ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8 ರಂದು ಸೋಷಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಲಾಂಚ್‌ ಆಗುತ್ತಿದೆ.

ಇದೇ ಹೆಸರಿನ ಇನ್ನೊಂದು ಕಿರುಚಿತ್ರದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಕಿರುತೆರೆ ನಟಿ ಭೂಮಿ ಶೆಟ್ಟಿಕಾಣಿಸಿಕೊಂಡಿದ್ದಾರೆ. ಅದು ಕೂಡ ಒಂದು ನಿಮಿಷದ ಅವಧಿಯ ಕಿರುಚಿತ್ರ. ಮಾ.8 ರಂದೇ ಸೋಷಲ್‌ ಮೀಡಿಯಾದಲ್ಲಿ ಲಾಂಚ್‌ ಆಗುತ್ತಿದೆ. ಇವೆರೆಡು ಮಹಿಳಾ ದಿನಾಚರಣೆಗಾಗಿಯೇ ಲಾಂಚ್‌ ಆಗುತ್ತಿರುವ ಕಿರುಚಿತ್ರಗಳು ಎನ್ನುವುದು ವಿಶೇಷ. ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋ ಮುಖ್ಯಸ್ಥ ಬಿ.ಎ.ಪುನೀತ್‌ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.

BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?

ಮಹಿಳಾ ದಿನಾಚರಣೆಯ ಅಂಗವಾಗಿಯೇ ಅವರು ಇವೆರಡು ಕಿರುಚಿತ್ರಗಳನ್ನು ನಿರ್ಮಿಸಿ, ಲಾಂಚ್‌ ಮಾಡುತ್ತಿದ್ದು, ಅದಕ್ಕೆ ಮೂಲ ಕಾರಣ ಮಹಿಳೆ ಮತ್ತು ಮಂಗಳಮುಖಿಯರ ಬಗ್ಗೆ ಈಗಲೂ ಇರುವ ತಪ್ಪು ಗ್ರಹಿಕೆ ಎನ್ನುತ್ತಾರವರು. ‘ಸಾಮಾಜಿಕ ವ್ಯವಸ್ಥೆ ಎಷ್ಟೇ ಬದಲಾಗಿದ್ದರೂ ಮಹಿಳೆ ಮತ್ತು ಮಂಗಳಮುಖಿಯರ ಬಗೆಗಿನ ಒಂದಷ್ಟುತಪ್ಪು ಗ್ರಹಿಕೆ ಮಾತ್ರಇನ್ನು ಹೋಗಿಲ್ಲ. ಶುಭ ಸಂದರ್ಭಗಳಿಗೆ ಇಲ್ಲವೇ ಮಂಗಳ ಕಾರ್ಯಗಳಿಗೆ ಇಂಥರವರು ಬರಬಾರದು, ಇಂತಹವರೇ ಬರಬೇಕು ಎನ್ನುವ ಗ್ರಹಿಕೆ ತಪ್ಪು. ಆದರೂ ವ್ಯವಸ್ಥೆ ಅದು ನಿಜವೇ ಎಂಬಂತೆ ಒಪ್ಪಿಕೊಂಡಿದೆ.ಒಂಥರ ಸ್ಟಿರಿಯೋ ಟೈಪ್‌ ಆಗಿದೆ. ಅದನ್ನು ಬ್ರೇಕ್‌ ಮಾಡ್ಬೇಕು ಅಂದಾಗ ನನಗೆ ಹೊಳೆದಿದ್ದು ಈ ತರಹದ ಕಿರುಚಿತ್ರ ನಿರ್ಮಾಣ. ಅದನ್ನು ಜನಪ್ರಿಯ ತಾರೆಯರ ಮೂಲಕವೇ ಹೇಳಬೇಕೆಂದು ಕೊಂಡು, ಸುಧಾರಾಣಿ ಮತ್ತು ಭೂಮಿ ಶೆಟ್ಟಿಅವರನ್ನು ಆಯ್ಕೆ ಮಾಡಿಕೊಂಡೆ. ನಾನಂದುಕೊಂಡ ಕಥಾ ವಿಷಯಕ್ಕೆ ಅವರ ಬೆಂಬಲವೂ ಸಿಕ್ಕಿತು. ಹಾಗಾಗಿ ಅದನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಯಿತು ಎನ್ನುವ ನಂಬಿಕೆಯಿದೆ’ಎನ್ನುತ್ತಾರೆ ಪುನೀತ್‌.

ಸುಧಾರಾಣಿ ಹಾಗೂ ಭೂಮಿ ಶೆಟ್ಟಿಜತೆಗೆ ಇವರೆಡು ಕಿರುಚಿತ್ರಗಳಲ್ಲಿ ಇನ್ನಷ್ಟುಕಲಾವಿದರು ಇದ್ದಾರೆ. ಸದ್ಯಕ್ಕೆ ಅದನ್ನವರು ನಿಗೂಢವಾಗಿಟ್ಟಿದ್ದಾರೆ. ಭಾನುವಾರ ಲಾಂಚ್‌ ಆದಾಗ ಅವೆಲ್ಲ ವಿವರ ಗೊತ್ತಾಗಲಿದೆ ಎನ್ನುತ್ತಾರವರು. ಅವರದೇ ಐಡಿರಿಯಾ ಯುಟ್ಯೂಬ್‌ ಚಾನೆಲ್‌ ಮತ್ತು ಇನ್‌ಸ್ಟ್ರಾಗ್ರಾಮ್‌ ಅಕೌಂಟ್‌ಗಳಲ್ಲಿ ಇದು ಲಾಂಚ್‌ ಆಗುತ್ತಿದೆ. ಇಷ್ಟಕ್ಕೂ ಇದರ ಉದ್ದೇಶ ಏನು? ನನಗೆ ಇದು ಸೋಷಲ್‌ ಮೀಡಿಯಾದಲ್ಲಿ ಲಕ್ಷ ಲಕ್ಷ ಲೈಕ್ಸ್‌ ಪಡೆಯಬೇಕು, ವೈರಲ್‌ ಆಗಬೇಕು ಎನ್ನುವುದಕ್ಕಿಂತ ಒಂದಷ್ಟುಚರ್ಚೆಗೆ ಗ್ರಾಸವಾದರೆ ಸಾಕು. ಇಂತಹ ವಿಷಯಗಳ ಬಗ್ಗೆ ಸಮಾಜ ಒಂದಷ್ಟುಚರ್ಚೆ ನಡೆಸಬೇಕು, ವಾಸ್ತವ ಏನು ಅಂತ ಅರ್ಥ ಮಾಡಿಕೊಳ್ಳಬೇಕು ಎನ್ನುವುದೇ ಇವುಗಳ ನಿರ್ಮಾಣದ ಉದ್ದೇಶ’ ಎನ್ನುತ್ತಾರೆ ಪುನೀತ್‌.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​